ETV Bharat / sitara

ತೆಲುಗಿನ 'ಮಹರ್ಷಿ'ಗೆ ಬಂಗಾರದ ಮನುಷ್ಯ ಸೇರಿ ಕನ್ನಡ ಚಿತ್ರಗಳೇ ಸ್ಫೂರ್ತಿ:  ವಾದ ಮುಂದಿಟ್ಟ ಪ್ರಥಮ್​

ಟಾಲಿವುಡ್​ನ 'ಮಹರ್ಷಿ' ಚಿತ್ರ ಥಿಯೇಟರ್​​​ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ ಈ ಸಿನಿಮಾ ಮೇಲೆ ಅಣ್ಣಾವ್ರ ಬಂಗಾರದ ಮನುಷ್ಯ ಸೇರಿ ಹಲವು ಕನ್ನಡ ಚಿತ್ರಗಳ ನೆರಳಿದೆ ಎಂದು ನಟ ಪ್ರಥಮ್​ ಪುನರುಚ್ಛರಿಸಿದ್ದಾರೆ.

ಚಿತ್ರಕೃಪೆ : ಫೇಸ್​​ಬುಕ್​
author img

By

Published : May 13, 2019, 8:21 PM IST

ಟಾಲಿವುಡ್​ನ 'ಮಹರ್ಷಿ' ಚಿತ್ರ ಥಿಯೇಟರ್​​​ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ವಾಸ್ತವತೆಯ ಪ್ರತಿಬಿಂಬದಂತಿರುವ ಈ ಸಿನಿಮಾ ಕಥೆ ಪ್ರೇಕ್ಷರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಅದರಲ್ಲೂ ರೈತರ ಹಿತಾಸಕ್ತಿ ಕಾಪಾಡೋವಂತಹ ಒನ್​​ಲೈನ್ ಸ್ಟೋರಿ ಚಿತ್ರಕ್ಕೆ ಗಟ್ಟಿತನ ನೀಡಿದ್ದು,ಎಲ್ಲೆಡೆ ಬದಲಾವಣೆಗೆ ಮುನ್ನುಡಿ ಬರೆಯುತ್ತಿದೆ.

ಆಧುನಿಕತೆಯ ಭರಾಟೆಯಲ್ಲಿ ಕೃಷಿಗೆ ಮಹತ್ವ ಕಡಿಮೆಯಾಗುತ್ತಿದೆ. ಉಳಿಮೆ ಮಾಡೋವರ ಸಂಖ್ಯೆ ಕುಸಿಯುತ್ತಿದೆ. ವಿದ್ಯೆ ಕಲಿತು ಪಟ್ಟಣ ಸೇರುವ ಯುವಕರು ಕೃಷಿ ಮರೆಯುತ್ತಿದ್ದಾರೆ. ಸರ್ಕಾರಗಳಿಂದಲೂ ಕೃಷಿ ವಲಯ, ರೈತರು ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಆದರೆ, ನಮ್ಮ ದೇಶಕ್ಕೆ ಕೃಷಿಯ ಮಹತ್ವ ಎಷ್ಟಿದೆ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬುದನ್ನು ಮಹರ್ಷಿ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ಕನ್ನಡದಲ್ಲಿ ಇಂತಹ ಸಾಕಷ್ಟು ಚಿತ್ರಗಳು ತೆರೆ ಕಂಡಿವೆ. ಡಾ.ರಾಜಕುಮಾರ್ ಅವರ ಬಂಗಾರದ ಮನುಷ್ಯ ಚಿತ್ರ ಒಂದು ಕ್ರಾಂತಿಯನ್ನೇ ಮಾಡಿತ್ತು. ಚಿತ್ರ ನೋಡಿದ ಸಾಕಷ್ಟು ಯುವಜನತೆ ಕೃಷಿಯನ್ನೇ ಕಾಯಂ ಕಾಯಕವನ್ನಾಗಿಸಿಕೊಂಡಿದ್ದರು. ಅದರಂತೆ ಮಾತಾಡ್​ ಮಾತಾಡು ಮಲ್ಲಿಗೆ, ಕಾಮನ ಬಿಲ್ಲು ಕೂಡ ಸಿನಿಮಾಗಳು ಸಮಾಜದ ಮೇಲೆ ಬೀರಿದ್ದ ಪರಿಣಾಮ ಅಷ್ಟಿಷ್ಟಲ್ಲ.

ಇದೀಗ ಕನ್ನಡದ ನಟ ಪ್ರಥಮ್ ಕೂಡ ಇದನ್ನೇ ಪುನರುಚ್ಚರಿಸಿದ್ದಾರೆ. ಟಾಲಿವುಡ್ ಪ್ರಿನ್ಸ್​ ಮಹೇಶ್ ಬಾಬು ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಮಹರ್ಷಿ' ಸಿನಿಮಾ ನೋಡಿರುವ ಅವರು, ನಮ್ಮ ಕಣ್ಣೇದುರಿಗೆ ಇರುವ ಸತ್ಯವನ್ನು ಬಿಚ್ಚಿಟ್ಟಿದ್ದಾರೆ.

  • " class="align-text-top noRightClick twitterSection" data="">

ಮಹರ್ಷಿ ಚಿತ್ರದಲ್ಲಿ ಕನ್ನಡದ ಬಂಗಾರದ ಮನುಷ್ಯ, ಕಾಮನಬಿಲ್ಲು, ಮಾತಾಡ್​ ಮಾತಾಡು ಮಲ್ಲಿಗೆ ಚಿತ್ರಗಳ ಸಾಕಷ್ಟು ಹೋಲಿಕೆ ಇದೆ. ಈ ಚಿತ್ರಗಳನ್ನೇ ಸ್ಫೂರ್ತಿಯನ್ನಾಗಿ ಪಡೆದಿರುವಂತಿದೆ ಈ ತೆಲುಗು ಸಿನಿಮಾ. ಕನ್ನಡದ ಸಾಕಷ್ಟು ಒಳ್ಳೆಯ ಚಿತ್ರಗಳನ್ನು ನಾವು ನೋಡೋದು ಕಡಿಮೆ. ಆದರೆ, ಬೇರೆ ಭಾಷಿಗರು ನೋಡಿ, ಅವುಗಳಿಂದ ಸ್ಫೂರ್ತಿ ಪಡೆದು, ಅವರಿಗೆ ಬೇಕಾದಂತೆ ಸಿನಿಮಾ ಮಾಡಿ ಗೆಲುವು ಪಡೆಯುತ್ತಾರೆ. 'ಒಳ್ಳೇದೆಲ್ಲ ನಮ್ಮಲ್ಲೆ ಇದೆ. ಗುರುತಿಸೋ ಮನಸ್ಸುಗಳು ಬೇಕಷ್ಟೆ' ಎಂದಿರುವ ಪ್ರಥಮ್​, ಕನ್ನಡದ ಮಯೂರ ಬಾಹುಬಲಿ ಆಗಿದ್ದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.