ಚಿರಂಜೀವಿ ಸರ್ಜಾ ಕಡಿಮೆ ವಯಸ್ಸಿನಲ್ಲೇ ಒಂದಿಷ್ಟು ಸಾಧನೆ ಮಾಡಿ, ನೂರಾರು ನೆನಪುಗಳನ್ನು ಬಿಟ್ಟು ಹೋದ ನಟ. ಚಿರು ಅಗಲಿದರೂ, ಅವರ ಹಳೆಯ ಫೋಟೋ, ವಿಡಿಯೋಗಳು ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಲೇ ಇರುತ್ತವೆ.
ಮೇಘನಾರಾಜ್ ಗರ್ಭಿಣಿಯಾಗಿದ್ದಾಗಲೇ ಚಿರು ಇಹಲೋಕ ತ್ಯಜಿಸಿದ್ದರು. ಹಾಗಾಗಿ, ಚಿರು ಪುತ್ರನಿಗೆ ಅಪ್ಪನನ್ನು ಕಾಣುವ ಅವಕಾಶ ಇಲ್ಲದಂತಾಗಿದೆ. ಆದರೆ, ಜೂನಿಯರ್ ಚಿರು ಫೋಟೋಗಳಲ್ಲಿ ಅಪ್ಪನನ್ನು ಗುರುತಿಸಲು ಶುರು ಮಾಡಿದ್ದಾನೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದ್ದು, ವಿಡಿಯೋದಲ್ಲಿ ಮೇಘನಾ ರಾಜ್ ಮಗನನ್ನು ಎತ್ತಿಕೊಂಡು ಚಿರು ಫೋಟೋವನ್ನು ತೋರಿಸಿ ಅಪ್ಪನನ್ನು ನೋಡು ಎಂದು ಹೇಳುವ ದೃಶ್ಯವಿದೆ. ಸ್ವತಃ ಮೇಘನಾ ರಾಜ್, ಈ ವಿಡಿಯೋವನ್ನು ಹಂಚಿಕೊಂಡಿದ್ದು, ಜೂನಿಯರ್ ಚಿರುನ ವಿಡಿಯೋ ನೋಡಿದ ಚಿರು ಮತ್ತು ಮೇಘನಾ ಅಭಿಮಾನಿಗಳು ಮತ್ತು ಚಿತ್ರರಂಗದ ಸ್ನೇಹಿತರು ಫಿದಾ ಆಗಿದ್ದಾರೆ.