ETV Bharat / sitara

ಇನ್ನೊಂದು ಕಾಮಿಡಿ ಚಿತ್ರದೊಂದಿಗೆ 'ಹೌಸ್​​ಫುಲ್' ನಿರ್ದೇಶಕ ಹೇಮಂತ್ ಹೆಗಡೆ - ನಿರ್ದೇಶಕ ಹೇಮಂತ್ ಹೆಗಡೆ

ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುವುದರ ಜತೆಗೆ ಅವರು ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರಂತೆ. ಈ ಹಿಂದೆ "ನಿಂಬೆಹುಳಿ" ಮತ್ತು "ಹೌಸ್​​ಫುಲ್" ಚಿತ್ರಗಳಲ್ಲೂ ನಟಿಸಿದ್ದು, ಈ ಚಿತ್ರದಲ್ಲೂ ಒಂದು ಪ್ರಮುಖ ಪಾತ್ರ ಮಾಡುವುದಕ್ಕೆ ನಿರ್ಧರಿಸಿದ್ದಾರೆ.

Director Hemanth Hegde
ನಿರ್ದೇಶಕ ಹೇಮಂತ್ ಹೆಗಡೆ
author img

By

Published : Jun 9, 2021, 10:21 AM IST

ಐದು ವರ್ಷಗಳ ಹಿಂದೆ ಬಿಡುಗಡೆಯಾದ "ಸ" ಎಂಬ ಚಿತ್ರದ ನಂತರ ಹೇಮಂತ್ ಹೆಗಡೆ ಸುದ್ದಿಯೇ ಇರಲಿಲ್ಲ. ಹಾಗೆಲ್ಲ ಸುಮ್ಮನೆ ಕೂರದ ಮತ್ತು ಏನಾದರೊಂದು ಸಿನಿಮಾ ಕೆಲಸದಲ್ಲಿ ನಿರತರಾಗಿರುವ ಹೇಮಂತ್, ಈ ಸಮಯದಲ್ಲಿ ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂಬ ಬಗ್ಗೆ ಹೆಚ್ಚು ಸುದ್ದಿಯಾಗಿಲ್ಲ.

ಇದೀಗ, ಹೇಮಂತ್ ಹೆಗಡೆ ಒಂದು ಕಾಮಿಡಿ ಚಿತ್ರದ ಮೂಲಕ ವಾಪಸ್ಸಾಗುತ್ತಿದ್ದಾರೆ. ಹೇಮಂತ್ ಕಾಮಿಡಿ ಚಿತ್ರಗಳಿಗೆ ಜನಪ್ರಿಯರು. "ಸ" ಚಿತ್ರಕ್ಕೂ ಮುನ್ನ ಅವರು "ನಿಂಬೆಹುಳಿ" ಮತ್ತು "ಹೌಸ್​​ಫುಲ್" ಚಿತ್ರಗಳನ್ನು ನಿರ್ದೇಶಿಸಿದ್ದರು. ಹಿಂದಿಯಲ್ಲೂ ಅವರು ಕಾಮಿಡಿ ಸ್ಕ್ರಿಪ್ಟ್​​​ಗಳನ್ನು ಮಾಡಿಟ್ಟುಕೊಂಡಿದ್ದರು. ಈಗ ಅವರು ಇನ್ನೊಂದು ಕಾಮಿಡಿ ಚಿತ್ರವನ್ನು ನಿರ್ದೇಶಿಸುವುದಕ್ಕೆ ತಯಾರಿ ನಡೆಸಿದ್ದಾರೆ. ಈಗಾಗಲೇ ಫ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಲಾಕ್​​ಡೌನ್ ಮುಗಿದು ಚಿತ್ರೀಕರಣ ಚಟುವಟಿಕೆಗಳಿಗೆ ಅನುಮತಿ ಕೊಡುತ್ತಿದ್ದಂತೆಯೇ ಚಿತ್ರ ಪ್ರಾರಂಭಿಸಲಿದ್ದಾರಂತೆ.

ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುವುದರ ಜತೆಗೆ ಅವರು ಒಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಳ್ಳುತ್ತಿದ್ದಾರಂತೆ.

ಮಲೆನಾಡಿನಲ್ಲಿ ಸಾಗುವ ಈ ಕಥೆಯಲ್ಲಿ ಹೇಮಂತ್ ಜೊತೆಗೆ ಪದ್ಮಜಾ ರಾವ್, ರಮೇಶ್ ಭಟ್, ಶರತ್ ಲೋಹಿತಾಶ್ವ ಮುಂತಾದವರು ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಹಿಂದಿಯ ಖತ್ರೋಂ ಕೆ ಕಿಲಾಡಿ ಮತ್ತು ಬಿಗ್​ ಬಾಸ್​​ನಲ್ಲಿ ಕಾಣಿಸಿಕೊಂಡಿದ್ದ ಲೋಪಮುದ್ರಾ ರೌತ್, ಈ ಚಿತ್ರದಲ್ಲಿ ನಾಯಕಿಯಾಗುವ ಸಾಧ್ಯತೆ ಇದೆಯಂತೆ. ಈ ಚಿತ್ರದ ಅಧಿಕೃತ ಪ್ರಕಟಣೆ ಜೂನ್ 23ರಂದು ಹೊರಬೀಳುವ ಸಾಧ್ಯತೆ ಇದೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.