ETV Bharat / sitara

ಅಶೋಕ ವನಕ್ಕೆ ಸ್ವಾಗತ ಕೋರಲು ಮಾರ್ಚ್​ನಲ್ಲಿ ಬರುತ್ತಿರುವ 'ಹೀರೋ'

author img

By

Published : Feb 12, 2021, 10:25 AM IST

ಭರತ್ ರಾಜ್​ ನಿರ್ದೇಶನದಲ್ಲಿ ರಿಷಭ್ ಶೆಟ್ಟಿ ಹಾಗೂ ಗಾನವಿ ಲಕ್ಷ್ಮಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಹೀರೋ ಸಿನಿಮಾ ಮಾರ್ಚ್ 5 ಕ್ಕೆ ಬಿಡುಗಡೆಯಾಗುತ್ತಿದೆ. ಇದಕ್ಕೂ ಮುನ್ನ ಈ ಚಿತ್ರವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ರಿಷಭ್​ ಹಾಗೂ ಚಿತ್ರತಂಡ ಪ್ಲ್ಯಾನ್ ಮಾಡಿದ್ದರಂತೆ. ಆದರೆ ಟೀಸರ್​​​ಗೆ ದೊರೆತ ಪ್ರತಿಕ್ರಿಯೆ ನೋಡಿ ಥಿಯೇಟರ್​​ನಲ್ಲಿ ರಿಲೀಸ್ ಮಾಡಲು ನಿರ್ಧರಿಸಿದೆ.

Hero
'ಹೀರೋ'

ರಿಷಭ್ ಶೆಟ್ಟಿ ಅಭಿನಯದ 'ಹೀರೋ' ಸಿನಿಮಾ ಯಾವಾಗ ಬಿಡುಗಡೆಯಾಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈಗ ಆ ಕುತೂಹಲಕ್ಕೆ ತೆರೆಬಿದ್ದಿದೆ. ಸಿನಿಮಾ ಮಾರ್ಚ್ 5ಕ್ಕೆ ಬಿಡುಗಡೆಯಾಗಲಿದೆ ಎಂದು ರಿಷಭ್ ಶೆಟ್ಟಿ ಘೋಷಿಸುವುದರ ಜೊತೆಗೆ ಅಶೋಕವನ ಎಸ್ಟೇಟ್‍ಗೆ ಸ್ವಾಗತವನ್ನೂ ಕೋರಿದ್ದಾರೆ. ಈಗಾಗಲೇ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಸಿನಿಮಾ ಭಾರೀ ಕುತೂಹಲ ಮೂಡಿಸಿದೆ.

  • ನಿಮ್ಮೆಲ್ಲರಿಗೂ ಅಶೋಕವನ ಎಸ್ಟೇಟಿಗೆ ಸ್ವಾಗತ... *ಹೀರೋ* ಮಾರ್ಚ್ 5ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆ. ನಿಮ್ಮೆಲ್ಲರ ಪ್ರೀತಿಯಿರಲಿ.
    We are extremely happy to announce that our film #hero_thefilm releasing on 5th of March in your nearest theatres!
    Thank you for your love and support,🙏😍 pic.twitter.com/HwUAN1JIhw

    — Rishab Shetty (@shetty_rishab) February 11, 2021 " class="align-text-top noRightClick twitterSection" data=" ">

ಇದನ್ನೂ ಓದಿ: ನಟಿ ಪದ್ಮಜಾ ರಾವ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

ಫೆಬ್ರವರಿ 11ಕ್ಕೆ ಚಿತ್ರತಂಡದ ವತಿಯಿಂದ ಒಂದು ಘೋಷಣೆಯಿದೆ ಎಂದು ರಿಷಭ್ ಮೊದಲೇ ಹೇಳಿಕೊಂಡಿದ್ದರು. ಸಿನಿಮಾ ಫೆಬ್ರವರಿಯಲ್ಲೇ ಬಿಡುಗಡೆಯಾಗಬಹುದು ಎಂದು ಮೊದಲೇ ಅಂದಾಜಿಸಿದ್ದರಿಂದ ಸಿನಿಮಾ ಬಿಡುಗಡೆ ಬಗ್ಗೆಯೇ ಏನೋ ಅನೌನ್ಸ್​​​​ಮೆಂಟ್ ಇರಬಹುದು ಎನ್ನಲಾಗಿತ್ತು. ಈ ಊಹೆ ನಿಜವಾಗಿದ್ದು ಮಾರ್ಚ್ 5 ಕ್ಕೆ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ರಿಷಭ್ ಹೇಳಿಕೊಂಡಿದ್ದಾರೆ. ಈ ಮೊದಲು ಅವರು ಈ ಚಿತ್ರವನ್ನು ಓಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡಲು ಯೋಚಿಸಿದ್ದರಂತೆ. ಆದರೆ ಸಿನಿಮಾದ ಟೀಸರ್​​​ಗೆ ಸಿಕ್ಕ ಪ್ರತಿಕ್ರಿಯೆ ನೋಡಿ, ಸಿನಿಮಾವನ್ನು ಥಿಯೇಟರ್​​​ನಲ್ಲೇ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. ಈ ಚಿತ್ರದಲ್ಲಿ ರಿಷಭ್ ಶೆಟ್ಟಿ ಜೊತೆಗೆ ಮಗಳು ಜಾನಕಿ ಧಾರಾವಾಹಿ ಖ್ಯಾತಿಯ ಗಾನವಿ ಲಕ್ಷ್ಮಣ್ ಜೋಡಿಯಾಗಿ ನಟಿಸಿದ್ದಾರೆ. ಇವರೊಂದಿಗೆ ಪ್ರಮೋದ್ ಶೆಟ್ಟಿ ಹಾಗೂ ಇನ್ನಿತರು ನಟಿಸಿದ್ದಾರೆ. ಭರತ್‍ರಾಜ್ ಈ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಅರವಿಂದ್ ಕಶ್ಯಪ್ ಛಾಯಾಗ್ರಹಣ ಮತ್ತು ಅಜನೀಶ್ ಲೋಕನಾಥ್ ಸಂಗೀತವಿರುವ ಈ ಚಿತ್ರವನ್ನು ಚಿಕ್ಕಮಗಳೂರಿನ ಎಸ್ಟೇಟ್​​​ವೊಂದರಲ್ಲಿ ಸಂಪೂರ್ಣವಾಗಿ ಚಿತ್ರೀಕರಿಸಲಾಗಿರುವುದು ವಿಶೇಷ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.