ವಿನಯ್ ರಾಜ್ಕುಮಾರ್ಗಿಂದು ಬರ್ತಡೇ ಸಂಭ್ರಮ..ಗಿಫ್ಟ್ ಆಗಿ 'ಗ್ರಾಮಾಯಣ' ಟೀಸರ್ ಬಿಡುಗಡೆ - Gramayana teaser released
ಡಾ. ರಾಜ್ಕುಮಾರ್ ಮೊಮ್ಮಗ ವಿನಯ್ ರಾಜ್ಕುಮಾರ್ಗೆ ಇಂದು 30 ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. 'ಗ್ರಾಮಾಯಣ' ಚಿತ್ರತಂಡ ಇಂದು ಸರ್ಪೈಸ್ ಗಿಫ್ಟ್ ಆಗಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

'ಸಿದ್ದಾರ್ಥ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ವಿನಯ್ ರಾಜ್ಕುಮಾರ್ ನಂತರ 'ರನ್ ಆಂಟೋನಿ' ಹಾಗೂ 'ಅನಂತು ವರ್ಸಸ್ ನುಸ್ರತ್' ಆಗಿ ಮಿಂಚಿದರು. ಅಣ್ಣಾವ್ರ ಕುಟುಂಬದ ಈ ಕುಡಿಗೆ ಇಂದು 30ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ.

ಪ್ರತಿ ವರ್ಷ ತಮ್ಮ ಕುಟುಂಬ ಹಾಗೂ ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಿಸುತ್ತಿದ್ದ ವಿನಯ್ ರಾಜ್ಕುಮಾರ್ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ. ಕೊರೊನಾ ಎಫೆಕ್ಟ್ನಿಂದಾಗಿ ಇಡೀ ದೇಶವೇ ಸಂಕಷ್ಟದಲ್ಲಿರುವಾಗ ಹೇಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವುದು ಎಂದು ಸುಮ್ಮನಾಗಿದ್ದಾರೆ ವಿನಯ್. ಆದ್ದರಿಂದ 'ಗ್ರಾಮಾಯಣ' ಚಿತ್ರತಂಡ ಇಂದು ವಿನಯ್ ಬರ್ತಡೇಗಾಗಿ ಚಿತ್ರದ ಟೀಸರ್ ಬಿಡುಗಡೆ ಮಾಡಿದೆ.
- " class="align-text-top noRightClick twitterSection" data="">
ಈ ಚಿತ್ರದಲ್ಲಿ ವಿನಯ್ ರಾಜ್ಕುಮಾರ್ ಉದ್ದ ಕೂದಲು ಹಾಗೂ ಗಡ್ಡ ಬಿಟ್ಟು ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ನಲ್ಲಿ ಪಂಚಿಂಗ್ ಡೈಲಾಗ್ ಕೂಡಾ ಚೆನ್ನಾಗಿದೆ. ವಿನಯ್ ರಾಜ್ಕುಮಾರ್ ರಾ ಸ್ಟೈಲ್ನಲ್ಲಿ ಬೊಂಬಾಟ್ ಫೈಟ್ ಮಾಡಿದ್ದಾರೆ. ಅಮೃತಾ ಅಯ್ಯರ್ ವಿನಯ್ ರಾಜ್ಕುಮಾರ್ಗೆ ಜೋಡಿಯಾಗಿದ್ದಾರೆ. ದೇವನೂರು ಚಂದ್ರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ 'ಗ್ರಾಮಾಯಣ' ಈ ಕೊರೊನಾ ಹಾವಳಿ ಮುಗಿದ ನಂತರ ತೆರೆಗೆ ಬರಲು ಸಜ್ಜಾಗಿದೆ.
