ETV Bharat / sitara

ಕಾಲೆಳೆದ ಕಂಗನಾಗೆ ಪ್ರೀತಿಯ ಪ್ರತ್ಯುತ್ತರ ಕೊಟ್ಟ ಸ್ವರಾ ಭಾಸ್ಕರ್.. - kangana ranat insults swara bhasker

ಸ್ವರಾ ಫೋಟೋಗೆ ಕಂಗನಾ ರಣಾವತ್​ ಕಮೆಂಟ್​ ಮಾಡಿ ಸಾಮಾಜಿಕ ಜಾಲತಣದಲ್ಲಿ ಸುದ್ದಿಯಲ್ಲಿದ್ದಾರೆ..

ಸ್ವಾರಾಳನ್ನು ಕಿಚಾಯಿಸಬೇಕು ಅನ್ನಿಸುತ್ತಿದೆ ಎಂದು ಕಂಗನಾ!

author img

By

Published : Jan 24, 2021, 6:49 PM IST

ಕಂಗನಾ ಅಂದ್ರೆ ಹಾಗೆ ಯಾವಾಗ್ಲು ಸುದ್ದಿಯಲ್ಲಿ ಇದ್ದೇ ಇರ್ತಾರೆ. ಸೋಷಿಯಲ್​ ಮೀಡಿಯಾದಲ್ಲಿ ಏನಾದ್ರು ಒಂದು ಕಮೆಂಟ್​ ಅಥವಾ ಪೋಸ್ಟ್​​ ಮಾಡುತ್ತ ಎಲ್ಲರ ಗಮನವನ್ನ ಸೆಳೆಯುತ್ತಾರೆ. ಇದೀಗ ಸ್ವರಾ ಫೋಟೋ ಬಗ್ಗೆ ಪ್ರತಿಕ್ರಿಯೆ ನೀಡಿ ಸುದ್ದಿಯಲ್ಲಿದ್ದಾರೆ.

ನಟಿ ಸ್ವರಾ ಭಾಸ್ಕರ್‌ ಗೋಲ್ಡನ್​ ಬಣ್ಣದ ಸೀರೆ ತೊಟ್ಟು ಕೊರೊಳಿಗೆ ನೆಕ್​ಲೆಸ್​​ ಹಾಕಿರುವ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಈ ಫೋಟೋ ಈ ಹಿಂದೆ ಕಂಗನಾ ರಣಾವತ್​ ಧರಿಸಿದ್ದ ಸೀರೆಯ ರೂಪದಲ್ಲೇ ಕಾಣುತ್ತೆ. ಕಂಗನಾ ಮತ್ತು ಸ್ವರಾ ಇಬ್ಬರ ಫೋಟೋಗಳನ್ನು ಕೊಲಾಜ್​ ಮಾಡಿರುವ ವೈಭವ್​​​ ಎಂಬುವರು ತಮ್ಮ ಟ್ವಿಟರ್​​ನಲ್ಲಿ ಶೇರ್​​ ಮಾಡಿ, ಕಂಗನಾಗೆ 'ಕ್ಲಾಸ್'​ ಎಂದ ಸ್ವರಾಗೆ 'ಕ್ರಾಸ್'​​ ಎಂದು ಬರೆದಿದ್ದಾರೆ.

ಪೋಸ್ಟ್​ ರಿಟ್ವೀಟ್​​ ಮಾಡಿರುವ ಕಂಗನಾ ರಣಾವತ್​​, "ಈ ಜನ ಏನ್​ ಹೇಳ್ತಿದ್ದಾರೆ ಇದು ನಿಜಾನಾ" ಎಂದು ಬರೆದಿದ್ದಾರೆ. ಮತ್ತೊಂದು ಮಾತು ಹೇಳಿರುವ ಕಂಗನಾ "ಇವತ್ತು ಭಾನುವಾರ. ತುಂಬಾ ಬೋರಾಗುತ್ತಿದೆ. ಇದ್ರಿಂದ ಸ್ವರಾಳನ್ನು ಕಿಚಾಯಿಸಬೇಕು ಅನ್ನಿಸಿತು" ಎಂದಿದ್ದಾರೆ.

ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿರುವ ಸ್ವರಾ, "ನಿಮ್ಮ ಬೇಸರವನ್ನು ಹೋಗಲಾಡಿಸಲು ನನಗೆ ಯಾವಾಗಲೂ ಖುಷಿಯಾಗುತ್ತದೆ. ಐ ಲವ್​ ಯು" ಎಂದು ಬರೆದುಕೊಂಡಿದ್ದಾರೆ.

ಇನ್ನು, ಕಂಗನಾ ಸಿನಿಮಾ ವಿಚಾರಕ್ಕೆ ಬಂದ್ರೆ ತಲೈವಿ, ಮಣಿಕರ್ಣಿಕಾ ರಿಟರ್ನ್​​​​ ಹಾಗೂ ಧಾಕದ್​ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.