ETV Bharat / state

ಸಚಿವ ಬೈರತಿ ಸುರೇಶ್, ಹಿಂದಿನ ಲೋಕಾಯುಕ್ತ ಎಸ್​​ಪಿ ವಿರುದ್ಧ ಡಿಜಿ-ಐಜಿಪಿಗೆ ಸ್ನೇಹಮಯಿ ಕೃಷ್ಣ ದೂರು - Snehamayi Krishna Complaint

ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಮೈಸೂರು ಲೋಕಾಯುಕ್ತದ ಹಿಂದಿನ ಎಸ್​​ಪಿ ವಿರುದ್ಧ ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದಾರೆ.

author img

By ETV Bharat Karnataka Team

Published : 2 hours ago

snehamayi krishna
ಸ್ನೇಹಮಯಿ ಕೃಷ್ಣ (ETV Bharat)

ಬೆಂಗಳೂರು:‌ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿನ ಅಕ್ರಮ ಪ್ರಕರಣ ಸಂಬಂಧ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹಾಗೂ ಮೈಸೂರು ಲೋಕಾಯುಕ್ತದ ಹಿಂದಿನ ಎಸ್​​ಪಿ ಸುಜೀತ್ ಅವರ ವಿರುದ್ಧ ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.

ಭಾನುವಾರ ಇಮೇಲ್ ಮೂಲಕ ಡಿಜಿ ಮತ್ತು ಐಜಿಪಿಯವರಿಗೆ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ, ಇಂದು ಖುದ್ದು ಡಿಜಿ ಮತ್ತು ಐಜಿಪಿಯವರನ್ನು ಭೇಟಿಯಾಗಿ ದೂರು ಸಲ್ಲಿಕೆ ಮಾಡಿದ್ದಾರೆ.

ದೂರಿನಲ್ಲಿ ಏನಿದೆ?: ''ಲೋಕಾಯುಕ್ತರು ನೀಡಿದ್ದ ಸರ್ಚ್ ವಾರೆಂಟ್ ಆಧರಿಸಿ, ಲೋಕಾಯುಕ್ತದ ಹಿಂದಿನ ಎಸ್​​ಪಿ ಸುಜೀತ್ ನೇತೃತ್ವದಲ್ಲಿ ಜುಲೈ 27ರಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮೇಲೆ ದಾಳಿ ನಡೆದಿತ್ತು. ಆದರೆ ಆ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ವಶಪಡಿಸಿಕೊಂಡಿಲ್ಲ. ಹಾಗೂ ವಶಪಡಿಸಿಕೊಂಡಿದ್ದ ಕೆಲ ಕಡತಗಳ ಕುರಿತು ಸಚಿವ ಭೈರತಿ ಸುರೇಶ್ ಅವರಿಗೆ ಮಾಹಿತಿ ನೀಡಿದ್ದಾರೆ. ಸಚಿವ ಭೈರತಿ ಸುರೇಶ್ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಿ, ಕಡತಗಳನ್ನು ತೆಗೆದುಕೊಂಡು ಹೋಗಿದ್ದಾರೆ'' ಎಂದು ದೂರಿನಲ್ಲಿ ಸ್ನೇಹಮಯಿ ಕೃಷ್ಣ ಆರೋಪಿಸಿದ್ದಾರೆ.

ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ತಮ್ಮ ದೂರಿನಲ್ಲಿ ಅವರು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮಸಿ ಬಳಿಯಲು ಯತ್ನಿಸುತ್ತಿದ್ದಾರೆ, ಆ ಪ್ರಯತ್ನಗಳು ಹೇಗೆ ಯಶಸ್ವಿ ಆಗುತ್ತವೆ ನಾನೂ ನೋಡ್ತೀನಿ : ಸಿಎಂ ಸವಾಲು - CM Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.