100ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಇಂದು ತೆರೆಕಂಡಿರುವ 'ಆದಿಲಕ್ಷ್ಮಿ ಪುರಾಣ' ಸಿನಿಮಾಗೆ ಸಿನಿಪ್ರಿಯರಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಚಿತ್ರತಂಡ ಹೇಳಿದ ಹಾಗೆ 'ಆದಿಲಕ್ಷ್ಮಿ ಪುರಾಣ' ಔಟ್ ಆ್ಯಂಡ್ ಔಟ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ. ಕುಟುಂಬ ಸಮೇತ ಈ ಸಿನಿಮಾ ನೋಡಿ ಎಂಜಾಯ್ ಮಾಡಬಹುದು.
ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಆದಿಯಾಗಿ ನಿರೂಪ್ ಭಂಡಾರಿ ಹಾಗೂ ಲಕ್ಷ್ಮಿ ಪಾತ್ರದಲ್ಲಿ ರಾಧಿಕಾ ಪಂಡಿತ್ ಮಿಂಚಿದ್ದಾರೆ. ಈ ತಾರೆಯರ ಜುಗಲ್ಬಂಧಿಯನ್ನು ಸಿನಿಪ್ರಿಯರು ಎಂಜಾಯ್ ಮಾಡಿದ್ದು ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾಗುತ್ತಿದೆ.
ಇನ್ನು ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರಕ್ಕೆ ಭೇಟಿ ನೀಡಿದ ನಿರ್ದೇಶಕಿ ಪ್ರಿಯಾ, ನಟ ನಿರೂಪ್ ಭಂಡಾರಿ, ನಟಿ ತಾರಾ ಅನುರಾಧ ಅವರು ಅಭಿಮಾನಿಗಳ ಜತೆ ಕುಳಿತು ಸಿನಿಮಾ ನೋಡಿದ್ರು. ಮೊದಲ ದಿನವೇ ಅಭಿಮಾನಿಗಳಿಂದ ಸಿಕ್ಕ ಮೆಚ್ಚುಗೆಗೆ ಮನಸೋತರು.