ಹೈದರಾಬಾದ್(ತೆಲಂಗಾಣ): ‘ಧಡಕ್' ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಎವರ್‌ಗ್ರೀನ್ ನಟಿ ಶ್ರೀದೇವಿ ಅವರ ಪುತ್ರಿ ಜಾನ್ವಿ ಕಪೂರ್ ಗಾಯಕ್ಕೊಳಗಾಗಿದ್ದು, ಇದರ ಕೆಲವೊಂದು ಫೋಟೋ ವೈರಲ್ ಆಗಿವೆ.
ನಟಿ ಜಾನ್ವಿ ಕಪೂರ್ ಕೈಗೆ ಏನಾಗಿದೆ ಎಂಬ ಖಚಿತ ಮಾಹಿತಿ ಲಭ್ಯವಾಗಿಲ್ಲವಾದ್ರೂ, ಅವರ ಎಡಗೈ ಗಾಯವಾಗಿದ್ದು, ಆರ್ಮ್ ಸ್ಲಿಂಗ್ ಧರಿಸಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಏನಾಗಿದೆ ಎಂದು ಕೇಳಿರುವ ಪ್ರಶ್ನೆಗೆ ನಟಿ ಉತ್ತರ ನೀಡಲು ಹಿಂದೇಟು ಹಾಕಿದ್ದಾರೆ.
- " class="align-text-top noRightClick twitterSection" data="
">
ನಟಿ ಜಾನ್ವಿ ಕಪೂರ್ ತಮ್ಮ ಮುಂಬರುವ ಚಿತ್ರ ಮಿಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಶೂಟಿಂಗ್ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ.
ಸದಾ ಸಾಮಾಜಿಕ ಜಾಲತಾಣದಲ್ಲಿ ಫುಲ್ ಬ್ಯುಸಿಯಾಗಿರುವ ನಟಿ ಸಿಕ್ಕಾಪಟ್ಟೆ ಬೋಲ್ಡ್ & ಹಾಟ್ ಆಗಿರುವ ಫೋಟೋ ಶೇರ್ ಮಾಡಿ, ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದರು. ಕಳೆದ ಕೆಲ ದಿನಗಳ ಹಿಂದೆ ಸಾಂಪ್ರದಾಯಿಕ ಬ್ರೌನ್ ಲೆಹೆಂಗಾ ತೊಟ್ಟು ಗಮನ ಸೆಳೆದಿದ್ದರು.