ETV Bharat / sitara

ದರ್ಶನ್ ಅಭಿನಯದ 'ರಾಬರ್ಟ್', 'ಒಡೆಯ' ಚಿತ್ರಕ್ಕೆ ಹರಿಕೃಷ್ಣ, ಅರ್ಜುನ್ ಜನ್ಯ ಸಾಥ್​

ನಟ ದರ್ಶನ್​ ಅವರ ಬಹುತೇಕ ಸಿನಿಮಾ ಹಾಡುಗಳಿಗೆ ಸಂಗೀತ ನೀಡಿರುವ ವಿ.ಹರಿಕೃಷ್ಣ ಇದೀಗ ರಾಬರ್ಟ್, ಒಡೆಯ ಚಿತ್ರಗಳ ಹಿನ್ನೆಲೆ ಸಂಗೀತ ಜೋಡಣೆ ಮಾಡುತ್ತಿದ್ದಾರೆ. ಅವರೊಂದಿಗೆ ಅರ್ಜುನ್ ಜನ್ಯ ಎರಡೂ ಸಿನಿಮಾಗಳ ಹಾಡಿಗೆ ಸಂಗೀತ ನೀಡುತ್ತಿದ್ದಾರೆ.

author img

By

Published : Oct 12, 2019, 4:03 PM IST

ಹರಿಕೃಷ್ಣ, ದರ್ಶನ್, ಅರ್ಜುನ್ ಜನ್ಯ

‘ಕುರುಕ್ಷೇತ್ರ‘ ಚಿತ್ರದ ಮೂಲಕ ಮತ್ತೊಮ್ಮೆ ಬಾಕ್ಸ್ ಆಫೀಸ್ ಸುಲ್ತಾನ ಎಂದು ನಿರೂಪಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯಕ್ಕೆ ಒಡೆಯ ಹಾಗೂ ರಾಬರ್ಟ್ ಚಿತ್ರದ ಶೂಟಿಂಗ್​​​ನಲ್ಲಿ ಬ್ಯುಸಿಯಾಗಿದ್ದಾರೆ. ಒಡೆಯ ಚಿತ್ರವನ್ನು ಎಂ.ಡಿ.ಶ್ರೀಧರ್ ಹಾಗೂ ರಾಬರ್ಟ್ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸುತ್ತಿದ್ದಾರೆ.

V. harikrishna
ವಿ.ಹರಿಕೃಷ್ಣ

ಇದೀಗ ಒಡೆಯ, ರಾಬರ್ಟ್ ಚಿತ್ರತಂಡದೊಂದಿಗೆ ಸಂಗೀತ ನಿರ್ದೇಶಕ ಹರಿಕೃಷ್ಣ ಹಾಗೂ 100 ಸಿನಿಮಾಗಳಿಗೆ ಸಂಗೀತ ನೀಡಿರುವ ಅರ್ಜುನ್​ ಜನ್ಯ ಸೇರಿಕೊಂಡಿದ್ದಾರೆ. ಈ ಎರಡೂ ಚಿತ್ರಗಳ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡುತ್ತಿದ್ದರೆ, ಹಿನ್ನೆಲೆ ಸಂಗೀತ ಜೋಡಣೆ ಜವಾಬ್ದಾರಿಯನ್ನು ವಿ.ಹರಿಕೃಷ್ಣ ಮಾಡುತ್ತಿದ್ದಾರೆ. ವಿ.ಹರಿಕೃಷ್ಣ ಸಂಗೀತ ನಿರ್ದೇಶಕ ಮಾತ್ರವಲ್ಲದೆ ಪಿ.ಕುಮಾರ್ ಜೊತೆ ಸೇರಿ ಯಜಮಾನ ಚಿತ್ರವನ್ನು ನಿರ್ಮಿಸಿದ್ದರು. ಆ ಚಿತ್ರಕ್ಕೆ ಕೂಡಾ ಹರಿಕೃಷ್ಣ ಅವರೇ ಸಂಗೀತ ಸಂಯೋಜಿಸಿದ್ದರು. ದರ್ಶನ್ ಅವರ ಅನೇಕ ಸಿನಿಮಾಗಳಿಗೆ ವಿ.ಹರಿಕೃಷ್ಣ ಸಂಗೀತ ನೀಡಿರುವುದು ವಿಶೇಷ. ಅರ್ಜುನ ಜನ್ಯ ದರ್ಶನ್ ಅಭಿನಯದ ‘ಚೌಕ, ಚಕ್ರವರ್ತಿ ಹಾಗೂ ತಾರಕ್’ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಒಡೆಯ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದರೆ ರಾಬರ್ಟ್ ಚಿತ್ರಕ್ಕೆ ಉಮಾಪತಿ ಹಣ ಹೂಡಿದ್ದಾರೆ.

Arjun janya
ಅರ್ಜುನ್ ಜನ್ಯ

ಡಿ ಬಾಸ್ ಒಡೆಯ ರಾಬರ್ಟ್ ಚಿತ್ರಕ್ಕೆ ವಿಶೇಷ ಹಾಗೂ ವಿಭಿನ್ನ ಮೆರಗು

ಬಹು ದೊಡ್ಡ ಯಶಸ್ಸಿನ ಕುರುಕ್ಷೇತ್ರ ಸಿನಿಮಾ ಇಂದ ಮತ್ತೊಮ್ಮೆ ಬಾಕ್ಸ್ ಆಫೀಸು ಸುಲ್ತಾನ್ ಆಗಿ ನಿರೂಪಿಸಿದ ಛಾಲೆಂಜಿಂಗ್ ಸ್ಟಾರ್ ದರ್ಶನ್ ಈಗ ಒಡೆಯ ಹಾಗೂ ರಾಬರ್ಟ್ ಸಿನಿಮಾದ ತಯಾರಿಕೆಯಲ್ಲಿದ್ದಾರೆ.

100 ಕೋಟಿ ಕ್ಲಬ್ ಸೇರಿದ ನಟ ಡಿ ಬಾಸ್ ದರ್ಶನ್ ಒಡೆಯ ಮತ್ತು ರಾಬರ್ಟ್ ಚಿತ್ರಗಳಿಗೆ ಈಗ ಮತ್ತೊಂದು ವಿಶೇಷ ಮೆರಗು ಏನಪ್ಪಾ ಅಂದರೆ ಇಬ್ಬರು 100 ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಅರ್ಜುನ್ ಜನ್ಯ ಹಾಗೂ ವಿ ಹರಿಕೃಷ್ಣ ತಾಂತ್ರಿಕ ತಂಡದೊಂದಿಗೆ ಸೇರಿಕೊಂಡಿರುವುದು.

ಅರ್ಜುನ್ ಜನ್ಯ ತಲಾ ನಾಲ್ಕು ಹಾಡುಗಳಿಗೆ ಒಡೆಯ ಹಾಗೂ ರಾಬರ್ಟ್ ಸಿನಿಮಾಗಳಿಗೆ ರಾಗ ಸಂಯೋಜನೆ ಮಾಡುತ್ತಿದ್ದಾರೆ ಹಾಗೂ ಇವೆರಡೂ ಸಿನಿಮಾಗಳ ಸಂಪೂರ್ಣ ಹಿನ್ನಲೆ ಸಂಗೀತ ಜೋಡಣೆ ಕೆಲಸವನ್ನು ವಿ ಹರಿಕೃಷ್ಣ ಮಾಡುತ್ತಿದ್ದಾರೆ. ವಿ ಹರಿಕೃಷ್ಣ ಜಂಟಿಯಾಗಿ ಯಜಮಾನ ಸಿನಿಮಾ ಸಹ ನಿರ್ದೇಶನ ಮಾಡಿದವರು. ದರ್ಶನ್ ಅವರ ಅನೇಕ ಸಿನಿಮಾಗಳಿಗೆ ಇವರದೆ ಸಂಗೀತ ನಿರ್ದೇಶನ ಖಾಯಂ ಆಗಿರುವುದು ಸಹ. ಅರ್ಜುನ ಜನ್ಯ ದರ್ಶನ್ ಅಭಿನಯದ ಚೌಕ, ಚಕ್ರವರ್ತಿ ಹಾಗೂ ತಾರಕ್ ಸಿನಿಮಾಗಳಿಗೆ ಸಂಗೀತ ನೀಡಿದವರು.

ಒಡೆಯ ಚಿತ್ರವನ್ನೂ ಸಂದೇಶ್ ನಾಗರಾಜ್ ನಿರ್ಮಿಸಿ, ಎಂ ಡಿ ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. ರಾಬರ್ಟ್ ಚಿತ್ರವನ್ನ ತರುಣ್ ಸುಧೀರ್ ನಿರ್ದೇಶನ ಹಾಗೂ ಉಮಾಪತಿ ಹೆಬ್ಬುಲಿ ಹಾಗೂ ಒಂದಲ್ಲ ಎರಡಲ್ಲ ಸಿನಿಮಾಗಳ ನಂತರ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.