ETV Bharat / sitara

ಸಾಹಸ ಕಲಾವಿದರು ತಂದ ಹಾರ ಒಲ್ಲೆ ಎಂದು ಸ್ವೀಟ್​ ತಿಂದು ಸರಳತೆ ಮೆರೆದ  ಅಭಿನಯ ಚಕ್ರವರ್ತಿ - ಸುದೀಪ್​ 10 ಲಕ್ಷ ಸಹಾಯ

ಸಾಹಸ ಕಲಾವಿದರ ಸಂಘಕ್ಕೆ 10 ಲಕ್ಷ ದೇಣಿಗೆ ನೀಡಿದ್ದರಿಂದ ಕರ್ನಾಟಕ ಚಲನ ಚಿತ್ರ ಸಾಹಸ ಕಲಾವಿದರುಗಳ ಸಂಘ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರಿಗೆ ಸನ್ಮಾನ ಮಾಡಿದೆ.

kichcha sudeep
ಸುದೀಪ್
author img

By

Published : Nov 27, 2019, 12:59 PM IST

ಕರ್ನಾಟಕ ಚಲನ ಚಿತ್ರ ಸಾಹಸ ಕಲಾವಿದರುಗಳ ಸಂಘ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರಿಗೆ ಸನ್ಮಾನ ಮಾಡಿದೆ. ಅದಕ್ಕೆ ಕಾರಣ ಎಲ್ಲರಿಗೂ ತಿಳಿದಿರುವ ಹಾಗೆ ಕಿಚ್ಚ ಸುದೀಪ್ ಕಷ್ಟ ಪಟ್ಟು ಕೆಲಸ ಮಾಡುವ ಸಾಹಸ ಕಲಾವಿದರ ಸಂಘಕ್ಕೆ 10 ಲಕ್ಷ ದೇಣಿಗೆ ನೀಡಿರುವುದು.

ಕಿಚ್ಚ ಸುದೀಪ್ ಅವರನ್ನು ಸಾಹಸ ಕಲಾವಿದರ ಸಂಘದ ಡಾ ರವಿ ವರ್ಮಾ ‘ಕೋಟಿಗೊಬ್ಬ 3’ ಚಿತ್ರೀಕರಣದ ಸೆಟ್​​ನಲ್ಲಿಯೇ ಸನ್ಮಾನ ಮಾಡಿದ್ದಾರೆ. ಸಾಹಸ ಕಲಾವಿದರ ಸಂಘ ಹೊಸ ಕಟ್ಟಡ ಪ್ರಾರಂಭಿಸಬೇಕು ಎಂದು ಕಿಚ್ಚ ಸುದೀಪ್ ಅವರನ್ನು ಕೇಳಿಕೊಂಡಿದ್ದರು. ಇದಕ್ಕೆ ತಕ್ಷಣ ಕಿಚ್ಚ ಸುದೀಪ್ 10 ಲಕ್ಷ ನೀಡುವುದಾಗಿ ಭರವಸೆ ನೀಡಿ ಅದನ್ನು ಪೂರೈಸಿದ್ದಾರೆ.

ಕಿಚ್ಚ ಸುದೀಪ್ ಅನೇಕ ಕಡೆ ಹಾರ, ಶಾಲು ಹಾಕಲು ಬಂದವರನ್ನು ತಡೆದಿದ್ದಾರೆ. ಅವರಿಗೆ ಬೆಳ್ಳಿ ಕಿರೀಟ ತೊಡಿಸಲು ಬಂದವರನ್ನೂ ತಡೆದು ಈ ಹಣವನ್ನು ಅಸಹಾಯಕರಿಗೆ ಕೊಡಿ ಎಂದು ಮನವಿ ಮಾಡಿದ್ದಾರೆ. ಅಲ್ಲದೆ ಸಾಹಸ ಕಲಾವಿದರುಗಳು ತಂದಿದ್ದ ಹಾರವನ್ನು ಸಹ ಹಾಕಿಸಿಕೊಳ್ಳದೆ, ಕೇವಲ ಅವರು ತಂದ ಸಿಹಿ ತಿಂದು ಸರಳತೆ ಮೆರೆದಿದ್ದಾರೆ. ಇನ್ನು ಸಾಹಸ ಕಲಾವಿದರುಗಳ ಸಂಘದ ಕಟ್ಟಡ ಬಗ್ಗೆ ಮಾಹಿತಿ ಪಡೆದು ಇನ್ನಷ್ಟು ಸಹಾಯ ಬೇಕಿದ್ದರೆ ಮಾಡುವುದಾಗಿ ಹೇಳಿದ್ದಾರೆ.

ಸಾಹಸ ಕಲಾವಿದರ ಸಂಘ ಕಿಚ್ಚನಿಗೆ ಸನ್ಮಾನ

ಕರ್ನಾಟಕ ಚಲನ ಚಿತ್ರ ಸಾಹಸ ಕಲಾವಿದರುಗಳ ಸಂಘ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅವರಿಗೆ ಸನ್ಮಾನ ಮಾಡಿದ್ದಾರೆ. ಅದಕ್ಕೆ ಕಾರಣ ಎಲ್ಲರಿಗೂ ತಿಳಿದಿರುವ ಹಾಗೆ ಕಿಚ್ಚ ಸುದೀಪ್ ಕಷ್ಟ ಪಟ್ಟು ಕೆಲಸ ಮಾಡುವ ಸಾಹಸ ಕಲಾವಿದರ ಸಂಘಕ್ಕೆ 10 ಲಕ್ಷ ದೇಣಿಗೆ ನೀಡಿದ್ದಾರೆ.

ಕಿಚ್ಚ ಸುದೀಪ್ ಅವರನ್ನು ಸಾಹಸ ಕಲಾವಿದರ ಸಂಘದ ಡಾ ರವಿ ವರ್ಮಾ ಕೋಟಿಗೊಬ್ಬ 3 ಚಿತ್ರೀಕರಣದ ಸೆಟ್ ಅಲ್ಲಿಯೇ ಸನ್ಮಾನ ಮಾಡಿದ್ದಾರೆ. ಅದು ನಡೆದದ್ದು ಮಂಗಳವಾರ ಶ್ರೀ ಕಂಠೀರವ ಸ್ಟುಡಿಯೋ ಆವರಣದಲ್ಲಿ.

ಸಾಹಸ ಕಲಾವಿದರುಗಳ ಸಂಘ ಹೊಸ ಕಟ್ಟಡ ಪ್ರಾರಂಭಿಸಬೇಕು ಎಂದು ಕಿಚ್ಚ ಸುದೀಪ್ ಅವರನ್ನು 10 ಕ್ಕೂ ಹೆಚ್ಚು ಸಾಹಸ ಕಲಾವಿದರುಗಳು ಬೇಟಿ ಮಾಡಿ ಹೇಳಿಕೊಂಡಿದ್ದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸದ ಕಿಚ್ಚ ಸುದೀಪ್ 10 ಲಕ್ಷ ನೀಡುವುದಾಗಿ ಭರವಸೆ ನೀಡಿ ಅದನ್ನು ಪೂರೈಸಿದ್ದಾರೆ ಸಹ.

ಕಿಚ್ಚ ಸುದೀಪ್ ಅನೇಕ ಕಡೆ ಅವರಿಗೆ ಹಾರ ಶಾಲು ಹಾಕಲು ಬಂದವರನ್ನು ತಡೆದಿದ್ದಾರೆ. ಅವರಿಗೆ ಬೆಳ್ಳಿ ಕಿರೀಟ ತೊಡಿಸಲು ಬಂದವರನ್ನು ಈ ಹಿಂದೆ ಅದರ ಹಣದಿಂದ ಅಸಹಾಯಕರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ. ಕಿಚ್ಚ ಸುದೀಪ್ ಸಾಹಸ ಕಲಾವಿದರುಗಳು ತಂದಿದ್ದ ಹಾರವನ್ನು ಸಹ ಹಾಕಿಸಿಕೊಳ್ಳಲಿಲ್ಲ ಆದರೆ ಅವರು ತಂದ ಸಿಹಿಯನ್ನು ಮಾತ್ರ ಒಂಚೂರು ಸ್ವೀಕರಿಸಿದರು.

ಸಾಹಸ ಕಲಾವಿದರುಗಳ ಸಂಘದ ಕಟ್ಟಡ ಬಗ್ಗೆ ಸಹ ಮಾಹಿತಿ ಪಡೆದು ಇನ್ನಷ್ಟು ಸಹಾಯ ಬೇಕಿದ್ದರೆ ಮಾಡುವುದಾಗಿ ಹೇಳಿದ್ದಾರೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.