ETV Bharat / sitara

ನಾಳೆ ಬಿಡುಗಡೆಯಾಗುತ್ತಿರುವ 'ಪೆಂಗ್ವಿನ್' ಚಿತ್ರದ ಬಗ್ಗೆ ಕೀರ್ತಿ ಸುರೇಶ್ ಹೇಳಿದ್ದೇನು...? - Keerthy Suresh New film

ಈಶ್ವರ್ ಕಾರ್ತಿಕ್ ನಿರ್ದೇಶನದಲ್ಲಿ ಕೀರ್ತಿ ಸುರೇಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸೈಕಲಾಜಿಕಲ್ ಥ್ರಿಲ್ಲರ್ ಸಿನಿಮಾ 'ಪೆಂಗ್ವಿನ್' ನಾಳೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆಯಾಗಲಿದೆ. ಚಿತ್ರ ತಮಿಳು, ತೆಲುಗಿನಲ್ಲಿ ತಯಾರಾಗಿದ್ದು ಮಲಯಾಳಂ ಭಾಷೆಗೆ ಡಬ್ ಆಗಿದೆ.

Penguin
ಪೆಂಗ್ವಿನ್
author img

By

Published : Jun 18, 2020, 3:16 PM IST

'ಮಹಾನಟಿ' ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿರುವ ನಟಿ ಕೀರ್ತಿ ಸುರೇಶ್ ಹೊಸ ಸಿನಿಮಾ 'ಪೆಂಗ್ವಿನ್' ಪ್ರೇಕ್ಷಕರಿಗೆ ಮನರಂಜನೆ ನೀಡಲು ಸಿದ್ಧವಾಗಿದೆ. ಆದರೆ ಇದು ಥಿಯೇಟರ್​​ಗಳಲ್ಲಿ ಬಿಡುಗಡೆಯಾಗುತ್ತಿಲ್ಲ. 'ಪೆಂಗ್ವಿನ್' ಸಿನಿಮಾ ಒಟಿಟಿ ಪ್ಲಾಟ್​​​​ಫಾರ್ಮ್​ನಲ್ಲಿ ತೆರೆ ಕಾಣುತ್ತಿದೆ.

  • " class="align-text-top noRightClick twitterSection" data="">

ಇದು ಸೈಕಲಾಜಿಕಲ್ ಥ್ರಿಲ್ಲರ್​​​​​​​​ ಚಿತ್ರವಾಗಿದ್ದು ಇದರಲ್ಲಿ ಕೀರ್ತಿ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರಿದಮ್ ಹೆಸರಿನ ಪಾತ್ರದಲ್ಲಿ ಕೀರ್ತಿ ನಟಿಸುತ್ತಿದ್ದು ಆರಂಭದಲ್ಲಿ ಇದು ಸಂಗೀತಮಯ ಸಿನಿಮಾ ಎಂದು ಕೀರ್ತಿ ಅಂದುಕೊಂಡಿದ್ದರಂತೆ. ಆದರೆ ಈ ಚಿತ್ರದಲ್ಲಿ ಹೆಚ್ಚಿನ ಹಾಡುಗಳಿಲ್ಲ. ನಿರ್ದೇಶಕ ಈಶ್ವರ್ ಕಾರ್ತಿಕ್ ನನಗೆ ಈ ಕಥೆಯನ್ನು ಸುಮಾರು 4 ಗಂಟೆಗಳ ಕಾಲ ವಿವರಿಸಿದ್ದರು. ಆದರೂ ನಾನು ತಾಳ್ಮೆಯಿಂದ ಕೇಳಿದ್ದೆ. ಏಕೆಂದರೆ ಇಂತಹ ಒಂದು ಪಾತ್ರಕ್ಕಾಗಿ ನಾನು ಬಹಳ ದಿನಗಳಿಂದ ಕಾಯುತ್ತಿದ್ದೆ ಎಂದು ಕೀರ್ತಿ ಹೇಳಿಕೊಂಡಿದ್ದಾರೆ.

ಇನ್ನು ಚಿತ್ರೀಕರಣದ ದಿನಗಳನ್ನು ಮೆಲುಕು ಹಾಕಿರುವ ಕೀರ್ತಿ ಸುರೇಶ್​​​​​​​​​​​​​​​​​​​​​​​​​​​, ಸುಮಾರು 35 ದಿನಗಳಲ್ಲಿ ನಾವು ಈ ಸಿನಿಮಾ ಚಿತ್ರೀಕರಣ ಮಾಡಿದ್ದೇವೆ. ಇದು ನನಗೆ ನಿಜಕ್ಕೂ ಚಾಲೆಂಜಿಂಗ್​​​​​​​​​​​​​​​​​​​​​​​​​​​​ ಆಗಿತ್ತು. ಚಿತ್ರದ ಕೆಲವು ತಂತ್ರಜ್ಞರು, ನನ್ನ ಮೇಕಪ್​ ಮ್ಯಾನ್ ಕೂಡಾ ಸಿನಿಮಾದಲ್ಲಿ ನಟಿಸಿದ್ದಾರೆ. ಶೂಟಿಂಗ್ ಸಮಯದಲ್ಲಿ ಬಹಳ ಎಂಜಾಯ್ ಮಾಡಿದ್ದೇವೆ. ಇನ್ನು ವಿಶೇಷ ಎಂದರೆ ಚಿತ್ರದಲ್ಲಿ ಮಾಸ್ಕ್ ಧರಿಸಿ ನಟಿಸಿದ್ದ ವ್ಯಕ್ತಿ ಯಾರು ಎಂಬುದು ಕೆಲವರಿಗೆ ಮಾತ್ರ ತಿಳಿದಿತ್ತು. ಅವರು ಯಾರು ಎಂಬುದನ್ನು ರಹಸ್ಯವಾಗಿ ಇಡಲಾಗಿತ್ತು. ಕೊನೆಯವರೆಗೂ ಆತ ಯಾರು ಎಂಬುದನ್ನು ರಿವೀಲ್ ಮಾಡಿರಲಿಲ್ಲ ಎಂದು ಕೀರ್ತಿ ಚಿತ್ರದ ಶೂಟಿಂಗ್ ಬಗ್ಗೆ ಹೇಳಿಕೊಂಡಿದ್ದಾರೆ.

ಸಿನಿಮಾ ತಮಿಳು, ತೆಲುಗಿನಲ್ಲಿ ತಯಾರಾಗಿದ್ದು ಮಲಯಾಳಂ ಭಾಷೆಯಲ್ಲಿ ಡಬ್​ ಮಾಡಲಾಗಿದೆ. ಜೂನ್ 19 ರಂದು ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಪ್ರಸಾರವಾಗಲಿದೆ. ಈ ಚಿತ್ರವನ್ನು ಥಿಯೇಟರ್​​ನಲ್ಲಿ ನೋಡುವ ಅನುಭವವೇ ಬೇರೆ. ಆದರೆ ಈಗಿರುವ ಪರಿಸ್ಥಿತಿಯಿಂದ ಚಿತ್ರವನ್ನು ಒಟಿಟಿ ಪ್ಲಾಟ್​​​​ಫಾರ್ಮ್​ನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಸಿನಿಮಾ ಹೆಚ್ಚು ಪ್ರೇಕ್ಷಕರನ್ನು ತಲುಪುವ ನಿರೀಕ್ಷೆ ಇದೆ ಎಂದು ಕೀರ್ತಿ ಸುರೇಶ್ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.