ಹರ್ಷವರ್ಧನ್ ರಾಣೆ ಸದ್ಯ 'ಹಸೀನ್ ದಿಲ್ರುಬಾ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಉತ್ತರಾಖಂಡ್ನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ವೇಳೆ ಅಲ್ಲಿನ ಸ್ಥಳೀಯರ ಜೊತೆ ಹರ್ಷವರ್ಧನ್ ಕಾಲ ಕಳೆದಿದ್ದಾರೆ.
ಶೂಟಿಂಗ್ ಸ್ಟಾಟ್ನಿಂದ ಸುಮಾರ 45 ನಿಮಿಷಗಳ ದೂರದಲ್ಲಿರುವ ಪಂಚತಾರಾ ಹೋಟೆಲ್ಗೆ ಹೋಗುವುದನ್ನು ನಿರಾಕರಿಸಿರುವ ನಟ, ಅದೇ ಸಮಯವನ್ನು ಜಿಮ್ನಲ್ಲಿ ಕಾಲ ಕಳೆಯಲು ಬಯಸಿದ್ದಾರೆ. ಈ ಬಗ್ಗೆ ಹೇಳಿರುವ ಹರ್ಷವರ್ಧನ್, ಶೂಟಿಂಗ್ ವೇಳೆ ನಾವು ಜಿಮ್ಗಾಗಿ ಕಡಿಮೆ ಸಮಯ ಬಳಿಸಿಕೊಳ್ಳುತ್ತೇವೆ.
ಆದ್ರಿಂದ 46 ಕಿ.ಮೀ ದೂರದಲ್ಲಿರುವ ಹೋಟೆಲ್ಗೆ ಹೋಗಿ ಬರುವುದಕ್ಕಿಂತ ಜಿಮ್ನಲ್ಲಿ ವರ್ಕ್ಔಟ್ ಮಾಡಿದರೆ ಹೆಚ್ಚು ಸಮಯ ಸಿಗುತ್ತದೆ ಎಂದಿದ್ದಾರೆ. ಹರ್ಷವರ್ಧನ್ ಉತ್ತರಾಖಂಡ್ ಸ್ಥಳೀಯರ ಜೊತೆ ಓಡಾಟ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಹಸೀನ್ ದಿಲ್ರುಬಾ ಸಿನಿಮಾಕ್ಕೆ ವಿನಿಲ್ ಮಥೇವ್ ಆ್ಯಕ್ಷನ್ ಕಟ್ ಹೇಳಿದ್ದು, ತಾಪ್ಸೆ ಪನ್ನು ಮತ್ತು ವಿಕ್ರಾಂತ್ ಮಸ್ಸೆ ಮುಖ್ಯ ಭೂಮಿಕೆಯಲ್ಲಿದ್ದಾರೆ.