ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಾಗಿಣಿ ವಿಚಾರಣೆ ಗೌಪ್ಯವಾಗಿ ನಡೆಯುತ್ತಿದೆಯಾ ಅನ್ನೋ ಅನುಮಾನ ಕಾಡ್ತಿದೆ. ಮುಂಜಾನೆಯಿಂದ ಸಾಂತ್ವನ ಕೇಂದ್ರದತ್ತ ಮಹತ್ತರ ಬೆಳವಣಿಗೆ ನಡೆದಿದೆ. ಇಲ್ಲಿಗೆ ಸ್ಥಳೀಯ ಪೊಲೀಸರು ಹಾಗೂ ಕೆಲ ಮಹಿಳಾ ಸಿಬ್ಬಂದಿ ಭೇಟಿ ಕೊಟ್ಟಿದ್ದಾರೆ.
ಅಧಿಕಾರಿಗಳೇ ಖುದ್ದು ರಾಗಿಣಿಯನ್ನು ಕರೆದುಕೊಂಡು ಬಂದು ಸಿಸಿಬಿ ಕಚೇರಿಯಲ್ಲಿ ವಿಚಾರಣೆ ಮಾಡಲಿದ್ದಾರೆ ಎಂಬ ವಿಚಾರ ತಿಳಿದು ಬಂದಿತ್ತು. ಆದರೆ, ಸದ್ಯ ಸಿಸಿಬಿ ಅಧಿಕಾರಿಗಳು ಸಾಂತ್ವನ ಕಚೇರಿಯ ಮುಖ್ಯಬಾಗಿಲಿನಿಂದ ತೆರಳದೆ ಹಿಂಬದಿ ಗೇಟ್ ಮೂಲಕ ತೆರಳಿ ಅಲ್ಲಿಯೇ ವಿಚಾರಣೆ ನಡೆಸುತ್ತಿದ್ದಾರೆ. ಈ ರೀತಿಯ ಬೆಳವಣಿಗೆಯಿಂದಾಗಿ ಹಲವು ಅನುಮಾನಗಳು ವ್ಯಕ್ತವಾಗಿವೆ.
ಈಗಾಗಲೇ ಸಿಸಿಬಿ ಕಚೇರಿಯಿಂದ ಸಂಜನಾ ಆಪ್ತ ರಾಹುಲ್ ಹಾಗೂ ರಾಗಿಣಿ ಆಪ್ತ ರವಿಶಂಕರ್ನನ್ನು ಹೊರಗೆ ಕರೆದೊಯ್ದಿದ್ದಾರೆ. ಸದ್ಯ ರಾಗಿಣಿ ವಿಚಾರಣೆ ಬಿರುಸಿನಿಂದ ಸಾಗಿರುವ ಸಾಧ್ಯತೆಗಳಿವೆ. ವಿಚಾರಣೆ ಬಗ್ಗೆ ಅಧಿಕಾರಿಗಳು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.