ETV Bharat / sitara

‘H/34 ಪಲ್ಲವಿ ಟಾಕೀಸ್’ ನಲ್ಲಿ ತಿಲಕ್, ಯಜ್ಞಾ ಶೆಟ್ಟಿ ಜೋಡಿಯ ಮೋಡಿ - Sandalwood new cinema news

‘H/34 ಪಲ್ಲವಿ ಟಾಕೀಸ್’ ನಲ್ಲಿ ತಿಲಕ್, ಯಜ್ಞಾ ಶೆಟ್ಟಿ ಅಭಿನಯಿಸಿದ್ದು, ಸದ್ಯ H/34 ಪಲ್ಲವಿ ಟಾಕೀಸ್ ಚಿತ್ರದ ‘ಬರೆವೆ ಬರೆವೆ ಒಲವ ಕವನ’ ಎಂಬ ರೋಮ್ಯಾಂಟಿಕ್ ಹಾಡು, ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

Kannada movie H/34 Pallavi talkies
H/34 ಪಲ್ಲವಿ ಟಾಕೀಸ್
author img

By

Published : May 28, 2021, 2:36 PM IST

ಸ್ಯಾಂಡಲ್​ವುಡ್​ನಲ್ಲಿ ಲವರ್ ಬಾಯ್ ಇಮೇಜ್​ನಿಂದಲೇ, ತನ್ನದೆ ಐಡೆಂಟಿಟಿ ಹೊಂದಿರುವ ನಟ ತಿಲಕ್ ಇದೀಗ ‘H/34 ಪಲ್ಲವಿ ಟಾಕೀಸ್’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

Kannada movie H/34 Pallavi talkies
H/34 ಪಲ್ಲವಿ ಟಾಕೀಸ್

ತಿಲಕ್​ಗೆ ಜೋಡಿಯಾಗಿ ಯಜ್ಞಾ ಶೆಟ್ಟಿ ಅಭಿನಯಿಸಿದ್ದು, ಸದ್ಯ H/34 ಪಲ್ಲವಿ ಟಾಕೀಸ್ ಚಿತ್ರದ ‘ಬರೆವೆ ಬರೆವೆ ಒಲವ ಕವನ’ ಎಂಬ ರೋಮ್ಯಾಂಟಿಕ್ ಹಾಡು, ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.

ಶ್ರೀನಿವಾಸ್ ಚಿಕ್ಕಣ್ಣ (ಸೀನಿ) ಬರೆದಿರುವ ಈ ಹಾಡನ್ನು ಬಾಲಿವುಡ್​ನ ಜನಪ್ರಿಯ ಗಾಯಕ ಅಂಕಿತ್ ತಿವಾರಿ ಹಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಈ ಹಾಡಿನಲ್ಲಿ ತಿಲಕ್, ಯಜ್ಞಾ ಶೆಟ್ಟಿ ಕೆಮಿಸ್ಟ್ರಿ ವರ್ಕ್ ಔಟ್ ಆಗಿದೆ.

ತಿಲಕ್, ಯಜ್ಞಾ ಶೆಟ್ಟಿ ಅಲ್ಲದೇ ಸಚೇಂದ್ರ ಪ್ರಸಾದ್, ಅವಿನಾಶ್, ಸುಧಾ ಬೆಳವಾಡಿ, ಅಚ್ಯುತಕುಮಾರ್, ಪದ್ಮಜಾ ರಾವ್, ಕುರಿ ಪ್ರತಾಪ್, ವಿಶ್ವ, ಅಮೃತ ಮಯೂರಿ, ರಾಜೇಶ್ವರಿ, ರಾಕ್ ಲೈನ್ ಸುಧಾಕರ್, ಅಜಯ್ ರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada movie H/34 Pallavi talkies
H/34 ಪಲ್ಲವಿ ಟಾಕೀಸ್

ಈ ಹಿಂದೆ 6ನೇ ಮೈಲಿ ಚಿತ್ರವನ್ನು ನಿರ್ದೇಶಿಸಿದ್ದ, ಶ್ರೀನಿವಾಸ್ ಚಿಕ್ಕಣ್ಣ ಅವರು ನಿರ್ದೇಶಿಸಿದ ಎರಡನೇ ಚಿತ್ರ ಇದಾಗಿದೆ. ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ.

ಮನೋಹರ್ ಜೋಶಿ ಛಾಯಾಗ್ರಹಣ ಹಾಗೂ ಅಕ್ಷಯ್ ಪಿ ರಾವ್ ಸಂಕಲನ ಈ ಚಿತ್ರಕ್ಕಿದೆ. ಕಾಲಭೈರವ ಆರ್ಟ್ಸ್ ಲಾಂಛನದಲ್ಲಿ ಮಂಜುನಾಥ್ ಕೆ ಹಾಗೂ ರವಿಕಿರಣ್ ಎಂ ಗೌಡ ನಿರ್ಮಿಸಿರುವ ಈ ಚಿತ್ರವನ್ನು ಶ್ರೀನಿವಾಸ್ ಚಿಕ್ಕಣ್ಣ (ಸೀನಿ) ನಿರ್ದೇಶಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಟ್ರೇಲರ್ ಬಿಡುಗಡೆಗಲಿದೆ. ಜೂನ್ ಎರಡನೇ ವಾರದಲ್ಲಿ ಓಟಿಟಿ ಮೂಲಕ ಚಿತ್ರ ಬಿಡುಗಡೆಯಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.