ETV Bharat / sitara

'ಶಾಂತಿ ಕ್ರಾಂತಿ' ಮುಳುಗಿಸಿತು, 'ರಾಮಾಚಾರಿ' ಮೇಲೆತ್ತಿತು... ಕ್ರೇಜಿಸ್ಟಾರ್​​ ಕಷ್ಟದ ಬದುಕು ಬಿಚ್ಚಿಟ್ಟ ಸಾಧು

ಚಂದನವನದ ಕನಸುಗಾರ ರವಿಚಂದ್ರನ್ ಸಿನಿಮಾಗಳಿಗೋಸ್ಕರ ಬದುಕಿದವರು. ಬಣ್ಣವನ್ನೇ ತಮ್ಮ ಉಸಿರಾಗಿಸಿಕೊಂಡವರು. ಕನ್ನಡ ಚಿತ್ರರಂಗಕ್ಕೆ ಹೊಸತನ ಪರಿಚಯಿಸಿದವರು. ಅದ್ಭುತ ಸಿನಿಮಾಗಳ ಮೂಲಕ ಸ್ಯಾಂಡಲ್​​ವುಡ್​ನ್ನು ಶ್ರೀಮಂತಗೊಳಿಸಿದವರು. ಇದೀಗ ಹಾಸ್ಯನಟ ಸಾಧುಕೋಕಿಲ ಕ್ರೇಜಿಸ್ಟಾರ್​​ ಸಿನಿಲೋಕದ ಬಗ್ಗೆ ಮಾತನಾಡಿದ್ದಾರೆ.

author img

By

Published : May 31, 2019, 7:39 PM IST

ಚಿತ್ರಕೃಪೆ : ಸೋಷಿಯಲ್ ಮೀಡಿಯಾ

ಬಣ್ಣದ ಲೋಕದಲ್ಲಿ ಜೀವಿಸುತ್ತಿರುವ ಪ್ರೇಮಲೋಕದ ಈ ರಣಧೀರ ಸೋಲು-ಗೆಲುವನ್ನು ಸಮನಾಗಿ ಕಂಡವರು. ಸೋತಾಗ ಕುಗ್ಗದೆ, ಗೆದ್ದಾಗ ಹಿಗ್ಗದೆ ಎಲ್ಲರಿಗೂ ಆದರ್ಶಪ್ರಾಯವಾದವರು. ಇದೀಗ ಕ್ರೇಜಿ ಸ್ಟಾರ್​ ರವಿಚಂದ್ರನ್ ಅವರ ಸಿನಿ ಕರಿಯರ್​ನ ಏಳುಬೀಳಿನ ಪ್ರಸಂಗವೊಂದನ್ನು ಹಾಸ್ಯನಟ ಹಾಗೂ ಸಂಗೀತ ನಿರ್ದೇಶಕ ಸಾಧು ಕೋಕಿಲಾ ಬಿಚ್ಚಿಟ್ಟಿದ್ದಾರೆ.

ರವಿ ಚಂದ್ರನ್​, 1991ರಲ್ಲಿ 15 ಕೋಟಿ ಖರ್ಚು ಮಾಡಿ, ನಾಲ್ಕು ಭಾಷೆಗಳಲ್ಲಿ ಶಾಂತಿ-ಕ್ರಾಂತಿ ಸಿನಿಮಾ ಮಾಡಿದ್ದರು. ಕನ್ನಡದ ಆ ಚಿತ್ರದಲ್ಲಿ ಸ್ವತಃ ತಾವೇ ನಟಿಸಿ, ನಿರ್ಮಿಸಿದ್ದರು. ದೊಡ್ಡ ಬಜೆಟ್​​ನ ಈ ಚಿತ್ರ ಪ್ರೇಕ್ಷಕರಿಂದ ಒಳ್ಳೆಯ ವಿಮರ್ಶೆ ಪಡೆದರೂ ಹಣ ಗಳಿಸುವಲ್ಲಿ ವಿಫಲವಾಗಿತ್ತು. ಇದರಿಂದ ರವಿಚಂದ್ರನ್ ಅವರಿಗೆ ಭಾರಿ ಹೊಡೆತ ಬಿದ್ದಿತ್ತು. ಪ್ರೇಮಲೋಕ ಚಿತ್ರದಿಂದ ಗಳಿಸಿದ ಹಣವೆಲ್ಲ ಶಾಂತಿ-ಕ್ರಾಂತಿ ನುಂಗಿ ಬಿಟ್ಟಿತ್ತು. ಈ ವೇಳೆ ರವಿಚಂದ್ರನ್ ಕೈಯಲ್ಲಿ ಬಿಡಿಗಾಸು ಸಹ ಇರಲಿಲ್ಲವಂತೆ.

ಕೈ ಹಿಡಿದು ಮೇಲೆತ್ತಿದ ರಾಮಾಚಾರಿ:

ಶಾಂತಿ-ಕ್ರಾಂತಿ ಸೋಲಿನ ನೋವನ್ನು ಮರೆಸಿದ್ದು ರಾಮಾಚಾರಿ ಚಿತ್ರ. ಶಾಂತಿ-ಕ್ರಾಂತಿ ಸಿನಿಮಾದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ ರವಿಚಂದ್ರನ್​ ಬರೀ 30 ಲಕ್ಷದಲ್ಲಿ ರಾಮಾಚಾರಿ ಸಿನಿಮಾ ಮಾಡಿದ್ದರು. ತಮಿಳಿನ ಪಿ.ವಾಸು ಅವರ 'ಚಿನ್ನತಂಬಿ' ಚಿತ್ರವನ್ನು ಕನ್ನಡಕ್ಕೆ ತಂದು ದೊಡ್ಡ ಹಿಟ್ ಮಾಡಿದ್ದರು. ಈ ಚಿತ್ರದ ರೈಟ್ಸ್​ ತರುವಲ್ಲಿ ರವಿಚಂದ್ರನ್ ಅವರಿಗೆ ಸಹಾಯ ಮಾಡಿದ್ದು, ನಟಿ ಖುಷ್ಬು ಅವರಂತೆ.

  • " class="align-text-top noRightClick twitterSection" data="">

ಈ ರೋಚಕ ಕಹಾನಿಯನ್ನು 'ಕನ್ನಡದ ಕೋಗಿಲೆ' ಶೋನಲ್ಲಿ ಸಾಧು ಕೋಕಿಲಾ ಅವರು ಮೆಲುಕು ಹಾಕಿದ್ದಾರೆ. ಚಿನ್ನತಂಬಿ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಅವುಗಳನ್ನು ಮೀರಿಸುವಂತ ಹಾಡುಗಳು ರಾಮಾಚಾರಿಯಲ್ಲಿ ಬಂದವು. ರಿಮೇಕ್ ಚಿತ್ರವಾದರೂ ನಮ್ಮ ಶೈಲಿಗೆ ತಕ್ಕಹಾಗೆ ಹೊರಬರುವಂತೆ ಮಾಡಿ, ಗೆಲುವು ಪಡೆದವರು ರವಿಚಂದ್ರನ್​. ಆರ್ಥಿಕವಾಗಿಯೂ ಸಹ ಈ ಚಿತ್ರ ಕ್ರೇಜಿಸ್ಟಾರ್​​ ಕೈಹಿಡಿದಿತ್ತು.

ಅಂದು ಒಂದೇ ದಿನ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದ ಮಾಲಾಶ್ರೀಯವರು ರಾಮಾಚಾರಿ ಚಿತ್ರಕ್ಕೆ ಕಷ್ಟಪಟ್ಟು ಡೇಟ್​ ಕೊಟ್ಟಿದ್ದರು. ಸತತ 18 ದಿನಗಳವರೆಗೆ ಶೂಟಿಂಗ್ ನಡೆಸಿ, ಚಿತ್ರವನ್ನು ಸಿದ್ಧಪಡಿಸಿ ದೊಡ್ಡ ಜಯ ಪಡಿದ್ದರು ರವಿಮಾಮ. ಈ ಗತ್ತು, ಸ್ಥೈರ್ಯ ರವಿಚಂದ್ರನ್ ಅವರಿಗೆ ಮಾತ್ರ ಬರುತ್ತೆ ಎನ್ನುತ್ತಾರೆ ಹಿರಿಯ ನಟ ಸಾಧು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.