ETV Bharat / sitara

ಧ್ರುವ ಸರ್ಜಾ 'ದುಬಾರಿ' ಚಿತ್ರಕ್ಕೆ ನಾಯಕಿ ಫೈನಲ್​​​...ಶೀಘ್ರದಲ್ಲೇ ಚಿತ್ರೀಕರಣ ಆರಂಭ - Nanda kishor direction Dubari

ನಂದಕಿಶೋರ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಅಭಿನಯಿಸುತ್ತಿರುವ 'ದುಬಾರಿ' ಚಿತ್ರದಲ್ಲಿ ನಟಿಸಲು ಶ್ರೀಲೀಲಾ ಆಯ್ಕೆಯಾಗಿದ್ದಾರೆ. ಇದು ಶ್ರೀಲೀಲಾ ಅಭಿನಯದ ಮೂರನೇ ಚಿತ್ರವಾಗಿದ್ದು ಉದಯ್ ಮೆಹ್ತಾ ಈ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಡಿಸೆಂಬರ್​​ ಮೂರನೇ ವಾರದಿಂದ ಚಿತ್ರೀಕರಣ ಆರಂಭವಾಗಲಿದೆ.

Dubari movie
ಧ್ರುವಾ
author img

By

Published : Dec 5, 2020, 10:15 AM IST

ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಪೊಗರು' ಚಿತ್ರೀಕರಣ ಮುಗಿಸಿದ್ದು ಇತ್ತೀಚೆಗಷ್ಟೇ ಉದ್ದ ಕೂದಲು ತೆಗೆಸಿದ್ದರು.ಇದೀಗ ಅವರು ತಮ್ಮ ಮುಂದಿನ ಸಿನಿಮಾ ಸಿದ್ಧತೆಯಲ್ಲಿದ್ದಾರೆ. ಧ್ರುವ ಅಭಿನಯದ 'ದುಬಾರಿ' ಸಿನಿಮಾ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಚಿತ್ರದಲ್ಲಿ ಧ್ರುವ ಜೊತೆ ನಟಿಸಲು ನಾಯಕಿಯಾಗಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ.

Dubari movie
ಶ್ರೀಲೀಲಾ

'ದುಬಾರಿ' ಚಿತ್ರದಲ್ಲಿ ಶ್ರೀಲೀಲಾ ನಟಿಸಿದರೆ ಇದು ಅವರ ಮೂರನೇ ಸಿನಿಮಾವಾಗಲಿದೆ. ಎ.ಪಿ. ಅರ್ಜುನ್ ನಿರ್ಮಾಣ ಮತ್ತು ನಿರ್ದೇಶನದ 'ಕಿಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ, ನಂತರ ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದಲ್ಲೂ ನಟಿಸಿದ್ದರು. ಆ ಚಿತ್ರದ ನಂತರ ಶ್ರೀಲೀಲಾ ಯಾವುದೇ ಚಿತ್ರದಲ್ಲೂ ನಟಿಸಿರಲಿಲ್ಲ. ಒಂದೆರೆಡು ಚಿತ್ರಗಳಲ್ಲಿ ಅವರು ನಟಿಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬಂದಿದಿತ್ತು. ಆದರೆ ಶ್ರೀಲೀಲಾ ಯಾವ ಸಿನಿಮಾದಲ್ಲಿ ಕೂಡಾ ನಟಿಸಿರಲಿಲ್ಲ. ಲಾಕ್​​​​ಡೌನ್ ಮುಗಿದ ನಂತರ ಇದೀಗ ಅವರು 'ದುಬಾರಿ' ಮೂಲಕ ಎಂಟ್ರಿ ಕೊಡುತ್ತಿದ್ದಾರೆ. 'ದುಬಾರಿ' ಸಿನಿಮಾ ಮುಹೂರ್ತ ಆಚರಿಸಿಕೊಂಡು ಬಹಳ ದಿನಗಳಾಗಿವೆ. ಚಿತ್ರೀಕರಣ ಆರಂಭವಾಗಬೇಕಿದ್ದು ಡಿಸೆಂಬರ್​​ 3ನೇ ವಾರದಲ್ಲಿ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್ ಮಾಡಲಾಗಿದೆ. ಸುದೀಪ್ ಅಭಿನಯದ ಬಚ್ಚನ್​​​​ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಿಸಿರುವ ಉದಯ್ ಮೆಹ್ತಾ ಈ ಚಿತ್ರವನ್ನು ನಿರ್ಮಿಸುತ್ತಿದ್ದು 'ಪೊಗರು' ಖ್ಯಾತಿಯ ನಂದಕಿಶೋರ್ 'ದುಬಾರಿ' ನಿರ್ದೇಶನ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸುತ್ತಿದ್ದಾರೆ.

Dubari movie
'ದುಬಾರಿ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.