ETV Bharat / sitara

'ಸೈರಾ ನರಸಿಂಹ ರೆಡ್ಡಿ' ಚಿತ್ರಕ್ಕೆ ಕಂಠದಾನ ಮಾಡಿದ ನಟ ಹರೀಶ್ ರಾಜ್.. - ಸೈರಾ ನರಸಿಂಹ ರೆಡ್ಡಿಗೆ ಕಂಠದಾನ

ಖ್ಯಾತ ನಟರಲ್ಲಿ ಒಬ್ಬರಾದ ಹರೀಶ್​ ರಾಜ್​ ಈಗ ತೆಲುಗಿನ ಬಹು ನಿರೀಕ್ಷಿತ ಹಾಗೂ ದೊಡ್ಡ ತಾರಾಗಣ ಹೊಂದಿರುವ ಚಿತ್ರವೊಂದಕ್ಕೆ ಕಂಠದಾನ ಮಾಡಿದ್ದಾರೆ.

ನಟ ಹರೀಶ್ ರಾಜ್
author img

By

Published : Aug 26, 2019, 11:35 AM IST

ಕನ್ನಡದ ನಟ ಹರೀಶ್ ರಾಜ್ ಸೈರಾ ನರಸಿಂಹ ರೆಡ್ಡಿ ಚಿತ್ರಕ್ಕೆ ಕಂಠದಾನ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಮೆಗಾ ಸ್ಟಾರ್ ಚಿರಂಜೀವಿ ಅವರ ತೆಲುಗು ಸಿನಿಮಾ ಬಹು ದೊಡ್ಡ ತಾರಾಗಣ ಹೊಂದಿದೆ. ಅಮಿತಾಬ್ ಬಚ್ಚನ್, ಸುದೀಪ್ ಸಹ ಈ ಚಿತ್ರದಲ್ಲಿದ್ದಾರೆ. ಈ ಸಿನಿಮಾ ಹಲವು ಭಾಷೆಗಳಿಗೆ ಡಬ್ ಆಗುತ್ತಿದೆ. ಕನ್ನಡದಲ್ಲಿ ಡಬ್ ಆಗುತ್ತಿರುವ ಈ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಪಾತ್ರವೊಂದಕ್ಕೆ ಜನಪ್ರಿಯ ನಟ ಹರೀಶ್ ರಾಜ್ ತಮ್ಮ ಕಂಠದಾನ ಮಾಡಿದ್ದಾರೆ. ಈಗ ಬಿಡುಗಡೆ ಆಗಿರುವ ಸೈರಾ ನರಸಿಂಹ ರೆಡ್ಡಿ ಟೀಸರ್‌ನಲ್ಲಿ ಹರೀಶ್ ರಾಜ್ ಧ್ವನಿ ಕಂಡು ಬಂದಿದೆ. ಡಬ್ ಮಾಡಿರುವುದಾಗಿ ಹರೀಶ್ ರಾಜ್ ಸಹ ಸಂತೋಷವಾಗಿ ಹೇಳಿಕೊಂಡಿದ್ದಾರೆ. ಈವರೆಗೂ 30 ಪರಭಾಷಾ ನಟರುಗಳು ಕನ್ನಡದಲ್ಲಿ ಅಭಿನಯಿಸಿದ ಪಾತ್ರಕ್ಕೆ ನಾನು ಧ್ವನಿ ನಿಡಿದ್ದೇನೆ ಎಂದಿದ್ದಾರೆ.

ಹರೀಶ್ ರಾಜ್ ಧ್ವನಿ ನೀಡಿರುವುದು ತಮಿಳಿನ ಜನಪ್ರಿಯ ನಟ ವಿಜಯ್ ಸೇತುಪತಿ ಅವರ ಭಾಗಕ್ಕೆ. ಅಂತಹ ದೊಡ್ಡ ದಕ್ಷಿಣ ಭಾರತದ ಚಿತ್ರಕ್ಕೆ ನಾನು ಧ್ವನಿ ನೀಡಿರುವುದು ಹೆಮ್ಮೆಯ ವಿಚಾರ ಎಂದು ಭಾವಿಸಿದ್ದಾರೆ. ನಾಯಕ ನಟ ಹರೀಶ್ ರಾಜ್ ನಟನೆಯ ‘ಕಿಲಾಡಿ ಪೊಲೀಸ್’ ಶೀಘ್ರವೇ ಬಿಡುಗಡೆ ಆಗುತ್ತಿದ್ದು, ಅವರ ಸಿನಿಮಾ ಬಹು ಭಾಷಾ ಹಾಗೂ ಬಹು ತಾರಾಗಣದ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ಎದುರು ಪೈಪೋಟಿ ಎದುರಿಸಬೇಕಾಗಲೂಬಹುದು.

ನಟ ಹರೀಶ್ ರಾಜ್ ಡಬ್ಬಿಂಗ್ ಸಿನಿಮಾಕ್ಕೆ ಕಂಠದಾನ

ಇದೊಂದು ಯೋಚನೆ ಮಾಡಬೇಕಾದ ವಿಚಾರವೇ. ಮೊನ್ನೆ ತಾನೇ ನಮ್ಮ ಮುಂದೆ ಪೋಷಕ ನಟ ರಾಕ್ ಲೈನ್ ಸುಧಾಕರ್ ನಾನು ಊಟ ಮಾಡದೆ ಇದ್ರು ಪರ್ವಗಿಲ್ಲ ಆದರೆ ಡಬ್ಬಿಂಗ್ ಸಿನಿಮಾಕ್ಕೆ ನಾನು ಕಂಠದಾನ ಮಾಡೋದಿಲ್ಲ ಅಂತ ದಿಟ್ಟವಾಗಿ ಪ್ರಮಾಣ ಮಾಡಿದರು.

ಈಗ ನೋಡಿ ಕನ್ನಡದ ನಾಯಕ ನಟರುಗಳ ಪೈಕಿ ಹರೀಶ್ ರಾಜ್ ಮೊದಲು ಡಬ್ಬಿಂಗ್ ಸಿನಿಮಾಕ್ಕೆ ಕಂಠದಾನ ಮಾಡಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.

ಮೆಗಾ ಸ್ಟಾರ್ ಚಿರಂಜೀವಿ ಅವರ ತೆಲುಗು ಸಿನಿಮಾ ಬಹು ದೊಡ್ಡ ತಾರಗಣದ ಸಿನಿಮಾ ಅಮಿತಾಭ್ ಬಚ್ಚನ್, ಸುದೀಪ್ ಸಹ ಈ ಚಿತ್ರದಲ್ಲಿ ಇದ್ದಾರೆ. ಈ ಸಿನಿಮಾ ಹಲವು ಭಾಷೆಗಳಿಗೆ ಡಬ್ ಆಗುತ್ತಿದೆ. ಕನ್ನಡದಲ್ಲಿ ಡಬ್ ಆಗುತ್ತಿರುವ ಈ ಸೈರಾ ನರಸಿಂಹ ರೆಡ್ಡಿ ಚಿತ್ರದ ಪಾತ್ರವೊಂದಕ್ಕೆ ಜನಪ್ರಿಯ ನಟ ಹರೀಶ್ ರಾಜ್ ತಮ್ಮ ಕಂಠದಾನ ಮಾಡಿದ್ದಾರೆ. ಈಗ ಬಿಡುಗಡೆ ಆಗಿರುವ ಸೈರಾ ನರಸಿಂಹ ರೆಡ್ಡಿ ಟೀಸರ್ ಅಲ್ಲಿ ಹರೀಶ್ ರಾಜ್ ಧ್ವನಿ ಕಂಡಿದೆ. ಡಬ್ ಮಾಡಿರುವುದಾಗಿ ಹರೀಶ್ ರಾಜ್ ಸಹ ಸಂತೋಷವಾಗಿ ಹೇಳಿಕೊಂಡಿದ್ದಾರೆ. ಇದುವರೆವಿಗೂ 30 ಪರಭಾಷಾ ನಟರುಗಳು ಕನ್ನಡದಲ್ಲಿ ಅಭಿನಯಿಸಿದ ಪಾತ್ರಕ್ಕೆ ನಾನು ಧ್ವನಿ ನಿಡಿದ್ದೇನೆ

ಅಂದಹಾಗೆ ಹರೀಶ್ ರಾಜ್ ಧ್ವನಿ ನೀಡಿರುವುದು ತಮಿಳಿನ ಜನಪ್ರಿಯ ನಟ ವಿಜಯ್ ಸೇತುಪತಿ ಅವರ ಭಾಗಕ್ಕೆ. ಅಂತಹ ದೊಡ್ಡ ದಕ್ಷಿಣ ಭಾರತದ ಚಿತ್ರಕ್ಕೆ ನಾನು ಧ್ವನಿ ನೀಡಿರುವುದು ಹೆಮ್ಮೆಯ ವಿಚಾರ ಎಂದು ಭಾವಿಸುತ್ತಾರೆ.

ನಾಯಕ ನಟ ಹರೀಶ್ ರಾಜ್ ನಟನೆಯ ಕಿಲಾಡಿ ಪೊಲೀಸ್ ಬಿಡುಗಡೆ ಆಗುತ್ತಿದೆ. ಅವರ ಸಿನಿಮಾ ಬಹು ಭಾಷಾ ಬಹು ತಾರಗಣದ ಸೈರಾ ನರಸಿಂಹ ರೆಡ್ಡಿ ಸಿನಿಮಾ ಎದುರು ಪೈಪೋಟಿ ಎದುರಿಸಬೇಕಾಗಬಹುದು. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.