ಮುಂಬೈ: 66ನೇ ನ್ಯಾಷನಲ್ ಫಿಲ್ಮಂ ಅವಾರ್ಡ್ ಪುರಸ್ಕಾರ ನೀಡಲಾಗುತ್ತಿದ್ದು, ಕನ್ನಡದಲ್ಲಿ ಸಿಕ್ಕಾಪಟ್ಟೆ ಅಬ್ಬರಿಸಿ ಹೊಸ ದಾಖಲೆ ನಿರ್ಮಾಣ ಮಾಡಿದ್ದ ಕನ್ನಡದ ಕೆಜಿಎಫ್ಗೆ ಬೆಸ್ಟ್ ಆ್ಯಕ್ಸನ್ ಅವಾರ್ಡ್ ನೀಡಲಾಗಿದೆ.
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರಕ್ಕೆ 2 ಪ್ರಶಸ್ತಿ, ಶೃತಿ ಹರಿಹರನ್ ಅಭಿನಯದ ನಾತಿಚರಾಮಿ ಚಿತ್ರಕ್ಕೆ 5 ಪ್ರಶಸ್ತಿ ಹಾಗೂ ರಿಷಭ್ ಶೆಟ್ಟಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡ ಸೇರಿದಂತೆ ಕನ್ನಡಕ್ಕೆ ಒಟ್ಟು 11 ರಾಷ್ಟ್ರ ಪ್ರಶಸ್ತಿ ಸಿಕ್ಕಿವೆ. ಇದೇ ಮೊದಲ ಬಾರಿಗೆ ಇಷ್ಟೊಂದು ಪ್ರಶಸ್ತಿ ಕನ್ನಡಕ್ಕೆ ಸಿಕ್ಕಿರುವುದು ಗಮನಾರ್ಹ.
ಮುಂಬೈನ ಶಾಸ್ತ್ರಿ ಭವನದ ಹಾಲ್ನಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, 31 ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗಿದೆ. ಕಡಿಮೆ ಬಜೆಟ್ನಲ್ಲಿ ಸಿದ್ಧವಾಗಿ ಜನಮನ ಗೆದ್ದಿದ್ದ ಬಾಲಿವುಡ್ನ 'ಅಂಧಾಧುನ್' ಸಿನಿಮಾಗೆ ಅತ್ಯುತ್ತಮ ಸಿನಿಮಾ ಅವಾರ್ಡ್ ಸಿಕ್ಕಿದೆ. ಇದರಲ್ಲಿ ಆಯುಷ್ಮಾನ್ ಖುರಾನಾ, ತಬು, ರಾಧಿಕಾ ಆಪ್ಟೆ ನಟನೆ ಮಾಡಿದ್ದರು. ಉಳಿದಂತೆ ಕನ್ನಡದ ಕೆಜಿಎಫ್ಗೆ ಬೆಸ್ಟ್ ಆ್ಯಕ್ಸನ್ ಅವಾರ್ಡ್ ನೀಡಲಾಗಿದೆ.
ಕನ್ನಡದ ಪ್ರಶಸ್ತಿ ಪಟ್ಟಿ ಇಂತಿದೆ
- ಅತ್ಯುತ್ತಮ ಪ್ರಾದೇಶಿಕ ಚಿತ್ರ - ನಾತಿಚರಾಮಿ
- ಅತ್ಯುತ್ತಮ ಮಹಿಳಾ ಗಾಯಕಿ (ಮಾಯಾವಿ ಮಾನವೆ ಹಾಡು) (ಬಿಂಧು ಮಾಲಿನಿ ಗಾಯಕಿ) - ನಾತಿಚರಾಮಿ
- ಅತ್ಯುತ್ತಮ ಸಾಹಿತ್ಯ ಪ್ರಶಸ್ತಿ - ನಾತಿಚರಾಮಿ
- ಅತ್ಯುತ್ತಮ ಸಂಕಲನ - ನಾತಿಚರಾಮಿ
- ಅತ್ಯುತ್ತಮ ಸಾಹಸ ಚಿತ್ರ - ಕೆಜಿಎಫ್
- ಅತ್ಯುತ್ತಮ ವಿಎಫ್ಎಕ್ಸ್ ಚಿತ್ರ - ಕೆಜಿಎಫ್
- ಅತ್ಯುತ್ತಮ ರಾಷ್ಟ್ರೀಯ ಏಕತಾ ಚಿತ್ರ - ಒಂದಲ್ಲ, ಎರಡಲ್ಲ
- ಅತ್ಯುತ್ತಮ ಬಾಲ ಕಲಾವಿದ - ಒಂದಲ್ಲ, ಎರಡಲ್ಲ
- ಅತ್ಯುತ್ತಮ ಮಕ್ಕಳ ಚಿತ್ರ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು
- ಅತ್ಯುತ್ತಮ ರಾಷ್ಟ್ರೀಯ ಆಕ್ರ್ಸೂಸ್ ಚಿತ್ರ - ಮೂಕಜ್ಜಿಯ ಕನಸುಗಳು
- ನಾತಿಚರಾಮಿ ಚಿತ್ರದ ಅಭಿನಯಕ್ಕಾಗಿ ನಟಿ ಶೃತಿ ಹರಿಹರನ್ಗೆ ವಿಶೇಷ ಪ್ರಶಸ್ತಿ
- ಅತ್ಯುತ್ತಮ ಆ್ಯಕ್ಷನ್: ಕೆಜಿಎಫ್
- ಅತ್ಯುತ್ತಮ ಛಾಯಾಗ್ರಹಣ: ಪದ್ಮಾವತ್
- ಅತ್ಯುತ್ತಮ ಸ್ಪೆಷಲ್ ಎಫೆಕ್ಟ್ಸ್: ಕೆಜಿಎಫ್ ಹಾಗೂ Awe
- ಅತ್ಯುತ್ತಮ ಸಾಹಿತ್ಯ: ಮಂಜುನಾಥ್ (ನಾತಿಚರಾಮಿ)
- ಅತ್ಯುತ್ತಮ ಸಂಗೀತ ನಿರ್ದೇಶನ: ಪದ್ಮಾವತ್
- ಅತ್ಯುತ್ತಮ ಹಿನ್ನೆಲೆ ಸಂಗೀತ: ಉರಿ
- ಅತ್ಯುತ್ತಮ ಮೇಕಪ್ ಕಲಾವಿದ: Awe ಸಿನಿಮಾಗಾಗಿ ರಂಜಿತ್
- ಅತ್ಯುತ್ತಮ ಕಾಸ್ಟ್ಯೂಮ್ ಡಿಸೈನ್: ಮಹಾನಟಿ
- ಅತ್ಯುತ್ತಮ ಸಂಕಲನ: ನಾತಿಚರಾಮಿ
- ಅತ್ಯುತ್ತಮ ಲೊಕೇಷನ್ ಸೌಂಡ್: ಟೆಂಡ್ಲ್ಯಾ
- ಅತ್ಯುತ್ತಮ ಧ್ವನಿ ವಿನ್ಯಾಸ: ಉರಿ
- ಅತ್ಯುತ್ತಮ ಮಿಸ್ಡ್ ಟ್ರ್ಯಾಕ್: ರಂಗಸ್ಥಲಂ
- ಅತ್ಯುತ್ತಮ ಹಿನ್ನೆಲೆ ಗಾಯಕಿ: ಬಿಂದು ಮಾಲಿನಿ (ನಾತಿಚರಾಮಿ-ಮಾಯಾವಿ ಮನವೆ)
- ಅತ್ಯುತ್ತಮ ಹಿನ್ನೆಲೆ ಗಾಯಕ: ಅರ್ಜಿತ್ ಸಿಂಗ್ (ಪದ್ಮಾವತ್)
- ಅತ್ಯುತ್ತಮ ರಾಷ್ಟ್ರೀಯ ಏಕತಾ ಚಿತ್ರ - ಒಂದಲ್ಲ, ಎರಡಲ್ಲ
- ಅತ್ಯುತ್ತಮ ಬಾಲ ಕಲಾವಿದ - ಒಂದಲ್ಲ, ಎರಡಲ್ಲ
- ಅತ್ಯುತ್ತಮ ಮಕ್ಕಳ ಚಿತ್ರ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು
- ಅತ್ಯುತ್ತಮ ರಾಷ್ಟ್ರೀಯ ಆಕ್ರ್ಸೂಸ್ ಚಿತ್ರ - ಮೂಕಜ್ಜಿಯ ಕನಸುಗಳು