ಹುಚ್ಚ ವೆಂಕಟ್ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಬಾರಿ ರಚಿತಾ ರಾಮ್ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಟೀಸರ್ನಲ್ಲಿ ರಚಿತಾ ರಾಮ್ ಲಿಪ್ ಕಿಸ್ ಮಾಡಿ ಸಿಗರೇಟ್ ಸೇದಿದ್ದಾರೆ. ಇದನ್ನು ವಿರೋಧಿಸಿರುವ ಹುಚ್ಚ ವೆಂಕಟ್ ರಚಿತಾಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
- " class="align-text-top noRightClick twitterSection" data="">
ಯೂಟ್ಯೂಬ್ನಲ್ಲಿ ವಿಡಿಯೋವೊಂದನ್ನು ಹಾಕಿರುವ ವೆಂಕಟ್, ಈ ವಿಡಿಯೋ ರಚಿತಾ ರಾಮ್ಗೆ ಎಂದು ಹೇಳುತ್ತ, ಯಾಕ್ರೀ ಈ ರೀತಿಯ ಪಾತ್ರಗಳನ್ನ ಮಾಡಿ ಜನರನ್ನ ಹಾಳ್ ಮಾಡ್ತೀರಾ.. ನೀವು ಸಿಗರೇಟ್ ಸೇದಿದ್ದೀರಾ.. ಲಿಪ್ ಕಿಸ್ ಮಾಡಿದ್ದೀರ. ಇದ್ರಿಂದ ಏನಾಗುತ್ತೆ?. ಥಿಯೇಟರ್ನಲ್ಲಿ ಹೆಣ್ಣು ಮಕ್ಕಳು ಕೂತು ಸಿನಿಮಾ ನೋಡೋಕೆ ಮುಜುಗರ ಆಗುತ್ತೆ ಎಂದು ಹೇಳಿದ್ದಾರೆ.
ತಮ್ಮ ಮಾತನ್ನು ಮುಂದುವರೆಸಿರುವ ಹುಚ್ಚ ವೆಂಕಟ್, ಎಲ್ಲವನ್ನೂ ನಿರ್ದೇಶಕರ ಮೇಲೆ ಹಾಕ್ತೀರಾ.. ನಿಮ್ಮ ಒಪ್ಪಿಗೆ ಪಡೆದೇ ನಿರ್ದೇಶಕರು ಸಿನಿಮಾ ಮಾಡೋದು.. ನಿಮ್ಮ ಟ್ಯಾಲೆಂಟ್ ಈ ರೀತಿ ಯಾಕ್ ತೋರಿಸ್ತೀರ.. ಇದೆಲ್ಲ ಟ್ಯಾಲೆಂಟಾ ಎಂದು ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾರೆ. ಕನ್ನಡ ಇಂಡಸ್ಟ್ರಿ ಅಂದ್ರೆ ಒಂದೂ ಅಶ್ಲೀಲ ಇಲ್ಲದಂತೆ ಇತ್ತು. ಇಂದು ಹೇಗಾಗಿದೆ ನೋಡಿ ಎಂದು ಹುಚ್ಚ ವೆಂಕಟ್ ವಿಡಿಯೋದಲ್ಲಿ ಕಿಡಿಕಾರಿದ್ದಾರೆ.