ETV Bharat / sitara

ಪದ್ಮಾವತಿಗೆ ಕೂಡಿ ಬಂತು ಕಂಕಣ ಭಾಗ್ಯ... ಗೆಳೆಯನ ಜತೆ ಸಪ್ತಪದಿ ತುಳಿತಾರಾ ರಮ್ಯಾ? - ರಾಫೆಲ್

ರಾಫೆಲ್​ ಎಲೆಕ್ಟ್ರಾನಿಕ್ ಉಪಕರಣಗಳ ಉದ್ಯಮಿ​ ಎಂದು 2011 ರಲ್ಲಿ ರಮ್ಯಾ ಪರಿಚಯಿಸಿದ್ದರು. ಈ ಜೋಡಿ ಐಪಿಎಲ್ ಕ್ರಿಕೆಟ್ ಪಂದ್ಯಗಳ ವೇಳೆ ಕಾಣಿಸಿಕೊಂಡಿತ್ತು. ಇದೀಗ ರಾಫೆಲ್​ ಅವರನ್ನು ರಮ್ಯಾ ಮದುವೆಯಾಗ್ತಿದ್ದಾರೆ ಅನ್ನೋ ಸುದ್ದಿ ಕೇಳಿಬಂದಿದೆ.

actress ramya
author img

By

Published : Aug 15, 2019, 7:54 AM IST

ಲೋಕಸಭೆ ಚುನಾವಣೆ ಬಳಿಕ ಕಾಣದಂತೆ ಮಾಯವಾಗಿದ್ದ ನಟಿ ಕಮ್​ ರಾಜಕಾರಣಿ ರಮ್ಯಾ, ಒಳ್ಳೆಯ ವಿಚಾರವೊಂದಕ್ಕೆ ಈಗ ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್​​ವುಡ್​​​ ಕ್ವೀನ್ ಮದುವೆ ಆಗಲಿದ್ದಾರಂತೆ.

ಮೋಹಕ ನಟಿ, ಒಂದು ಕಾಲದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿ, ತಮಿಳು ಭಾಷೆಯಲ್ಲಿ ಅಭಿನಯಿಸಿ, ‘ಅಮೃತಧಾರೆ’ ಸಿನಿಮಾದಲ್ಲಿ ಬಿಗ್​​ಬಿ ಅಮಿತಾಭ್ ಬಚ್ಚನ್ ಅವರ ಜೊತೆ ಒಂದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ರಮ್ಯಾ, ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸುದ್ದಿ ಕೇಳಿ ಬಂದಿದೆ. ಪೋರ್ಚುಗಲ್ ಮೂಲದ ಬಹುಕಾಲದ ಸ್ನೇಹಿತ ರಾಫೆಲ್ ಜತೆ ದುಬೈನಲ್ಲಿ ಹಸೆಮಣೆ ಏರಲಿದ್ದಾರಂತೆ.

actress ramya
ರಾಫೆಲ್​ ಜತೆ ರಮ್ಯಾ

ರಾಫೆಲ್​ ಎಲೆಕ್ಟ್ರಾನಿಕ್ ಉಪಕರಣಗಳ ಬ್ಯುಸಿನೆಸ್​ಮ್ಯಾನ್​ ಎಂದು 2011 ರಲ್ಲಿ ರಮ್ಯಾ ಪರಿಚಯಿಸಿದ್ದರು. ಈ ಜೋಡಿ ಐಪಿಎಲ್ ಕ್ರಿಕೆಟ್ ಪಂದ್ಯಗಳ ವೇಳೆ ಕಾಣಿಸಿಕೊಂಡಿದ್ದರು. ರಮ್ಯಾ ಅಭಿನಯದ ‘ಸಂಜು ವೆಡ್ಸ್ ಗೀತಾ’ ಹಾಡುಗಳ ಬಿಡುಗಡೆ ಸಮಾರಂಭಕ್ಕೂ ಸಹ ರಾಫೆಲ್ ಆಗಮಿಸಿದ್ದರು. ಎಂಟು ವರ್ಷಗಳ ಸ್ನೇಹದ ನಂತರ ಇವರಿಬ್ಬರು ಮದುವೆ ಆಗುತ್ತಿರುವ ಸುದ್ದಿ ಹೊರಬಿದ್ದಿದೆ.

ಅಭಿ ಸಿನಿಮಾ ಇಂದ ಚಿತ್ರರಂಗಕ್ಕೆ ಕಾಲಿಟ್ಟ ರಮ್ಯಾ ಅವರ ಕೊನೆಯ ಚಿತ್ರ ಕೋಡಿ ರಾಮಕೃಷ್ಣ ನಿರ್ದೇಶನದ ‘ನಾಗರಹಾವು’. ಈ ಸಿನಿಮಾದಲ್ಲಿ ದಿಗಂತ್ ಜೊತೆ ಅಭಿನಿಸಿದ ಬಳಿಕ ಬೇರೆ ಯಾವ ಚಿತ್ರದಲ್ಲೂ ಇವರು ಕಾಣಿಸಿಕೊಳ್ಳಲಿಲ್ಲ. ರಾಜಕೀಯದಲ್ಲೇ ಹೆಚ್ಚು ಸಕ್ರಿಯರಾಗಿದ್ದರು.

ಆಹಾ ರಮ್ಯ ಮದ್ವೆಯಂತೆ!

ಆಹಾ ನನ್ನ ಮದ್ವೆಯಂತೆ....ಎಂಬುದು ಹಳೆಯ ಹಾಡಿನ ಸಾಲು. ಹಾಗೆ ಈಗ ಎದ್ದಿರುವ ಸುದ್ದಿ ಆಹಾ ರಮ್ಯ ಮದ್ವೆಯಂತೆ’.

ಮೋಹಕ ನಟಿ, ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯತೆ ಕನ್ನಡ ಸಿನಿಮರಂಗದಲ್ಲಿ ಗಳಿಸಿ, ತಮಿಳು ಭಾಷೆಯಲ್ಲಿ ಅಭಿನಯಿಸಿ ಅಮೃತ ಧಾರೆ ಅಂತ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ಅವರ ಜೊತೆ ಒಂದು ದೃಶ್ಯದಲ್ಲಿ ಕಾಣಿಸಿಕೊಂಡು ಹೆಮ್ಮೆ ಪಡುವ ನಟಿ, ಮಾಜಿ ಲೋಕ ಸಭಾ ಸದಸ್ಯೆ, ನೇಷನಲ್ ಕಾಂಗ್ರೆಸ್ ಸಾಮಾಜಿಕ ಜಾಲತಾನದ ಮುಖ್ಯಸ್ಥೆ ಕಳೆದ ಕೆಲವು ತಿಂಗಳಿನಿಂದ ಸುದ್ದಿಯಲ್ಲಿ ಇರಲಿಲ್ಲ.

ಈಗ ಸುದ್ದಿ ಏನಪ್ಪಾ ಅಂದರೆ ರಮ್ಯ (ದಿವ್ಯ ಸ್ಪಂದನ) 2011 ರಲ್ಲಿ ಹೇಳಿಕೊಂಡಿದ್ದ ಎಲೆಕ್ಟ್ರಾನಿಕ್ ಉಪಕರಣಗಳ ಬ್ಯೂಸನೆಸ್ ಮ್ಯಾನ್ ರಾಫೆಲ್ ಜೊತೆ ಕಂಕಣ ಭಾಗ್ಯ ಕೂಡಿ ಬಂದಿದೆ. ರಾಫೆಲ್ ಹಾಗೂ ರಮ್ಯ ಐ ಪಿ ಎಲ್ ಕ್ರಿಕೆಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ರಮ್ಯ ಅಭಿನಯದ ಸಂಜು ವೆಡ್ಸ್ ಗೀತಾ ಹಾಡುಗಳ ಬಿಡುಗಡೆ ಸಂರಂಭಕ್ಕು ಸಹ ರಾಫೆಲ್ ಆಗಮಿಸಿದ್ದರು. ಎಂಟು ವರ್ಷಗಳ ಸ್ನೇಹದ ನಂತರ ಇವರಿಬ್ಬರು ಮದುವೆ ಆಗುತ್ತಿರುವ ಸುದ್ದಿ ಹೊರಬಿದ್ದಿದೆ.

ರಮ್ಯ ತಮ್ಮ ರಾಜಕೀಯ ಕ್ಷೇತ್ರದ ಬಗ್ಗೆ ತಮ್ಮ ತಂದೆ ಶ್ರೀ ನಾರಾಯಣ್ ಅವರ ಸಾವಿನ ನಂತರ ಗಮನ ಹರಿಸಿದರು. ಮಂಡ್ಯ ಲೋಕ ಸಭಾ ಕ್ಷೇತ್ರದಿಂದ ಮಧ್ಯಂತರ ಚುನಾವಣೆಯಲ್ಲಿ ಗೆದ್ದರು ಸಹ. ಲೋಕ ಸಭೆಯಲ್ಲಿ ಯುವ ನೇತಾರರಾಗಿ ಅವರು ಮಾತನಾಡಿದ್ದು ಸಹ ಮೆಚ್ಚುಗೆ ಗಳಿಸಿತ್ತು. ಆನಂತರ ಅವರು ಮತ್ತೊಂದು ಲೋಕ ಸಭೆಯಲ್ಲಿ ಸೋತರು, ಕಾಂಗ್ರೆಸ್ಸ್ ಪಕ್ಷ ಅವರಿಗೆ ದೆಹಲಿಯಲ್ಲಿ ಸಾಮಾಜಿಕ ಜಾಲತನದ ಮುಖ್ಯಸ್ಥೆ ಎಂದು ನೇಮಕ ಸಹ ಮಾಡಿತು. ಅವರು ಚುನಾವಣೆ ಗೆದ್ದ ಮಂಡ್ಯ ಕ್ಷೇತ್ರದಲ್ಲಿ ಮತದಾನ ಮಾಡಲು ಸಹ ಬರದಷ್ಟೂ ರಮ್ಯ ಬ್ಯುಸಿ ಆದರು.

ಈಗ 37 ವರ್ಷದ ರಮ್ಯ ಅವರ ಮದುವೆ ಬಗ್ಗೆ ಮಾತು ಕೇಳಿ ಬರುತ್ತಿದೆ. ದುಬೈ ಅಲ್ಲಿ ರಾಫೆಲ್ (ಪೋರ್ಚುಗಲ್ ಮೂಲ) ಜೊತೆ ವಿವಾಹ ಎಂದು ತಿಳಿಯಲಾಗಿದೆ.

ಅಭಿ ಸಿನಿಮಾ ಇಂದ ಚಿತ್ರರಂಗಕ್ಕೆ ಕಾಲಿಟ್ಟ ರಮ್ಯ ನಾಗರಹಾವು ಕೋಡಿ ರಾಮಕೃಷ್ಣ ಅವರ ನಿರ್ದೇಶನದ ಸಿನಿಮಾ ದಿಗಂತ್ ಜೊತೆ ಅಭಿನಿಸಿದ ಹಾಗೂ ಬಿಡುಗಡೆ ಆದ ಕಡೆಯ ಸಿನಿಮಾ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.