167ನೇ ಸಿನಿಮಾ 'ದರ್ಬಾರ್' ಶೂಟಿಂಗ್ ಮುಗಿಸಿರುವ ಸೂಪರ್ಸ್ಟಾರ್ ರಜನೀಕಾಂತ್, ಇದೀಗ ಎ.ಆರ್. ಮುರುಗದಾಸ್ ನಿರ್ದೇಶನದ ತಮ್ಮ ಹೊಸ ಚಿತ್ರದ ತಯಾರಿಯಲ್ಲಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಕೂಡಾ ಆರಂಭವಾಗಿದೆ.
-
Team #Thalaivar168 congratulates @KeerthyOfficial for winning the National Award for Best Actress.#66thnationalfilmawards pic.twitter.com/z93EQ22fST
— Sun Pictures (@sunpictures) December 25, 2019 " class="align-text-top noRightClick twitterSection" data="
">Team #Thalaivar168 congratulates @KeerthyOfficial for winning the National Award for Best Actress.#66thnationalfilmawards pic.twitter.com/z93EQ22fST
— Sun Pictures (@sunpictures) December 25, 2019Team #Thalaivar168 congratulates @KeerthyOfficial for winning the National Award for Best Actress.#66thnationalfilmawards pic.twitter.com/z93EQ22fST
— Sun Pictures (@sunpictures) December 25, 2019
ರಜನೀಕಾಂತ್ ಅಭಿನಯದ ಈ 168ನೇ ಸಿನಿಮಾಗೆ ನಿರ್ದೇಶಕ ಶಿವ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರವನ್ನು ಸನ್ ಪಿಕ್ಚರ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಸದ್ಯಕ್ಕೆ ಹೈದರಾಬಾದ್ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಜರುಗುತ್ತಿದೆ. 'ಮಹಾನಟಿ' ಖ್ಯಾತಿಯ ಕೀರ್ತಿ ಸುರೇಶ್ ಈ ಚಿತ್ರದಲ್ಲಿ ರಜನೀಕಾಂತ್ ತಂಗಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಇತ್ತೀಚೆಗೆ ಕೀರ್ತಿ ಸುರೇಶ್ 'ಮಹಾನಟಿ' ಚಿತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಶೂಟಿಂಗ್ ಸೆಟ್ನಲ್ಲಿ ಈ ಖುಷಿಯನ್ನು 'ತಲೈವಾ 168' ಚಿತ್ರತಂಡ ಕೇಕ್ ಕಟ್ ಮಾಡುವ ಮೂಲಕ ಆಚರಿಸಿದೆ. ಕೀರ್ತಿಗೆ ಕೇಕ್ ತಿನ್ನಿಸಿ, ಹೂವಿನ ಗುಚ್ಛ ನೀಡುವ ಮೂಲಕ ರಜನೀಕಾಂತ್ ಶೂಟಿಂಗ್ ಸೆಟ್ಗೆ ಬರಮಾಡಿಕೊಂಡಿದ್ದಾರೆ. ಈ ಫೋಟೋಗಳನ್ನು ಸನ್ ಪಿಕ್ಚರ್ಸ್ ತಮ್ಮ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದೆ. ಕೀರ್ತಿ ಸುರೇಶ್ ಇದೇ ಮೊದಲ ಬಾರಿಗೆ ರಜನೀಕಾಂತ್ ಜೊತೆ ನಟಿಸುತ್ತಿದ್ದಾರೆ. ಕೀರ್ತಿ ತಾಯಿ ಮೇನಕ ಕೂಡಾ ನಟಿಯಾಗಿದ್ದು 'ನೇಟ್ರಿಕನ್' ಚಿತ್ರದಲ್ಲಿ ರಜನಿ ಜೊತೆ ನಟಿಸಿದ್ದರು. ಇನ್ನು ರಜನಿ ಹೊಸ ಚಿತ್ರದಲ್ಲಿ ಮೀನ, ಖುಷ್ಬೂ, ಸೂರಿ, ಪ್ರಕಾಶ್ ರಾಜ್, ಸತೀಶ್ ಹಾಗೂ ಇನ್ನಿತರರು ನಟಿಸಿದ್ದಾರೆ. ಡಿ ಇಮ್ಮಾನ್ ಈ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.