ETV Bharat / sitara

ಶೂಟಿಂಗ್​​​​ ಮುಗಿಯುತ್ತಿದ್ದಂತೆ ಕೋಲಾರ ಫೀಲ್ಡ್​​​ನಲ್ಲಿ ಗಿಡಗಳನ್ನು ನೆಡಲು ಒಪ್ಪಿಕೊಂಡ ಕೆಜಿಎಫ್​​​ ಚಿತ್ರತಂಡ..?

ಕೆಜಿಎಫ್ ಚಿತ್ರೀಕರಣ ಮುಗಿಯುತ್ತಿದ್ದಂತೆ ಕೋಲಾರ ಫೀಲ್ಡ್​​​​ನಲ್ಲಿ 500 ಗಿಡಗಳನ್ನು ನೆಡುವುದಾಗಿ ಚಿತ್ರ ನಿರ್ಮಾಪಕರಲ್ಲಿ ಒಬ್ಬರಾದ ಕಾರ್ತಿಕ್ ಗೌಡ ಕೋರ್ಟಿಗೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಯಶ್​
author img

By

Published : Sep 30, 2019, 8:04 PM IST

ಕೋಲಾರ ಫೀಲ್ಡ್​​​ನಲ್ಲಿ ಚಿತ್ರೀಕರಣ ಮಾಡಲು ಕೆಜಿಎಫ್ ಚಿತ್ರತಂಡಕ್ಕೆ ನ್ಯಾಯಾಲಯ ತಡೆ ನೀಡಿದ್ದು, ಇದೀಗ ಮತ್ತೆ ಚಿತ್ರೀಕರಣಕ್ಕೆ ಅನುಮತಿ ನೀಡಿರುವ ಸಂಗತಿ ತಿಳಿದಿರುವ ವಿಷಯ. ಸದ್ಯಕ್ಕೆ ಹೈದರಾಬಾದ್​​ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

ಕೋಲಾರ ಫೀಲ್ಡ್​​ನಲ್ಲಿ ಚಿತ್ರೀಕರಣ ನಡೆಸಬಹುದು, ಆದರೆ ಅಲ್ಲಿ ವಾತಾವರಣಕ್ಕೆ ಯಾವುದೇ ಹಾನಿ ಉಂಟಾಗಬಾರದು ಎಂದು ಹೈಕೋರ್ಟ್ ಚಿತ್ರತಂಡಕ್ಕೆ ಆದೇಶ ನೀಡಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಕೋಲಾರ ಫೀಲ್ಡ್​​ನಲ್ಲಿ ಚಿತ್ರೀಕರಣ ಮುಗಿದ ಕೂಡಲೇ ಆ ಸ್ಥಳದಲ್ಲಿ ಗಿಡಗಳನ್ನು ನೆಡಬೇಕೆಂದು ಆದೇಶಿಸಿದೆ ಎಂದು ತಿಳಿದುಬಂದಿದೆ. ಇದಕ್ಕೆ ಚಿತ್ರತಂಡ ಕೂಡಾ ಒಪ್ಪಿಗೆ ನೀಡಿದೆ. ಚಿತ್ರೀಕರಣ ಮುಗಿಯುತ್ತಿದ್ದಂತೆ ಆ ಸ್ಥಳದಲ್ಲಿ 500 ಗಿಡಗಳನ್ನು ನೆಡುವುದಾಗಿ ಚಿತ್ರ ನಿರ್ಮಾಪಕರಲ್ಲಿ ಒಬ್ಬರಾದ ಕಾರ್ತಿಕ್ ಗೌಡ ಕೋರ್ಟಿಗೆ ಒಪ್ಪಿಗೆ ನೀಡಿದ್ದಾರೆ. ಒಟ್ಟಿನಲ್ಲಿ ಈ ತೀರ್ಪಿನಿಂದ ಚಿತ್ರತಂಡ ಫುಲ್​​​​ಖುಷಿಯಲ್ಲಿದೆ. ಶೀಘ್ರದಲ್ಲೇ ಕೋಲಾರ ಫೀಲ್ಡ್​​​ನಲ್ಲಿ ಸಂಜಯ್​ ದತ್ ಅಭಿನಯದ ಕೆಲವೊಂದು ಸನ್ನಿವೇಶಗಳನ್ನು ಚಿತ್ರೀಕರಿಸಲಾಗುವುದಾಗಿ ಚಿತ್ರತಂಡ ಹೇಳಿದೆ.

Intro:Body:

kgf plant

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.