ETV Bharat / sitara

ಸ್ಯಾಂಡಲ್‌ವುಡ್‌ನಲ್ಲಿ ಬಿಗ್​​ಬಾಸ್​ ಖ್ಯಾತಿಯ ಚಂದನ್​ಶೆಟ್ಟಿ ಒಬ್ಬ 'ಶೋಕಿಲಾಲ'! - undefined

ಅನೇಕ ಆಲ್ಬಂಗಳನ್ನು ಮಾಡಿರುವ ಬಿಗ್​​ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಈಗ 'ಶೋಕಿಲಾಲ' ಎಂಬ ವಿಡಿಯೋ ಆಲ್ಬಂ ಮಾಡಿದ್ದಾರೆ. ಈಗಾಗಲೇ ಈ ಹಾಡಿನ ಚಿತ್ರೀಕರಣ ನಡೆದಿದ್ದು, ಇದೇ ತಿಂಗಳು ರಿಲೀಸಾಗಲಿದೆ.

ಚಂದನ್​ಶೆಟ್ಟಿ
author img

By

Published : May 13, 2019, 12:40 PM IST

ಸಂಗೀತಗಾರನಾಗಬೇಕೆಂಬ ಆಸೆಯಿಂದ ಹಾಸನದಿಂದ ಬೆಂಗಳೂರಿಗೆ ಬಂದು ಅವಕಾಶಗಳಿಗಾಗಿ ಅಲೆದಾಡುತ್ತಿದ್ದ ಚಂದನ್ ಶೆಟ್ಟಿ ಇದೀಗ ಹೊಸ ಪ್ರತಿಭೆಗಳಿಗೆ ತಾವೇ ಅವಕಾಶ ನೀಡುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ.

chandan shetty
ಚಂದನ್​ಶೆಟ್ಟಿ

ರ್‍ಯಾಪ್​​ ಸಿಂಗರ್ ಆದರೂ ಚಂದನ್ ಶೆಟ್ಟಿ ಗುರುತಿಸಿಕೊಂಡಿದ್ದು ಬಿಗ್​ಬಾಸ್​ನಿಂದ. ಅಲ್ಲಿಂದ ಹೊರಬಂದ ಮೇಲೆ ಚಂದನ್​ ಸದ್ಯಕ್ಕೆ ಖಾಸಗಿ ಕಾರ್ಯಕ್ರಮವೊಂದರ ಹಾಡಿನ ಸ್ಪರ್ಧೆಯಲ್ಲಿ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೂ ಚಂದನ್ ಮಾತ್ರ ಸಂಗೀತ ನಿರ್ದೇಶನ ಹಾಗೂ ಆಲ್ಬಂ ಹಾಡನ್ನು ಬಿಟ್ಟಿಲ್ಲ. ಈವರೆಗೂ ಚಂದನ್​ ‘ಹಾಳಾಗ್ಹೋದೆ’ ವಿಡಿಯೋ ಅಲ್ಬಮ್​​ನಿಂದ 3 ಪೆಗ್, ಚಾಕೊಲೆಟ್​​​​​​ ಗರ್ಲ್, ಟಕೀಲ, ನಮ್ಮ ಬೆಂಗಳೂರು, ನನ್ ಪ್ರೀತಿ ಸುಳ್ಳಲ್ಲ, ಫೈರ್ ವಿಡಿಯೋ ಆಲ್ಬಂ ಮಾಡಿದ್ದಾರೆ. ಈಗ ‘ಶೋಕಿಲಾಲ‘ ಎಂಬ ಹೊಸ ವಿಡಿಯೋ ಆಲ್ಬಮ್ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇವರ ಒಂದೊಂದು ವಿಡಿಯೋ ಅಲ್ಬಮ್​​​​ಗೆ ಯೂಟ್ಯೂಬ್​​ನಲ್ಲಿ 25 ಮಿಲಿಯನ್ ವೀಕ್ಷಕರಿದ್ದಾರೆ.

chandan shetty
ರ್‍ಯಾಪರ್ ಚಂದನ್​ಶೆಟ್ಟಿ

‘ಶೋಕಿಲಾಲ‘ ಆಲ್ಬಂನಲ್ಲಿ ಚಂದನ್ ಶೆಟ್ಟಿ ಸಂಗೀತ ನಿರ್ದೇಶನದ ಜೊತೆಗೆ ಆ್ಯಕ್ಟ್ ಕೂಡಾ ಮಾಡಿದ್ದಾರೆ. ಈ ವಿಡಿಯೋ ಆಲ್ಬಂನಲ್ಲಿ ಅದ್ವಿತಿ ಶೆಟ್ಟಿ ಹಾಗೂ ರಾಶಿ ಮಹಾದೇವ್ ಇಬ್ಬರು ನಾಯಕಿಯರಿದ್ದು ಚಂದನ್ ಇವರಿಬ್ಬರ ಜೊತೆ ರೊಮ್ಯಾನ್ಸ್ ಮಾಡಿದ್ದಾರೆ. ಮಿನರ್ವ ಮಿಲ್​​ನಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಈಗಿನ ಬಹುತೇಕ ಯುವಕರು ಹೆಚ್ಚು ಆದಾಯ ಇಲ್ಲದಿದ್ದರೂ ಶೋಕಿಗಾಗಿ ಹೆಚ್ಚು ಖರ್ಚು ಮಾಡುತ್ತಾರೆ. ಈ ಕಾನ್ಸೆಪ್ಟ್ ಇಟ್ಟುಕೊಂಡು ಈ ಆಲ್ಬಂ ಹಾಡನ್ನು ಮಾಡಲಾಗಿದೆ. ಜಗದೀಶ್ ಎಂಬುವರು ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಇದೇ ತಿಂಗಳಲ್ಲಿ ‘ಶೋಕಿಲಾಲ‘ ಆಲ್ಬಂ ಲೋಕಾರ್ಪಣೆ ಮಾಡುವುದಾಗಿ ಚಂದನ್ ಹೇಳಿದ್ದಾರೆ.

chandan shetty
ರ್‍ಯಾಪ್​​ ಸಿಂಗರ್ ಚಂದನ್ ಶೆಟ್ಟಿ

ಚಂದನ್ ಶೆಟ್ಟಿ ಶೋಕಿಲಾಲ

ಕನ್ನಡದಲ್ಲಿ ರ್ಯಾಪ್ ಸಂಗೀತದಲ್ಲಿ ಮೊದಲ ಸ್ಥಾನದಲ್ಲಿರುವ ಬಿಗ್ ಬಾಸ್ 5 ವಿಜೇತ ಚಂದನ್ ಶೆಟ್ಟಿ ಅಭಿನಯ ಜೊತೆ, ಸಂಗೀತ ನಿರ್ದೇಶನ, ತೀರ್ಪುಗಾರಗಿ ಕನ್ನಡ ಕೋಗಿಲೆ ಸಂಗೀತ ಕಾರ್ಯಕ್ರಮದಲ್ಲಿ ವೃತ್ತಿಯನ್ನು ಕೊಂಡೊಯ್ಯುತ್ತಾ ಇದ್ದಾರೆ. ಆದರೆ ಅವರ ಮೂಲ ಕಸುಬು ವೀಡಿಯೋ ಆಲ್ಬಂ ಹಾಡು ಮಾತ್ರ ನಿಂತಿಲ್ಲ.

ಹಾಳಾಗ್ಹೋದೆ ವೀಡಿಯೋ ಅಲ್ಬಮ್ ಇಂದ ಅವರು 3 ಪೆಗ್, ಚಾಕಲೆಟ್ ಗರ್ಲ್, ತೆಕ್ಕಿಳ, ನಮ್ಮ ಬೆಂಗಳೂರು, ನನ್ ಪ್ರೀತಿ ಸುಳ್ಳಲ್ಲ, ಫೈರ್ ನಂತರ ಈಗ ಶೋಕಿಲಾಲ ಎಂಬ ವೀಡಿಯೋ ಅಲ್ಬಮ್ ಸಿದ್ದತೆ ಮಾಡಿಕೊಂಡಿದ್ದಾರೆ. ಇವರ ಒಂದೊಂದು ವೀಡಿಯೋ ಅಲ್ಬಮ್ ಯು ಟ್ಯೂಬ್ ಅಲ್ಲಿ 2 ಮಿಲಿಯನ್, 48 ಮಿಲಿಯನ್, 23 ಮಿಲಿಯನ್ ವೀಕ್ಷಕರನ್ನು ಸಂಪಾದಿಸಿಕೊಂಡಿದೆ.

ಶೋಕಿಲಾಲ ವೀಡಿಯೋ ಆಲ್ಬಂ ಸಂಗೀತ, ನಟನೆ ಚಂದನ್ ಶೆಟ್ಟಿ ವಹಿಸಿಕೊಂಡು ಅದ್ವಿತಿ ಶೆಟ್ಟಿ ಮತ್ತು ರಾಶಿ ಮಹಾದೇವ್ ಜೊತೆ ರೊಮಾನ್ಸ್ ಮಾಡಿದ್ದಾರೆ. ಮೀನರ್ವ ಮಿಲ್ ಅಲ್ಲಿ ಈ ಹಾಡಿನ ಚಿತ್ರೀಕರಣ ಸಹ ನಡೆದಿದೆ.

ಕಡಿಮೆ ಸಂಬಳ ಇದ್ದರೂ ಶೋಕಿಗೇನು ಕಡಿಮೆ ಇಲ್ಲ ಈ ಜಗತ್ತಿನಲ್ಲಿ. ಇದು ಹುಡುಗರಿಗೆ ಹೆಚ್ಚು ಟಾರ್ಗೆಟ್ ಮಾಡಿರುವ ಹಾಡು. ಹೆಣ್ಣು ಮಕ್ಕಳಿಗೋಸ್ಕರ ಶೋಕಿ ಮಾಡ್ತಾರೆ ಎಂಬುದು ಬೇರೆ ಮಾತು. ಅಂತಹವರಿಗೆ ಈ ಹಾಡು ರಾ ಫೀಲ್ ಅಲ್ಲಿ ಚಿತ್ರೀಕರಣ ಮಾಡಲಾಗಿದೆ. ಜಗದೀಶ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

ಇದೆ ತಿಂಗಳಿನಲ್ಲಿ ಶೋಕಿಲಾಲ ಹಾಡು ಲೋಕಾರ್ಪಣೆ ಮಾಡುವಾದಾಗಿ ಚಂದನ್ ಶೆಟ್ಟಿ ಹೇಳುತ್ತಾರೆ. 

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.