ಬೆಂಗಳೂರು : ಪ್ರೀತಿ,ಪ್ರೇಮ,ಪ್ರಣಯ ಅಂತ ಇಡೀ ಕನ್ನಡ ಚಿತ್ರರಂಗದ ಪಾಲಿಗೆ ಲವ್ ಗುರು ಕೂಡ ಹಂಸಲೇಖನೇ.. ಈಗಲೂ 'ಪ್ರೇಮಲೋಕ' ಚಿತ್ರದ ಹಾಡುಗಳು ಪ್ರೇಮಿಗಳ ಪಾಲಿನ ಸುಪ್ರಭಾತವಾಗಿವೆ. ಕೊರೊನಾ ಬಗ್ಗೆ ಮಹಾಗುರು ಹಂಸಲೇಖ, ಅವರ ಪತ್ನಿ ಲತಾ ಹಂಸಲೇಖ ಹಾಗೂ ಮಗಳು ನಂದಿನಿ ಒಂದು ಬ್ಯೂಟಿಫುಲ್ ಹಾಡೊಂದನ್ನ ಕಂಪೋಸ್ ಮಾಡಿ ಹಾಡಿದ್ದಾರೆ.
ಈ ಸಾಂಗ್ ಬಗ್ಗೆ ನಾವು ಹೇಳೋದಕ್ಕಿಂತ ನೀವೂ ಕೇಳಿದ್ರೆ ಮಜವೇ ಬೇರೆ. ಈ ಹಾಡಿನಲ್ಲಿ ತುಂಬಾ ಒಳ್ಳೆಯ ಮೆಸೇಜ್ನ ನಾದಬ್ರಹ್ಮ ಹಂಸಲೇಖ ನೀಡಿದ್ದಾರೆ. ಆರೋಗ್ಯವೇ ಭಾಗ್ಯ, ದಯವಿಟ್ಟು ಗಮನಕೊಡಿ. ನಿಮ್ಮ ಬಗ್ಗೆ ನೀವೇ ಜಾಗೃತೆವಹಿಸಿ ಸದಾ ಖುಷಿಯಾಗಿರಿ. ಈ ಸಾಂಗ್ ಮಾತ್ರ ನೀವೂ ನಿಮ್ಮ ಫ್ಯಾಮಿಲಿ ಜೊತೆ ಕೇಳಿ ಕೊರೊನಾಗೆ ಬೈಬೈ ಅನ್ನೋದನ್ನ ಮಾತ್ರ ಮರೆಯಬೇಡಿ..