ETV Bharat / sitara

ಮೊದಲ ಬಾರಿ ವಿಶ್ವದ 8ನೇ ಅದ್ಭುತ ನೋಡಿ ವಾಹ್​ ತಾಜ್​​​ ಎಂದ ಮಗಧೀರ ಬೆಡಗಿ​​​​​..! - ಮುಂಬಯಿ ಸೆಗಾ

ಮೊದಲ ಬಾರಿ ತಾಜ್​ಮಹಲ್ ನೋಡುತ್ತಿದ್ದಂತೆ ಮಗಧೀರ ಚೆಲುವೆ ಕಾಜಲ್ ಅಗರ್​​ವಾಲ್ ಫಿದಾ ಆಗಿ ಹೋಗಿದ್ದಾರೆ. ಈ ಸುಂದರ ಕಟ್ಟಡದ ಅಂದವನ್ನು ಹೊಗಳಿರುವ ಕಾಜಲ್ ಅಲ್ಲಿ ತೆಗೆಸಿಕೊಂಡಿರುವ ಪೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಾಜಲ್ ಅಗರ್​​ವಾಲ್
author img

By

Published : Sep 20, 2019, 5:13 PM IST

ತಾಜ್​ಮಹಲ್​ ಪ್ರಪಂಚದ ಅದ್ಭುತ ಕಟ್ಟಡಗಳಲ್ಲಿ ಒಂದು. ಆಗ್ರಾಗೆ ಭೇಟಿ ನೀಡುವ ಯಾರೇ ಆಗಲಿ ಈ ಸುಂದರವಾದ ಪ್ರೇಮಸೌಧವನ್ನು ನೋಡದೆ ಇರಲಾರರು. ಇನ್ನು ಮಗಧೀರ ಸುಂದರಿ ಕಾಜಲ್ ಅಗರ್​​ವಾಲ್ ಮೊದಲ ಬಾರಿಗೆ ತಾಜ್​​​ ಮಹಲ್​​ ನೋಡಿ ವಾಹ್​ ತಾಜ್ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ತಮ್ಮ ಬ್ಯುಸಿ ಶೆಡ್ಯೂಲ್​​ ನಡುವೆ ಬಿಡುವು ಮಾಡಿಕೊಂಡು ಮೊದಲ ಬಾರಿಗೆ ಕಾಜಲ್ ತಾಜ್​ ಮಹಲ್ ನೋಡಿದ್ದಾರೆ. ಅದೂ ಕೂಡಾ ತಮ್ಮ ಪ್ರೀತಿಯ ತಂದೆಯೊಂದಿಗೆ ಕಾಜಲ್ ಈ ಪ್ರೇಮಸೌಧಕ್ಕೆ ಭೇಟಿ ನೀಡಿದ್ದಾರೆ. ಇನ್ನು ಮೊದಲ ಬಾರಿ ತಾಜ್​ ಮಹಲ್ ನೋಡುತ್ತಿದ್ದಂತೆ 'ವಾಹ್ ತಾಜ್' ಎಂದು ಉದ್ಘಾರ ತೆಗೆದಿರುವ ಕಾಜಲ್ ಕಟ್ಟಡವನ್ನು ನೋಡುತ್ತಿದ್ದಂತೆ ತಮಗಾದ ಅನುಭವವನ್ನು ಹಾಗೂ ಅಲ್ಲಿ ತಮ್ಮ ತಂದೆಯೊಂದಿಗೆ ತೆಗೆಸಿಕೊಂಡ ಪೋಟೋಗಳನ್ನು ತಮ್ಮ ಇನ್ಸ್​​​ಟಾಗ್ರಾಮ್​​ನಲ್ಲಿ ಹಂಚಿಕೊಂಡಿದ್ದಾರೆ. 'ತಾಜ್​​​ಮಹಲ್​​ ನೋಡಿದ ಕೂಡಲೇ ನನಗೆ ಮಾತೇ ಹೊರಡಲಿಲ್ಲ. ಅದರ ಅಂದ ನೋಡಿ ಫಿದಾ ಆಗಿ ಹೋದೆ, ಇದರ ಹಿಂದಿನ ಕಥೆ ತಿಳಿದ ಮೇಲೆ ಬಹಳ ಆಶ್ಚರ್ಯವಾಯಿತು. ಮನಸ್ಸನ್ನು ಆಕರ್ಷಿಸುವ ತಾಜ್​ಮಹಲ್ ಬಗ್ಗೆ ಬಹಳ ಸಾರಿ ಕೇಳಿದ್ದೆ, ಆದರೆ ಈಗ ಕಣ್ಣಾರೆ ನೋಡಿ ಸಂತೋಷವನ್ನು ಆಹ್ವಾದಿಸಿದೆ. ತಾಜ್​ಮಹಲ್ ನನ್ನ ಮನಸ್ಸಿನಲ್ಲಿ ಅಳಿಸಲಾರದ ಮುದ್ರೆ ಒತ್ತಿದೆ. ವಂಡರ್ ಆಫ್​ ದಿ ವರ್ಲ್ಡ್​​​​​ ಎಂದು ತಮ್ಮ ಪೋಟೋಗೆ ಕ್ಯಾಪ್ಷನ್ ನೀಡಿದ್ದಾರೆ. ಇನ್ನು ಕಾಜಲ್ ಸದ್ಯಕ್ಕೆ ಪ್ಯಾರಿಸ್ ಪ್ಯಾರಿಸ್, ಕಾಲ್ ಸೆಂಟರ್​​, ಮುಂಬಯಿ ಸೆಗಾ, ಭಾರತೀಯುಡು-2 ಸೇರಿ 4-5 ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

Intro:Body:

kajol taj

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.