ETV Bharat / sitara

ನಿರ್ದೇಶಕನಿಗೆ 88 ಸಾವಿರ ದಂಡ ವಿಧಿಸಿದ ಜಿಹೆಚ್​​​ಎಂಸಿ....ವರ್ಮಾ ಮಾಡಿದ ತಪ್ಪೇನು...? - Power star movie poster

ಪವನ್ ಕಲ್ಯಾಣ್ ಕುರಿತಂತೆ ಸಿನಿಮಾ ಮಾಡಿರುವ ನಿರ್ದೇಶಕ ರಾಮ್​​ಗೋಪಾಲ್ ವರ್ಮಾಗೆ ಎಲ್ಲೆಂದರಲ್ಲಿ ಚಿತ್ರದ ಪೋಸ್ಟರ್ ಅಂಟಿಸಿರುವ ಕಾರಣ ಹೈದರಾಬಾದ್ ಮಹಾನಗರ ಪಾಲಿಕೆ 88 ಸಾವಿರ ರೂಪಾಯಿ ದಂಡ ವಿಧಿಸಿದೆ

Ramgopal varma
ವರ್ಮಾ
author img

By

Published : Jul 30, 2020, 5:17 PM IST

ವಿವಾದಾತ್ಮಕ ನಿರ್ದೇಶಕ ರಾಮ್​ಗೋಪಾಲ್ ವರ್ಮಾ ಅವರಿಗೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್​​​ 88 ಸಾವಿರ ರೂಪಾಯಿ ದಂಡ ವಿಧಿಸಿದೆ. ಅಷ್ಟಕ್ಕೂ ದಂಡ ಕಟ್ಟುವಂತ ತಪ್ಪು ರಾಮ್​ಗೋಪಾಲ್ ವರ್ಮಾ ಮಾಡಿದ್ದಾದ್ರೂ ಏನು ಅಂತೀರಾ...?

ವಿವಾದಾತ್ಮಕ ಚಿತ್ರಗಳನ್ನು ಮಾಡುವ ಮೂಲಕವೇ ಸಮಸ್ಯೆಯಲ್ಲಿ ಸಿಲುಕುವ ರಾಮ್​​ಗೋಪಾಲ್ ವರ್ಮಾ ಈ ಬಾರಿ ಪವನ್ ಕಲ್ಯಾಣ್​​ಗೆ ಸಂಬಂಧಿಸಿದ 'ಪವರ್ ಸ್ಟಾರ್ ' ಸಿನಿಮಾ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದೆ ಪವರ್ ಸ್ಟಾರ್ ಅಭಿಮಾನಿಗಳು ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಕೂಡಾ ರಾಮ್​ಗೋಪಾಲ್ ವರ್ಮಾ ಆರೋಪಿಸಿದ್ದರು.

ಇನ್ನು ಈ ಚಿತ್ರದ ಪೋಸ್ಟರ್​​ಗಳನ್ನು ಎಲ್ಲೆಂದರಲ್ಲಿ ಅಂಟಿಸಿರುವ ಕಾರಣ ರಾಮ್​ಗೋಪಾಲ್ ವರ್ಮಾಗೆ 88 ಸಾವಿರ ರೂಪಾಯಿ ದಂಡ ಕಟ್ಟುವಂತೆ ಹೈದರಾಬಾದ್ ಮಹಾನಗರ ಪಾಲಿಕೆ ಆದೇಶಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಮಾಗೆ ದಂಡ ವಿಧಿಸುತ್ತಿರುವುದು ಇದು ಎರಡನೇ ಬಾರಿ. ಇದೇ ತಿಂಗಳ 22 ರಂದು ಹೈದರಾಬಾದ್​​​ ಜ್ಯೂಬ್ಲಿ ಹಿಲ್ಸ್​​ ಬಳಿ ಕೂಡಾ 2 ಪೋಸ್ಟರ್ ಅಂಟಿಸಿದ್ದಕ್ಕೆ 4 ಸಾವಿರ ರೂಪಾಯಿ ದಂಡ ವಿಧಿಸಲಾಗಿತ್ತು. ಆದರೆ ಈ ಬಾರಿ ಸುಮಾರು 30ಕ್ಕೂ ಹೆಚ್ಚು ಪೋಸ್ಟರ್​​​​ಗಳು ಕಂಡುಬಂದ ಕಾರಣ 88 ಸಾವಿರ ದಂಡ ವಿಧಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.