ಹೈದರಾಬಾದ್: 'ತಲೈವಿ' ಸಿನಿಮಾದಲ್ಲಿ ಕಂಗನಾ ರಣಾವತ್ ತಮಿಳುನಾಡು ದಿ. ಮುಖ್ಯಮಂತ್ರಿ ಜೆ.ಜಯಲಲಿತಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಎ.ಎಲ್.ವಿಜಯ್ ಅವರು ರಿಹರ್ಸಲ್ ವೇಳೆಯಲ್ಲಿ ಕಂಗನಾ ಸಾಕಷ್ಟು ಸಮಯವನ್ನು ಕಳೆದ ಕಾರಣ ಚಿತ್ರೀಕರಣವು ಪರಿಪೂರ್ಣವಾಗಿದೆ ಎಂದು ಹೊಗಳಿದರು.
- " class="align-text-top noRightClick twitterSection" data="">
ಜಯಲಲಿತಾ ಜಿ ಅವರ ವ್ಯಕ್ತಿತ್ವವು ಆಕರ್ಷಕವಾಗಿತ್ತು ಮತ್ತು ಅದನ್ನು 'ತಲೈವಿ'ಯಲ್ಲಿ ಮರುಸೃಷ್ಟಿಸುವುದು ಒಂದು ದೊಡ್ಡ ಜವಾಬ್ದಾರಿಯಾಗಿದೆ. ಆದಾಗ್ಯೂ,ನಾಲ್ಕು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಕಂಗನಾ ಜಿ ಅವರ ನಟನೆ ಗಮನಿಸಿದರೆ ಅವರು ನಿಜವಾಗಿಯೂ ಶ್ರಮವಹಿಸಿ ರಿಹರ್ಸಲ್ ಮಾಡಿದರು. ಆ ಪಾತ್ರದಲ್ಲಿ ಅತ್ಯಂತ ಪರಿಪೂರ್ಣತೆ ಸಾಧಿಸಲು ಬಹಳ ಸಮಯ ಪೂರ್ವಾಭ್ಯಾಸ ಮಾಡಿದರು.
ತಲೈವಿಯ ಒಂದು ಸಾಂಗ್ ಚಿತ್ರೀಕರಣ ಒಂದು ತಿಂಗಳು ನಡೆದಿದ್ದು, ಜಯಲಲಿತಾ ಅವರು ರಾಜಕೀಯ ಪ್ರವೇಶಿಸುವ ಮುನ್ನ ಅವರ ಸಿನಿಮೀಯ ಪ್ರಯಾಣದ ಪ್ರಾರಂಭವನ್ನು ಈ ಹಾಡು ಮರುಸೃಷ್ಟಿಸುತ್ತದೆ. ಹಾಡು ಪರಿಪೂರ್ಣವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಲು ಸಾಕಷ್ಟು ಸಲ ರಿಸರ್ಚ್ ನಡೆಸಲಾಗಿದೆ ಎಂದು ನಿರ್ದೇಶಕರು ಹೇಳುತ್ತಾರೆ.
ಜಯಲಲಿತಾ ಜಿ ಅವರು ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ಆಗಿದ್ದರು, ಅವರೊಬ್ಬ ದಂತಕಥೆಯಾಗಿದ್ದು, ಅವರನ್ನು ಜನ ಇನ್ನೂ ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ. ಜಯಲಲಿತಾ ಜಿ ಚಿತ್ರಗಳ ನೋಟ ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನಾವು ವ್ಯಾಪಕವಾದ ಸಂಶೋಧನೆ ನಡೆಸಿದ್ದೇವೆ ಮತ್ತು ಅದಕ್ಕೆ ತಕ್ಕಂತೆ ಅದನ್ನು ಪರದೆಯ ಮೇಲೆ ಪುನರಾವರ್ತಿಸಲು ಪ್ರಯತ್ನಿಸಿದ್ದೇವೆ "ಎಂದು ನಿರ್ದೇಶಕ ವಿಜಯ್ ಅವರು ಹೇಳುತ್ತಾರೆ.
ತಲೈವಿ ಇದೇ ಏಪ್ರಿಲ್ 23 ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.