ETV Bharat / sitara

ಹೊಸ ತಂತ್ರಜ್ಞಾನದೊಂದಿಗೆ 'ನಿಷ್ಕರ್ಷ' ಮರು ಬಿಡುಗಡೆ...ಚಿತ್ರಕ್ಕೆ ಸಿಕ್ತು ಭರ್ಜರಿ ಓಪನಿಂಗ್​​ - ಅನಂತ್ ನಾಗ್

1993 ರಲ್ಲಿ ಬಿಡುಗಡೆಯಾಗಿದ್ದ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ 'ನಿಷ್ಕರ್ಷ' ಇಂದು ಹೊಸ ತಂತ್ರಜ್ಞಾನದೊಂದಿಗೆ ಮತ್ತೆ ಬಿಡುಗಡೆಯಾಗಿದ್ದು ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ಅಭಿನಯ ಭಾರ್ಗವನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸಿನಿಮಾ ವೀಕ್ಷಿಸಿದ್ದಾರೆ.

ನಿಷ್ಕರ್ಷ
author img

By

Published : Sep 20, 2019, 7:34 PM IST

ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ 'ನಿಷ್ಕರ್ಷ' ಬರೋಬ್ಬರಿ 25 ವರ್ಷಗಳ ನಂತರ ಹೊಸ ತಂತ್ರಜ್ಞಾನದೊಂದಿಗೆ ಇಂದು ಮತ್ತೆ ಬಿಡುಗಡೆಯಾಗಿದೆ. ವಿಷ್ಣುದಾದ ಅವರ 59ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಆಧುನಿಕ ತಂತ್ರಜ್ಞಾನದೊಂದಿಗೆ ಇಂದು ಚಿತ್ರವನ್ನು ಮರುಬಿಡುಗಡೆ ಮಾಡಲಾಗಿತ್ತು.

ಆಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಯಾದ 'ನಿಷ್ಕರ್ಷ'

1993 ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಈಗ ಮತ್ತೆ ಭರ್ಜರಿ ಓಪನಿಂಗ್ ಸಿಕ್ಕಿದೆ‌. ಕೆ.ಜಿ. ರಸ್ತೆಯ ಅನುಪಮ ಚಿತ್ರಮಂದಿರದಲ್ಲಿ 'ನಿಷ್ಕರ್ಷ' ಮರುಬಿಡುಗಡೆ ಆಗಿದ್ದು, ವಿಷ್ಣು ಫ್ಯಾನ್ಸ್ ಬಹಳ ಹುಮ್ಮಸ್ಸಿನಿಂದಲೇ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ದಾರೆ. ಅಲ್ಲದೆ ಥಿಯೇಟರ್​​ನಲ್ಲಿ ವಿಷ್ಣುವರ್ಧನ್ ಅವರಿಗೆ ಜೈಕಾರ ಹಾಕಿ ಸಂಭ್ರಮಿಸಿದರು. ವಿಷ್ಣು ಅವರ ಯಾವುದೇ ಸಿನಿಮಾ ಬಿಡುಗಡೆಯಾಗಲಿ ನಾವು ನೋಡಲು ಮುಂದೆ ಬರುತ್ತೇವೆ ಎಂದು ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದರು. ಸಸ್ಪೆನ್ಸ್ ಚಿತ್ರಗಳ ಕಿಂಗ್ ಎಂದೇ ಹೆಸರಾಗಿರುವ ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಈ ಸಿನಿಮಾದ ನಿರ್ದೇಶಕರು. ಸುಮಾರು 66 ಲಕ್ಷ ರೂಪಾಯಿ ಖರ್ಚು ಮಾಡಿ ಬಿ.ಸಿ. ಪಾಟೀಲ್ ಚಿತ್ರವನ್ನು ನಿರ್ಮಿಸಿದ್ದರು. ಈಗ ಮತ್ತೆ ಆಧುನಿಕ ಸ್ಪರ್ಶ ನೀಡಲು ಚಿತ್ರಕ್ಕಾಗಿ 1 ಕೋಟಿ ರೂಪಾಯಿ ಖರ್ಚು ಮಾಡಿದ್ದು ಸೃಷ್ಟಿ ಫಿಲಂ ಬ್ಯಾನರ್ ಮೂಲಕ ಚಿತ್ರ ಬಿಡುಗಡೆಯಾಗಿದೆ. ಅನಂತ್ ನಾಗ್, ರಮೇಶ್ ಭಟ್ , ಪ್ರಕಾಶ್ ರಾಜ್, ಬಿ.ಸಿ. ಪಾಟೀಲ್, ಸುಮನ್ ನಗರ್​​​​ಕರ್​​​​​​​ ಹಾಗೂ ಗುರುಕಿರಣ್ ಬಹುತೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

Intro:ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದ " ನಿಷ್ಕರ್ಷ" ಚಿತ್ರ ಬರೋಬರಿ ೨೫ ವರ್ಷಗಳ ನಂತರ ಮತ್ತೆ ಇಂದು ರಿರೀಲಿಸ್ ಆಗಿದೆ. ವಿಷ್ಣುದಾದನ ೫೯ ನೇ ಹುಟ್ಟುಹಬ್ಬದ ಪ್ರಯುಕ್ತ ಅಧುನಿಕ ತಂತ್ರಜ್ಞಾನದೊಂದಿಗೆ ಇಂದು ,"ನಿಷ್ಕ್ರರ್ಷ" ಚಿತ್ರ ಮರುಬಿಡುಗಡೆಯಾಗಿದೆ.ಅಲ್ಲದೆ ೨೫ ನಂತರ ಬಿಡುಗಡೆಯಾದ ಈ ಚಿತ್ರಕ್ಕೆ ಭರ್ಜರಿ ಒಪನಿಂಗ್ ಸಿಕ್ಕಿದೆ‌.ಕೆಜಿ ರಸ್ತೆಯ ಅನುಪಮಾ ಚಿತ್ರಮಂದಿರದಲ್ಲಿ ನಿಷ್ಕರ್ಷ ರಿರೀಲಿಸ್ ಆಗಿದ್ದು, ವಿಷ್ಣು ಫ್ಯಾನ್ಸ್ ಬಹಳ ಹುಮ್ಮಸ್ಸಿನಿದಲೇ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದ್ದಾರೆ.

Body:ಅಲ್ಲದೆ ವಿಷ್ಣು ದಾದನ ಯಾವುದೇ ಚಿತ್ರ ರಿ ರಿಲೀಸ್ ಅದ್ರು ಸಾಹಸ ಸಿಂಹನ‌ ಅಭಿಮಾನಿಗಳು ನೋಡೇ ನೋಡ್ತಿವಿ.೨೫ ವರ್ಷಗಳ ಹಿಂದೆ ಈ ಚಿತ್ರ ರಿಲೀಸ್ ಆಗಿತ್ತು ಅದ್ರೆ ನಾವು ಅವಾಗ ನೋಡಲು ಆಗಿರಲಿಲ್ಲ ,ಈಗ ದಾದಾ ಸಿನಿಮಾ ನೋಡ್ಲಿದ್ವೀ ಅದ್ಬುದವಾದ ಚಿತ್ರ ಎಂದು ,ಯಜಮಾನನ ಅಭಿಮಾನಿಗಳು ಥಿಯೇಟರ್ ಮುಂದೆ ವಿಷ್ಣುಗೆ ಜೈಕಾರ ಹಾಕಿ ಸಂಭ್ರಮಿಸಿದ್ರು.

Conclusion:ಇನ್ನೂ ಈ ಚಿತ್ರವನ್ನು ಸಸ್ಪೆನ್ಸ್ ಚಿತ್ರಗಳ ಕಿಂಗ್ ಸುನೀಲ್ ಕುಮಾರ್ ದೇಸಾಯಿ ನಿರ್ದೇಶನ ಮಾಡಿದ್ದು.೧೯೯೩ ರಲ್ಲಿ ಮೂಡಿಬಂದಿದ್ದ ಈ ಚಿತ್ರವನ್ನು ೬೬ ಲಕ್ಷ ಖರ್ಚ್ ಮಾಡಿ ನಟ ಬಿಸಿ ಪಾಟೀಲ್ ನಿರ್ಮಾಣ ಮಾಡಿದ್ರು. ಅದ್ರೆವಈಗ ಮತ್ತೆ ಈ ಚಿತ್ರಕದಕೆ ೧ ಕೋಟಿ ಖರ್ಚ್ ಮಾಡಿ ಹೊಸ ತಂತ್ರಜ್ಞಾನದೊಂದಿಗೆ ಸೃಷ್ಟಿ ಫಿಲಂ ಬ್ಯಾನರ್ ಮೂಲಕ ಬಿಸಿ ಪಾಟೀಲ್ ರಿಲೀಸ್ ಮಾಡಿದ್ದಾರೆ.ಇನ್ನೂ ಈ ಚಿತ್ರದಲ್ಲಿ ಅನಂತ್ ನಾಗ್,ರಮೇಶ್ ಭಟ್ ,ಪ್ರಕಾಶ್ ರಾಜ್ ,ಬಿಸಿ ಪಾಟೀಲ್,ಸುಮನ್ ನಗರ್ ಕರ್ ಹಾಗೂ ಗುರುಕಿರಣ್ ಸೇರಿದಂತೆ ಸಾಕಷ್ಟು ಕಲಾವಿದರು ನಟಿಸಿದ್ದಾರೆ.

ಸತೀಶ ಎಂಬಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.