ETV Bharat / sitara

'ಹೌಸ್​ ಫುಲ್​-4' ಪ್ರಚಾರಕ್ಕೆ ಹೊರಟಿತು ಚುಕುಬುಕು ರೈಲು! - ಹೌಸ್​ ಫುಲ್​​-4 ಸಿನಿಮಾ ಪ್ರಚಾರಕ್ಕೆ ರೈಲು ಬಳಕೆ

ಹೌಸ್​​ಫುಲ್​-4 ಚಿತ್ರತಂಡ ತಮ್ಮ ಪ್ರಚಾರಕ್ಕಾಗಿ ರೈಲನ್ನು ಬಳಸಿಕೊಂಡಿದ್ದು, ಮೊದಲು ಮುಂಬೈಯಿಂದ ದೆಹಲಿವರೆಗೆ ಪ್ರಯಾಣ ಮಾಡುವ ಮೂಲಕ ಸಿನಿಮಾ ಪ್ರಚಾರ ಮಾಡಿದೆ. ಚಿತ್ರ ತಂಡ ಪ್ರಯಾಣಿಸಿದ ರೈಲಿನ ಮೇಲೆ​ ಸಿನಿಮಾದ ಪೋಸ್ಟರ್​ಗಳನ್ನು ಅಂಟಿಸಲಾಗಿತ್ತು.

ಹೌಸ್​ ಫುಲ್​-4 ಚಿತ್ರತಂಡ
author img

By

Published : Oct 17, 2019, 2:16 PM IST

ಬಾಲಿವುಡ್​ ಅಕ್ಷಯ್​ ಕುಮಾರ್​ ನಾಯಕನಾಗಿರುವ ಹೌಸ್​​ಫುಲ್​-4 ಸಿನಿಮಾ ಪ್ರಚಾರ ಬಲು ಜೋರಾಗಿಯೇ ಸಾಗಿದೆ. ಚಿತ್ರತಂಡ ಪ್ರಚಾರಕ್ಕಾಗಿ ವಿಶೇಷ ತಂತ್ರವನ್ನು ರೂಪಿಸಿದೆ.

ಹೌಸ್​​ಫುಲ್​-4 ಚಿತ್ರತಂಡ ತಮ್ಮ ಪ್ರಚಾರಕ್ಕಾಗಿ ರೈಲು ಬಳಸಿಕೊಂಡಿದ್ದು, ಮೊದಲು ಮುಂಬೈಯಿಂದ ದೆಹಲಿವರೆಗೆ ಪ್ರಯಾಣ ಮಾಡುವ ಮೂಲಕ ಸಿನಿಮಾ ಪ್ರಚಾರ ಮಾಡಿದೆ. ಚಿತ್ರತಂಡ ಪ್ರಯಾಣಿಸಿದ ರೈಲಿನ ಮೇಲೆ​ ಸಿನಿಮಾದ ಪೋಸ್ಟರ್​ಗಳನ್ನು ಅಂಟಿಸಲಾಗಿತ್ತು.

ಹೀಗೆ ಪ್ರಚಾರ ಮಾಡುವುದನ್ನು ಚಿತ್ರತಂಡ 'ಪ್ರಮೋಷನ್​ ಆನ್​ ವೀಲ್'​ ಎಂದು ಕರೆದಿದೆ. ರೈಲಿನಲ್ಲಿ ಮೋಜು ಮಸ್ತಿ ಮಾಡಿಕೊಂಡು ಪ್ರಯಾಣo ಜೊತೆ ಪ್ರಚಾರ ಮಾಡಿರುವ ವಿಡಿಯೋವನ್ನು ಕಿಲಾಡಿ ಅಕ್ಷಯ್​ ಕುಮಾರ್​ ತಮ್ಮ ಟ್ಟಿಟ್ಟರ್​ ಖಾತೆಯಲ್ಲಿ ಶೇರ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಕಿಲಾಡಿ ಟೀಂ ಹೌಸ್​ ಫುಲ್​ 4 ಸಿನಿಮಾದ 'ಬಾಲ ಬಾಲ' ಹಾಡಿಗೆ ಹೆಜ್ಜೆ ಹಾಕಿದೆ.

ಭಾರತೀಯ ರೈಲ್ವೆ ಇದೀಗ ಹೊಸ ಸೌಲಭ್ಯವನ್ನು ನೀಡಿದ್ದು, ಸಿನಿಮಾ ಪ್ರಚಾರಕ್ಕಾಗಿ ರೈಲುಗಳನ್ನು ಕಾಯ್ದಿರಿಸಬಹುದು ಎಂದು ಅನುಮತಿ ನೀಡಿದೆ. ಹೌಸ್​ಫುಲ್​ ಸಿನಿಮಾಕ್ಕೆ ಫರಾದ್​ ಸಾಮ್ಜಿ ಆ್ಯಕ್ಷನ್​ ಕಟ್​ ಹೇಳಿದ್ದು, ಸಾಜಿದ್​ ನಡಿಯಾದ್​ವಾಲಾ ಬಂಡಬಾಳ ಹಾಕಿದ್ದಾರೆ. ಇನ್ನು ಈ ಸಿನಿಮಾ ಇದೇ ತಿಂಗಳ 26ಕ್ಕೆ ತೆರೆಗೆ ಅಪ್ಪಳಿಸಲಿದೆ.

Intro:ಬೇಂದ್ರೆ ಅವರಿಗೆ ಏನನ್ನಾದರೂ ಒಪ್ಪಿಸುವುದು ಅಂದರೆ ತುಂಬಾ ಕಷ್ಟ ಕಷ್ಟ ಅಂತೆ.. ಅದು ಯಾಕೆ ಹೇಗೆ ಏನು ಎಂಬುದಕ್ಕೆ ಉತ್ತರ ನೀಡುವುದರಲ್ಲಿ ಸಾಕಾಗಿ ಹೋಗುತ್ತದೆ ಅದಕ್ಕೆ ಎರಡು ಉದಾಹರಣೆಯನ್ನು ಕೊಡುತ್ತಾರೆ ರವಿಬೆಳಗೆರೆಯವರು..

Body:ಕಲಬುರ್ಗಿಯವರು ನನ್ನ ಕವಿತೆಗಳನ್ನು ವಿದ್ಯಾರ್ಥಿಗಳಿಗೆ ಚೆನ್ನಾಗಿ ಹೇಳಿ ಕೊಡ್ತಾರಂತೆ ಎಂದು ಬೇಂದ್ರೆಯವರು ಒಬ್ಬರ ಬಳಿ ಕೇಳಿದ್ರಂತೆ. ಅವರು ಹೌದು ಸರ್ ಎಂದಾಗ ಅವರನ್ನು ಮನೆಗೆ ಬರಕ್ಕೆ ಹೇಳಿ ಅಂತ ಬೇಂದ್ರೆ ಹೇಳಿದ್ರಂತೆ.
ಹೆಚ್ಚಾಗಿ ಯಾರನ್ನು ಮನೆಗೆ ಕರೆಯದ ಬೇಂದ್ರೆ ಅವರು ಕಲಬುರ್ಗಿಯವರನ್ನು ಮನೆಗೆ ಆಹ್ವಾನಿಸಿದ್ದು ಆಶ್ಚರ್ಯ ವಂತೆ ಇದಕ್ಕೆ ಪ್ರತಿಕ್ರಿಯಿಸಿ ಕಲಬುರ್ಗಿಯವರು ಮನೆಗೆ ಬಂದರಂತೆ.
ಬೇಂದ್ರೆ ಅವರು ಕಲಬುರ್ಗಿಯವರನ್ನು ಕೇಳಿದ್ರಂತೆ ಹೇಗೆ ನೀವು ನನ್ನ ಕವಿತೆಗಳನ್ನು ಹೇಳಿ ಕೊಡುತ್ತೀರಾ ಎಂದು ಅದಕ್ಕೆ ಕಲಬುರ್ಗಿ ಅವರು ಒಂದು ಕವಿತೆಯನ್ನು ತಮ್ಮ ಧಾಟಿಯಲ್ಲಿ ಬೇಂದ್ರೆಯವರಿಗೆ ತಿಳಿಸಿದರಂತೆ..
ಮತ್ತೆ ಬೇಂದ್ರೆಯವರು ಅದು ಹೇಗೆ ಎಂದು ಕಲಬುರ್ಗಿಯವರನ್ನು ಪ್ರಶ್ನಿಸಿದರಂತೆ. ಅದಕ್ಕೆ ಕಲಬುರ್ಗಿ ನಿಮ್ಮ ಕವಿತೆಗಳು ಹೈಟ್ ನಲ್ಲಿವೆ ಬೇರೆಯವರಿಗಿಂತ ಅಂದ್ರಂತೆ.
ತಕ್ಷಣವೆ ಬೇಂದ್ರೆ ಬೇರೆ ಅಂದರೆ ಯಾರು ಎಂದರಂತೆ. ಮತ್ತೆ ಕಲಬುರ್ಗಿಯವರು ಯಾರ ಹೆಸರು ಹೇಳುವುದು ಎಂದು ಪರದಾಡುತ್ತಾ ಕಣವಿ ಅವರು ಎಂದರಂತೆ. ಅದಕ್ಕೆ ಬೇಂದ್ರೆ ಅವರ ಹೆಸರಿನಲ್ಲಿಯೇ ಇದೆಯಲ್ಲ ಎಂದು ಹೇಳಿದರಂತೆ. ಇಲ್ಲಿ ಕಣವಿ ಅವರನ್ನು ಉದಾಹರಣೆಯಾಗಿಟ್ಟುಕೊಂಡು ಅಷ್ಟೇ ಎಂದು ರವಿ ಬೆಳಗೆರೆ ಹೇಳಿ ಮುಗಿಸಿದರು.
ಬೇಂದ್ರೆ ಅವರ ಮತ್ತೊಂದು ಪ್ರಸಂಗವನ್ನು ಬಣ್ಣಿಸಿದ ರವಿಬೆಳಗೆರೆ, ಒಮ್ಮೆ ಬೇಂದ್ರೆ ಅವರನ್ನು ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಕರೆಯಲು ಕಾಲೇಜಿನವರು ಬಂದಿದ್ದರಂತೆ. ಆಗ ಬೇಂದ್ರೆ ಮನೆಗೆ ಕಾರನ್ನು ಕಳುಹಿಸಿ ಬರುತ್ತೇನೆ ಎಂದರು. ಕಾಲೇಜಿನವರು ನಮ್ಮದು ಚಿಕ್ಕ ಕಾಲೇಜು ಕಾರ್ ನಮ್ಮ ಬಳಿ ಇಲ್ಲ ಮುಂದಿನ ವರ್ಷ ಕಳುಹಿಸಲಾಗುವುದು, ಈ ವರ್ಷ ಬಸ್ ನಲ್ಲಿ ಬನ್ನಿ ಎಂದು ವಿನಂತಿಸಿದರಂತೆ. ಅದಕ್ಕೆ ಬೇಂದ್ರೆ ಅವರು ಸಿಟಿ ಬಸ್ ಸ್ಟ್ಯಾಂಡಿನಲ್ಲಿ ಮಂಗ್ಯಾ ಮಾಡುವವನು ಇದ್ದಾನೆ. ಅವನನ್ನು ಈ ವರ್ಷ ಕರೆದುಕೊಂಡು ಹೋಗಿ, ಮುಂದಿನ ವರ್ಷ ನಾನು ಬರ್ತೀನಿ ಎಂದರಂತೆ.
ಇದನ್ನು ಹೇಳಿದ ಕೇಳಿಸಿಕೊಂಡ ಮನೆಯ ಇತರ ಸದಸ್ಯರು ಕೂಡ ನಗೆಗಡಲಲ್ಲಿ ತೇಲಿದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.