ಕಲರ್ಸ್ ಕನ್ನಡ ವಾಹಿನಿಯಲ್ಲಿ ಚಂದು ಗೌಡ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಚಾಟ್ ಕಾರ್ನರ್ ಶೋನಲ್ಲಿ ಪ್ರೇಮಿಗಳ ದಿನದಂದು ಚಂದನವನದ ಕ್ಯೂಟ್ ಕಪಲ್ ಹಿತಾ ಚಂದ್ರಶೇಖರ್ ಹಾಗೂ ಕಿರಣ್ ಶ್ರೀನಿವಾಸ್ ಬರಲಿದ್ದಾರೆ. ಫೆಬ್ರವರಿ 14ರ ಚಾಟ್ ಕಾರ್ನರ್ ಶೋನಲ್ಲಿ ಇವರ ಸಂಚಿಕೆ ಪ್ರಸಾರವಾಗಲಿದೆ.
ಚಾಟ್ ಕಾರ್ನರ್ನಲ್ಲಿ ತಮ್ಮ ವೈಯಕ್ತಿಕ ಜೀವನದ ಕುರಿತು ಮಾಹಿತಿ ಹಂಚಿಕೊಳ್ಳಲಿರುವ ಈ ದಂಪತಿ, ಲವ್ ಸ್ಟೋರಿಯನ್ನೂ ಶೇರ್ ಮಾಡಲಿದ್ದಾರೆ. ವೃತ್ತಿ ಜೀವನದ ಕುರಿತು ಈ ಜೋಡಿ ಮಾತನಾಡಲಿದ್ದಾರೆ. ಅಂದಹಾಗೆ ಹಿತಾ ಹಾಗೂ ಕಿರಣ್ ಶ್ರೀನಿವಾಸ್ ದಂಪತಿ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲು ಬೊಂಬಾಟ್ ಭೋಜನ, ತುತ್ತಾ ಮುತ್ತಾ ಸೇರಿದಂತೆ ಹಲವು ಶೋಗಳಲ್ಲಿ ಇವರು ಭಾಗವಹಿಸಿದ್ದಾರೆ.
ಚಾಟ್ ಕಾರ್ನರ್ ಶೋ ಹಲವು ಕಾರಣಗಳಿಂದಾಗಿ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಇದರಲ್ಲಿ ಸೆಲೆಬ್ರಿಟಿಗಳು ತಮ್ಮ ಮನದ ಮಾತನ್ನು ಹಂಚಿಕೊಳ್ಳುವುದರ ಜೊತೆಗೆ ತಮ್ಮ ಅಡುಗೆಯ ಕೌಶಲ್ಯವನ್ನು ತೋರಿಸಬೇಕು. ಕಾರ್ಯಕ್ರಮದ ಕೊನೆಯಲ್ಲಿ ತಮ್ಮ ಇಷ್ಟವಾದ ಅಡುಗೆಯನ್ನು ಮಾಡಬೇಕಾಗಿರುತ್ತದೆ.