ರಾಗಿಣಿ, ‘ಅಧ್ಯಕ್ಷ ಇನ್ ಅಮೆರಿಕ’ ಸಿನಿಮಾದಲ್ಲಿ ಶರಣ್ ಜೊತೆ ನಾಯಕಿ ಆಗಿ ಎನ್ಆರ್ಐ ಹುಡುಗಿ ಪಾತ್ರ ನಿಭಾಯಿಸಿದ್ದಾರೆ. ಇವರ ಸಹೋದರ ರುದ್ರಾಕ್ಷ್ ದ್ವಿವೇದಿ ಈ ಚಿತ್ರಕ್ಕೆ ವಸ್ತ್ರ ವಿನ್ಯಾಸ ಮಾಡಿದ್ದಾರೆ.
ಇನ್ನು ಈ ಚಿತ್ರದಲ್ಲಿ ಅತಿ ಮುಖ್ಯ ವಿಚಾರ ಏನಂದ್ರೆ ರಾಗಿಣಿ ಹಾಗೂ ಶರಣ್ ಅವರ ಎತ್ತರದ ಬಗ್ಗೆ ನಡೆದ ಚರ್ಚೆ. ಈ ಬಗ್ಗೆ ಮಾತನಾಡುವ ಮದಕರಿಯ ನಾಯಕಿ 'ನನ್ನ ಹೈಟ್ 5 ಅಡಿ ಎಂಟುವರೆ ಇಂಚು. ಆದರೆ, ಶರಣ್ ಅವರದು 5.9 ಫೀಟ್. ನಾನು ಯಾವಾಗಲೂ ಧರಿಸುವ ಚಪ್ಪಲಿ ಎತ್ತರದ್ದು.ಹಾಗಾಗಿ ಎಲ್ಲರಿಗೂ ನಾನೇ ಎತ್ತರ ಅಂತ ಅನ್ನಿಸಿರಬೇಕು. ಈ ಚರ್ಚೆ ನಾನು ಹಾಗೂ ಶರಣ್ ಈ ಹಿಂದೆ ವಿಕ್ಟರಿ ಸಿನಿಮಾದ ‘ಯಕ್ಕ ನಿನ್ ಮಗಳು' ಸಮಯದಲ್ಲೂ ಆಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ.
ರಾಗಿಣಿ ಮುಂದಿನ ಸಿನಿಮಾಗಳು ಯಾವವು?
ಚಿತ್ರರಂಗದಲ್ಲಿ ಒಂದು ದಶಕ ಪೂರೈಸಿರುವ ತುಪ್ಪದ ಬೆಡಗಿಯ ಎರಡು ಸೋಲೋ ನಾಯಕಿ ಪಾತ್ರಗಳ ಎರಡು ಸಿನಿಮಾಗಳು ಸಿದ್ದವಾಗಲಿವೆಯಂತೆ.ಕೆಲವು ಹುಡುಗರು ಚೆನ್ನೈ ಇಂದ ಬಂದರು ಅತ್ಯುತ್ತಮ ಕಥೆ ಹೇಳಿದ್ದಾರೆ. ‘ದಿ ಟೆರರಿಸ್ಟ್’ ಚಿತ್ರದ ಬಳಿಕ ವಿಭಿನ್ನ ಕಥಾ ವಸ್ತುವಿನ ಅನೇಕ ಆಫರ್ಗಳು ಬರುತ್ತಿವೆಯಂತೆ ರಾಗಿಣಿಗೆ.