ಹಿಂದಿಯಲ್ಲಿ ಮೂಡಿ ಬರುತ್ತಿರುವ, ಅಮಿತಾಬ್ ಬಚ್ಚನ್ ನಡೆಸಿಕೊಡುತ್ತಿರವ 'ಕೌನ್ ಬನೇಗಾ ಕರೋಡ್ ಪತಿ -11' ಕಾರ್ಯಕ್ರಮದಲ್ಲಿ ಹೆಮ್ಮೆಯ ಕನ್ನಡತಿ, ಖ್ಯಾತ ಉದ್ಯಮಿ, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಭಾಗಿಯಾಗಿದ್ದರು.
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಧಾಮೂರ್ತಿ, ಉತ್ತರ ಕರ್ನಾಟಕದ ದೇವದಾಸಿ ಮಹಿಳೆಯರು ತಯಾರಿಸುವ ಕೌದಿಯನ್ನು ಅಮಿತಾಬ್ ಬಚ್ಚನ್ಗೆ ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ಅಮಿತಾಬ್ ಬಚ್ಚನ್ ಸಂತೋಷ ವ್ಯಕ್ತಪಡಿಸಿದ್ದಾರೆ.
ಸುಧಾಮೂರ್ತಿಯವರು ನನಗೆ ನೀಡಿದ ಈ ಉಡುಗೊರೆ ಅದ್ಭುತ. ಈ ಕಾರ್ಯಕ್ರಮನ್ನು ಯಾವಾಗಲು ನೆನಪಿನಲ್ಲಿಟ್ಟುಕೊಳ್ಳಲುವಂತೆ ಮಾಡಿದೆ. ಇನ್ಫೋಸಿಸ್ ಫೌಂಡೇಶನ್ ಮಾಡುತ್ತಿರುವ ಸಾಮಾಜಿಕ ಕೆಲಸಗಳು, ಬಡವರ ಬಗ್ಗೆ ಕಾಳಜಿ, ಅಪಾರ ಪ್ರಮಾಣದ ಕೆಲಸದ ಬಗ್ಗೆ ಕೇಳಲು ಮತ್ತು ಕಲಿಯಲು ಹಿತವಾಗಿದೆ. ದೇವದಾಸಿಯರಿಗೆ ಹೊಸ ಜೀವನ ರೂಪಿಸಿಕೊಟ್ಟ ಮಹಿಳೆ ಸುಧಾಮೂರ್ತಿ. ಎಂತಹ ಅದ್ಭುತ ಅನುಭವ ಎಂದು ಬಿಗ್ ಬಿ ಕೊಂಡಾಡಿದ್ದಾರೆ.