ETV Bharat / sitara

ಸುಳ್ಳು ಅಫಿಡವಿಟ್;​ ಕೋರ್ಟ್​ ಕ್ಷಮೆಯಾಚಿಸಿದ ಸಲ್ಮಾನ್.. ನಾಳೆ ತೀರ್ಪು..

ಬಾಲಿವುಡ್ ನಟ ಸಲ್ಮಾನ್ ಖಾನ್ 2003 ರಲ್ಲಿ ಜೋಧ್‌ಪುರ ಸೆಷನ್ಸ್​ ನ್ಯಾಯಾಲಯಕ್ಕೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. 1998 ರಲ್ಲಿ ಜೋಧಪುರದಲ್ಲಿ ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ ಪ್ರಕರಣದ ವಿಚಾರಣೆಯಲ್ಲಿ ಸಲ್ಮಾನ್​​ ಕ್ಷಮೆಯಾಚಿಸಿದ್ದಾರೆ.

author img

By

Published : Feb 10, 2021, 6:36 PM IST

Updated : Feb 10, 2021, 6:52 PM IST

ಕೋರ್ಟ್​​ಗೆ ಸುಳ್ಳು ಅಫಿಡೆವಿಟ್​ ನೀಡಿದ್ದಕ್ಕೆ ಕ್ಷಮೆಯಾಚಿಸಿದ ಸಲ್ಮಾನ್​​ಖಾನ್​​

ಬಾಲಿವುಡ್ ನಟ ಸಲ್ಮಾನ್ ಖಾನ್ 2003 ರಲ್ಲಿ ಜೋಧ್‌ಪುರ ಸೆಷನ್ಸ್​ ನ್ಯಾಯಾಲಯಕ್ಕೆ ಸುಳ್ಳು ಅಫಿಡವಿಟ್ ಸಲ್ಲಿಸಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. 1998 ರಲ್ಲಿ ಜೋಧಪುರದಲ್ಲಿ ಎರಡು ಕೃಷ್ಣ ಮೃಗಗಳನ್ನು ಬೇಟೆಯಾಡಿದ ಪ್ರಕರಣದ ವಿಚಾರಣೆಯಲ್ಲಿ ಸಲ್ಮಾನ್​​ ಕ್ಷಮೆಯಾಚಿಸಿದ್ದಾರೆ. ಈ ಪ್ರಕರಣದ ಅಂತಿಮ ತೀರ್ಪು ನಾಳೆ (ಗುರುವಾರ) ಪ್ರಕಟವಾಗಲಿದೆ.

ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್​ ಖಾನ್​​ ಜೋಧ್‌ಪುರ ಸೆಷನ್ಸ್ ನ್ಯಾಯಾಲಯಕ್ಕೆ ವಿಡಿಯೋ ಕಾನ್ಫರೆನ್ಸ್​​ ಮೂಲಕ ಹಾಜರಾಗಿದ್ದರು. ಆಗಸ್ಟ್ 8, 2003 ರಂದು ಕೋರ್ಟ್​​ಗೆ ಸಲ್ಲಿಸಿದ್ದ ಅಫಿಡವಿಟ್ ತಪ್ಪಾಗಿದೆ ಎಂದು ಸಲ್ಮಾನ್​​ ಪರ ವಕೀಲ ಹಸ್ತಿಮಲ್ ಸರಸ್ವತ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ತಪ್ಪು ಅಫಿಡೆವಿಟ್​​​ ನೀಡಿರುವ ಬಗ್ಗೆ ವಿವರಣೆ ನೀಡಿರುವ ಸರಸ್ವತ್​​​, "ಆಗಸ್ಟ್ 8, 2003 ರಂದು ಅಫಿಡವಿಟ್ ಅನ್ನು ತಪ್ಪಾಗಿ ನೀಡಲಾಗಿದೆ. ಸಲ್ಮಾನ್ ಆ ಸಂದರ್ಭದಲ್ಲಿ ಕೆಲಸಗಳ ಮಧ್ಯೆ ಬ್ಯುಸಿಯಾಗಿದ್ದ ಕಾರಣ ತಾವು ತಮ್ಮ ಬಂದೂಕಿನ ಪರವಾನಗಿಯನ್ನು ರಿನಿವಲ್​​​ಗೆ ನೀಡಿರುವುದನ್ನು ಮರೆತು, ಪರವಾನಗಿ ಕಳೆದು ಹೋಗಿದೆ." ಎಂದು ಸಲ್ಮಾನ್​​​ ಹೇಳಿರುವದಾಗಿ ತಿಳಿಸಿದ್ದಾರೆ.

ಜೋಧ್‌ಪುರದ ಬಳಿಯ ಕಂಕಣಿ ಗ್ರಾಮದಲ್ಲಿ 1998 ರಲ್ಲಿ ಸಲ್ಮಾನ್​​ ಖಾನ್​​ ಎರಡು ಕೃಷ್ಣಮೃಗಗಳ ಬೇಟೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ರು. ಆ ಸಮಯದಲ್ಲಿ ಸಲ್ಮಾನ್​​ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯವು ಅವರ ಶಸ್ತ್ರಾಸ್ತ್ರ ಪರವಾನಗಿಯನ್ನು ಸಲ್ಲಿಸುವಂತೆ ಕೇಳಿತ್ತು.

ನಂತರ ಸಲ್ಮಾನ್ ಅವರು ಪರವಾನಗಿ ಕಳೆದುಕೊಂಡಿದ್ದಾರೆ ಎಂದು 2003 ರಲ್ಲಿ ನ್ಯಾಯಾಲಯದಲ್ಲಿ ಅಫಿಡವಿಟ್ ನೀಡಿದ್ದರು. ಈ ಸಂಬಂಧ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ನಂತರದ ದಿನಗಳಲ್ಲಿ ಬಂದೂಕು ಪರವಾನಗಿ ಕಳೆದು ಹೋಗಿಲ್ಲ ಬದಲಾಗಿ, ನವೀಕರಣಕ್ಕೆ ಕೊಡಲಾಗಿದೆ ಎಂಬುದು ನ್ಯಾಯಾಲಯಕ್ಕೆ ತಿಳಿದು ಬಂದಿದೆ.

Last Updated : Feb 10, 2021, 6:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.