ETV Bharat / sitara

ಅಜಿತ್ ​ಜೊತೆ ಕೆಲಸ ಮಾಡುವುದು ಬಹುದಿನಗಳ ಕನಸು: ಹುಮಾ ಖುರೇಷಿ

author img

By

Published : Feb 26, 2022, 9:15 PM IST

ಫೆಬ್ರವರಿ 25 ರಂದು ಬಿಡುಗಡೆಯಾದ ಅಜಿತ್ ಅಭಿನಯದ ವಲಿಮೈ ಚಿತ್ರದಲ್ಲಿ ಹುಮಾ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದ ಆ್ಯಕ್ಷನ್​ ಪಾತ್ರಗಳಿಗೆ ಜನರಿಂದ ಬರುತ್ತಿರುವ ಮನ್ನಣೆಗೆ ಸಂತೋಷ ವ್ಯಕ್ತ ಪಡಿಸಿದ್ದಾರೆ.

Huma Qureshi amazed by love of Ajith fans
ವಲಿಮೈ ಚಿತ್ರದಲ್ಲಿ ಹುಮಾ ಪೊಲೀಸ್ ಪಾತ್ರದಲ್ಲಿ

ತಮಿಳುನಾಡು: ಅಜಿತ್ ಅಭಿನಯದ ವಲಿಮೈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ನಟಿ ಹುಮಾ ಖುರೇಷಿ, ಅಜಿತ್ ಅಭಿಮಾನಿಗಳು ತಮ್ಮ ಮೇಲೆ ತೋರುತ್ತಿರುವ ಪ್ರೀತಿಗೆ ಫಿದಾ ಆಗಿದ್ದಾರೆ. ನಿರ್ದೇಶಕ ಹೆಚ್. ವಿನೋತ್ ಅವರ ವಾಲಿಮೈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ನಟಿಸಿದ್ದಾರೆ. ಆ್ಯಕ್ಷನ್ ಎಂಟರ್‌ಟೈನರ್‌ನಲ್ಲಿ ಹುಮಾ ಖುರೇಷಿ ಅವರ ಆ್ಯಕ್ಷನ್ ಬ್ಲಾಕ್‌ಗಳಿಗೆ ಅಭಿಮಾನಿಗಳಿಂದ ಹೆಚ್ಚು ಪ್ರಶಂಸೆ ಬಂದಿದೆ.

ಉತ್ಸಾಹಭರಿತ ಅಜಿತ್ ಅಭಿಮಾನಿಗಳ ಪ್ರೀತಿಯಿಂದ ನಾನು ಅಕ್ಷರಶಃ ಆಶ್ಚರ್ಯಚಕಿತಳಾಗಿದ್ದೇನೆ. ನಾನು ಅಜಿತ್ ಕುಮಾರ್ ಅಭಿಮಾನಿಗಳಿಗೆ ನನ್ನ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ ಎಂದು ಹುಮಾ ಖುರೇಷಿ ಹೇಳುತ್ತಾರೆ.

ಅಜಿತ್ ಸರ್ ಜೊತೆ ಕೆಲಸ ಮಾಡುವುದು ಈಗ ನನಸಾಗುವ ಬಹುದಿನಗಳ ಕನಸಾಗಿದೆ. ತುಂಬಾ ಪ್ರಾಮುಖ್ಯತೆ ಹೊಂದಿರುವ ಈ ಪಾತ್ರವನ್ನು ನನಗೆ ಉಡುಗೊರೆಯಾಗಿ ನೀಡಿದ ಅಜಿತ್ ಸರ್, ನಿರ್ಮಾಪಕ ಬೋನಿ ಕಪೂರ್ ಮತ್ತು ನಿರ್ದೇಶಕ ಎಚ್ ವಿನೋತ್ ಅವರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದರು.

ಇದನ್ನೂ ಓದಿ: ನಾನು ಸಿನಿಮಾ ಕಲೆಕ್ಷನ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.. ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗಬೇಕೆಂದ ನಟ ಧನ್ವೀರ್..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.