ಮುಂಬೈ(ಮಹಾರಾಷ್ಟ್ರ): ಪಾರ್ಟಿವೊಂದರಲ್ಲಿ ಭಾಗಿಯಾಗಿ ಕೊರೊನಾ ಸೋಂಕಿಗೊಳಗಾಗಿದ್ದ ಬಾಲಿವುಡ್ ನಟಿ ಕರೀನಾ ಕಪೂರ್ ಒಮಿಕ್ರಾನ್ ವರದಿ ನೆಗೆಟಿವ್ ಬಂದಿದ್ದು, ಇದರಿಂದ ನಟಿ ನಿಟ್ಟುಸಿರು ಬಿಟ್ಟಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಪಾರ್ಟಿವೊಂದರಲ್ಲಿ ಭಾಗಿಯಾಗಿದ್ದ ಕರೀನಾ ಕಪೂರ್ ಹಾಗೂ ಆಕೆಯ ಸ್ನೇಹಿತೆ ಅಮೃತಾ ಅರೋರಾ ಕೊರೊನಾ ದೃಢಗೊಂಡಿತ್ತು. ಹೀಗಾಗಿ ಅವರನ್ನ ಕ್ವಾರಂಟೈನ್ ಮಾಡಿ, ಅವರು ವಾಸವಾಗಿದ್ದ ನಾಲ್ಕು ಕಟ್ಟಡಗಳನ್ನ ಸೀಲ್ಡೌನ್ ಮಾಡಲಾಗಿತ್ತು.
-
Actor Kareena Kapoor Khan's genome sequencing report for Omicron is negative: Brihanmumbai Municipal Corporation
— ANI (@ANI) December 24, 2021 " class="align-text-top noRightClick twitterSection" data="
(file photo) pic.twitter.com/PEm91oiRA4
">Actor Kareena Kapoor Khan's genome sequencing report for Omicron is negative: Brihanmumbai Municipal Corporation
— ANI (@ANI) December 24, 2021
(file photo) pic.twitter.com/PEm91oiRA4Actor Kareena Kapoor Khan's genome sequencing report for Omicron is negative: Brihanmumbai Municipal Corporation
— ANI (@ANI) December 24, 2021
(file photo) pic.twitter.com/PEm91oiRA4
ಇದನ್ನೂ ಓದಿರಿ: ದೇಶದಲ್ಲಿ 358 ಒಮಿಕ್ರಾನ್ ಕೇಸ್ಗಳಲ್ಲಿ 114 ಜನರು ಗುಣಮುಖ: ಕೇಂದ್ರ ಆರೋಗ್ಯ ಇಲಾಖೆ
ಕ್ವಾರಂಟೈನ್ಗೊಳಗಾಗಿದ್ದ ನಟಿ ಕರೀನಾ ಹಾಗೂ ಆಕೆಯ ಸ್ನೇಹಿತೆಗೆ ಜೀನೋಮ್ ಸಿಕ್ವೆನ್ಸಿಂಗ್ ಪರೀಕ್ಷೆಗೊಳಪಡಿಸಲಾಗಿದ್ದು, ಅದರ ವರದಿ ಇದೀಗ ಬಂದಿದೆ. ಈ ಪ್ರಕಾರ ಒಮಿಕ್ರಾನ್ ಸೋಂಕು ಪತ್ತೆಯಾಗಿಲ್ಲ ಎಂದು ಬೃಹನ್ ಮುಂಬೈ ಕಾರ್ಪೊರೇಷನ್ ಮಾಹಿತಿ ನೀಡಿದೆ. ಕಳೆದ 13 ದಿನಗಳಿಂದ ಕ್ವಾರಂಟೈನ್ನಲ್ಲಿರುವ ನಟಿ ಇದೀಗ ಕೋವಿಡ್ನಿಂದ ಚೇತರಿಸಿಕೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಒಮಿಕ್ರಾನ್ ನೆಗೆಟಿವ್ ವರದಿ ಬಂದಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ.
ಕೊರೊನಾ ಸೋಂಕು ತಗುಲಿದ್ದ ವೇಳೆ ನಿಯಮ ಉಲ್ಲಂಘನೆ ಮಾಡಿದ ಆರೋಪಕ್ಕೊಳಗಾಗಿದ್ದ ನಟಿಯನ್ನ ಬೃಹನ್ ಮುಂಬೈ ಕಾರ್ಪೊರೇಷನ್ ತರಾಟೆಗೆ ತೆಗೆದುಕೊಂಡಿರುವ ಘಟನೆ ಸಹ ನಡೆದಿತ್ತು.