ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಜಗ್ಗುದಾದ ಸಿನಿಮಾವನ್ನ ರೀ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಈ ಸಿನಿಮಾ ಪ್ರದರ್ಶನದಿಂದ ಬಂದ ಹಣವನ್ನ ಚಿತ್ರಮಂದಿರದ ಮಾಲೀಕರಿಗೆ ನೀಡಲು, ಜಗ್ಗುದಾದ ಸಿನಿಮಾ ನಿರ್ಮಾಪಕ ಹಾಗೂ ನಿರ್ದೇಶಕ ರಾಘವೇಂದ್ರ ಹೆಗ್ಗಡೆ ತೀರ್ಮಾನಿಸಿದ್ದಾರೆ.
ಈ ಸಿನಮಾದ ಕಾರ್ಯಕಾರಿ ನಿರ್ಮಾಪಕ ವಾಸಿಮ್ ಹೇಳುವ ಪ್ರಕಾರ ಈಗಾಗಲೇ ನೂರು ಚಿತ್ರಮಂದಿರದ ಮಾಲೀಕರು ಜಗ್ಗುದಾದ ಸಿನಿಮಾವನ್ನ ಪ್ರದರ್ಶನ ಮಾಡೋದಕ್ಕೆ ಮುಂದೆ ಬಂದಿದ್ದಾರಂತೆ.
ಇದೇ ತಿಂಗಳು ಅಕ್ಟೋಬರ್ 30ಕ್ಕೆ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜಗ್ಗುದಾದ ಸಿನಿಮಾ ರೀ ರಿಲೀಸ್ ಆಗುತ್ತೆ ಎಂದು ಕಾರ್ಯಕಾರಿ ನಿರ್ಮಾಪಕ ವಾಸೀಮ್ ಹೇಳಿದ್ದಾರೆ. ಕೊರೊನಾಕ್ಕೆ ಸೆಡ್ಡು ಹೊಡೆದು ದರ್ಶನ್ ಜಗ್ಗುದಾದ ಸಿನಿಮಾವನ್ನ ನೋಡೋದಿಕ್ಕೆ ಸಿನಿಮಾ ಪ್ರೇಕ್ಷಕರು ಬರ್ತಾರಾ ಅನ್ನೋದು ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ನಷ್ಟದಲ್ಲಿರುವ ಚಿತ್ರಮಂದಿರಗಳ ಮಾಲೀಕರ ಸಹಾಯಕ್ಕೆ ಜಗ್ಗುದಾದ ಚಿತ್ರತಂಡ ಬಂದಿರುವುದು ಖುಷಿ ಪಡುವ ವಿಚಾರ.