ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ವುಡ್ನಲ್ಲಿ ಈಗಾಗಲೇ ನಟಿ ರಾಗಿಣಿ ದ್ವಿವೇದಿ ಹಾಗು ಸಂಜನಾ ಗರ್ಲಾನಿ ಜೈಲು ಪಾಲಾಗಿದ್ದಾರೆ. ಈ ಡ್ರಗ್ಸ್ ಜಾಲ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಬೇರು ಬಿಟ್ಟಿರೊಂದ್ರಿಂದ ಸಿಸಿಬಿ ಪೊಲೀಸರು, ಸಿನಿಮಾ ತಾರೆಯರು, ರಾಜಕಾರಣಿಗಳ ಮಕ್ಕಳು, ಡ್ರಗ್ಸ್ ಪೆಡ್ಲರ್ಗಳನ್ನು ಕರೆದು ವಿಚಾರಣೆ ಮಾಡುತ್ತಿದ್ದಾರೆ. ಈ ಕುರಿತಾಗಿ ಸ್ಯಾಂಡಲ್ವುಡ್ ನಟಿ ಹರಿಪ್ರಿಯಾ ಪ್ರತಿಕ್ರಿಯಿಸಿದ್ದಾರೆ.
'ಈ ಡ್ರಗ್ಸ್ ವಿಚಾರ ನನಗೆ ಗೊತ್ತಿಲ್ಲ. ನಾನು ಯಾವ ಪಾರ್ಟಿಗೂ ಹೋಗಿಲ್ಲ. ಆದರೆ ಈ ಪ್ರಕರಣದಲ್ಲಿ ಯಾರು ತಪ್ಪಿತಸ್ಥರಿದ್ದಾರೋ ಅವ್ರಿಗೆ ಶಿಕ್ಷೆ ಆಗಬೇಕು' ಅಂತಾ ಹೇಳಿದ್ದಾರೆ.
'ನಾವು ಸೆಲೆಬ್ರಿಟಿಗಳು. ಸಮಾಜಕ್ಕೆ ಮಾದರಿಯಾಗಿರಬೇಕು. ನಮ್ಮನ್ನು ಸಾಕಷ್ಟು ಅಭಿಮಾನಿಗಳು ನೋಡಿ ಕಲಿಯುತ್ತಾರೆ' ಅನ್ನೋದು ಹರಿಪ್ರಿಯಾ ಅಭಿಪ್ರಾಯ.