ಮುಂಬೈ: ಕಂಗನಾ ರಣಾವತ್ ನಟಿಸಿರುವ ಆಕ್ಷನ್ ಸ್ಪೈ ಥ್ರಿಲ್ಲರ್ ಧಾಕಡ್ ಮೇ 27 ರಂದು ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್, ದಿವ್ಯಾ ದತ್ ಮತ್ತು ಶಾಶ್ವತ ಚಟರ್ಜಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ದೀಪಕ್ ಮುಕುತ್, ಸೋಹೆಲ್ ಮಕ್ಲೈ ಮತ್ತು ಹುನಾರ್ ಮುಕುತ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವು ದೇಶದಲ್ಲೇ ಅತಿ ದೊಡ್ಡ ಮಹಿಳಾ ಆ್ಯಕ್ಷನ್ ಎಂಟರ್‌ಟೈನರ್ ಆಗಲಿದೆ ಎಂದು ರಣಾವತ್ ಹೇಳಿದ್ದಾರೆ.
ಇಂತಹ ಅತ್ಯುನ್ನತ ಕಥೆಯು ಹೆಚ್ಚು ಜನರಿಗೆ ತಲುಪ ಬೇಕು ಎಂದು ಬಹು ಭಾಷೆಯಲ್ಲಿ ಬಿಡುಗಡೆಗೊಳ್ಳುತ್ತದೆ. ಏಜೆಂಟ್ ಅಗ್ನಿಯ ಭೇಟಿಗೆ ಅಭಿಮಾನಿಗಳನ್ನು ಇನ್ನಷ್ಟು ಕಾಯಿಸಲಾರೆ, ಅಗ್ನಿ ತನ್ನ ಕೋಪ ಮತ್ತು ಶಕ್ತಿಯಿಂದ ಜನರ ಮನಸ್ಸಿನಲ್ಲಿ ಉಳಿಯಲಿದ್ದಾಳೆ ಎಂದು ರಣಾವತ್ ತಿಳಿಸಿದರು.
ರಜನೀಶ್ ಘಾಯ್ ಅವರು ನಿರ್ದೇಶನದ ಧಾಕಡ್ ಅಕ್ಟೋಬರ್ 2021 ರಲ್ಲಿ ಥಿಯೇಟರ್‌ಗಳಲ್ಲಿ ತೆರೆಗೆ ಬರಲು ಸಿದ್ಧವಾಗಿತ್ತು. ಆದರೆ, ಕೋವಿಡ್ ಉಲ್ಬಣಗೊಂಡ ಕಾರಣ ಬಿಡುಗಡೆಯನ್ನು ಮುಂದೂಡಲಾಗಿತ್ತು. ಕಮಲ್ ಮುಕುತ್, ಸೊಹೆಲ್ ಮಕ್ಲೈ ಪ್ರೊಡಕ್ಷನ್ಸ್ ಮತ್ತು ಅಸಿಲಮ್ ಫಿಲ್ಮ್‌ಗಳ ಸಹಯೋಗದಲ್ಲಿ ಸೋಹಮ್ ರಾಕ್‌ಸ್ಟಾರ್ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನಿಂದ ಧಾಕಡ್ ಸಹಯೋಗದಲ್ಲಿ ತೆರೆಕಾಣಲಿದೆ.
ಇದನ್ನೂ ಓದಿ: 'ಗ್ಯಾಸ್ಲೈಟ್' ಚಿತ್ರೀಕರಣಕ್ಕಾಗಿ ರಾಜ್ಕೋಟ್ಗೆ ತೆರಳಿದ ನಟಿ ಸಾರಾ