ETV Bharat / sitara

'ರಾಬರ್ಟ್'​ ಮೇಲೆ ಕಿಡಿಗೇಡಿಗಳ ಕಣ್ಣು: 3000 ಪೈರಸಿ ಲಿಂಕ್​ಗಳು ಪತ್ತೆ!

ಶಿವರಾತ್ರಿ ಪ್ರಯುಕ್ತ ರಾಬರ್ಟ್​ ಸಿನಿಮಾವನ್ನು ನಿನ್ನೆ( ಗುರವಾರ)ಯೇ ಕರ್ನಾಟಕ, ಆಂಧ್ರ, ತೆಲಂಗಾಣದಲ್ಲೂ ಬಿಡುಗಡೆ ಮಾಡಲಾಗಿತ್ತು. ಸಿನಿಮಾವನ್ನು ನೋಡಿದ್ದ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದ್ದರು. ಆದ್ರೀಗ ಇಡೀ ಚಿತ್ರತಂಡವೇ ತಲೆ ಮೇಲೆ ಕೈ ಹೊತ್ತು ಕುಳಿತಿದೆ.

robert-cinema-piracy
'ರಾಬರ್ಟ್'
author img

By

Published : Mar 12, 2021, 9:21 PM IST

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಸಿನಿಮಾವನ್ನು ನೋಡಿ ಬಂದಿರುವ ಅಭಿಮಾನಿಗಳು ಫುಲ್​ ಅಂಕ​​ ನೀಡಿದ್ದಾರೆ. ಆದರೆ, ಈ ಸಂತೋಷದ ನಡುವೆ ಪೈರಸಿ ಎಂಬ ಭೂತವೊಂದು ವಕ್ಕರಿಸಿದೆ.

'Robert' Cinema Piracy
ಪೈರಸಿ ಲಿಂಕ್ ಪತ್ತೆ

ಸಿನಿಮಾ ರಂಗದಲ್ಲಿ ಪೈರಸಿ ಎಂಬ ಭೂತ ಹಾಸುಹೊಕ್ಕಾಗಿದೆ. ಯಾವುದೇ ದೊಡ್ಡ ಸಿನಿಮಾಗಳು ಬೆಳಗ್ಗೆ ರಿಲೀಸ್ ಆಗ್ತಾ ಇದ್ದಂತೆ ಸಂಜೆಯೊಳಗೆ ಲೀಕ್​ ಆಗಿ ಸಿನಿಮಾ ತಂಡಕ್ಕೆ ಶಾಕ್​ ನೀಡಿರುತ್ತೆ. ಇದೇ ರೀತಿ ಕೋಟಿ ಕೋಟಿ ಬಂಡವಾಳ ಹೂಡಿ ನಿರ್ಮಾಣ ಮಾಡಲಾಗಿದ್ದ ರಾಬರ್ಟ್ ಸಿನಿಮಾ ನಿನ್ನೆಯಷ್ಟೇ 1400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡು ಉತ್ತಮ ಪ್ರದರ್ಶನ ನೀಡಿತ್ತು. ಆದರೀಗ ಕೆಲವು ಕಿಡಿಗೇಡಿಗಳು ಈ ಸಿನಿಮಾವನ್ನು ಮೊಬೈಲ್​ನಲ್ಲಿ ಶೂಟ್ ಮಾಡಿ, ಅದನ್ನು ಆನ್​ಲೈನ್​ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಇದು ಚಿತ್ರತಂಡದ ಗಮನಕ್ಕೆ ಬಂದಿದ್ದು, ಇಂತವರ ವಿರುದ್ಧ ಈಗಾಗಲೇ ಸೈಬರ್ ಕ್ರೈಮ್ ಮೊರೆ ಹೋಗಿದೆ. ಅಚ್ಚರಿಯೆಂದರೆ ಸುಮಾರು 3000 ಪೈರಸಿ ಲಿಂಕ್​ಗಳು ಈವರೆಗೆ ಪತ್ತೆಯಾಗಿವೆ.

ಓದಿ: ಸಿನಿಮಾಗೆ ಬರುವುದಕ್ಕಿಂತ ಮುಂಚೆ ನಾನು ಅಪ್ಪು ಸರ್ ಅಭಿಮಾನಿ: ಸೋನುಗೌಡ

ಸಿನಿಮಾ ರಿಲೀಸ್​ಗೂ ಮುನ್ನವೇ ನಿರ್ಮಾಪಕ ಉಮಾಪತಿ ಪೈರಸಿ ಮಾಡುವವರಿಗೆ ವಾರ್ನಿಂಗ್ ನೀಡಿದ್ದರು. ಪೈರಸಿ ಮಾಡಬೇಡಿ, ಮಾಡಿದ್ರೆ ಅದರ ಪರಿಣಾಮ ದೊಡ್ಡದಾಗಿ ಇರುತ್ತೆ ಎಂದು ಎಚ್ಚರಿಸಿದ್ರು. ಆದ್ರೀಗ, ಅವರ ತಂಡ ಪೈರಸಿ ಲಿಂಕ್​ಗಳನ್ನು ಡಿಲೀಟ್ ಮಾಡುವ ಕಾರ್ಯದಲ್ಲಿ ಮಗ್ನವಾಗಿದೆ. ಪೈರಸಿಯಿಂದಾಗಿ ಡಿ ಬಾಸ್​ ಫ್ಯಾನ್ಸ್​ ಬೇಸರಗೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.