ETV Bharat / sitara

ತೆಲುಗುಗೆ ರಿಮೇಕ್ ಆಗುತ್ತಾ 'ಉಗ್ರಂ' ಸಿನಿಮಾ? - ಪ್ರಭಾಸ್

ಪ್ರಶಾಂತ್ ನೀಲ್ 'ಉಗ್ರಂ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಟ ಮುರಳಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಸೂಪರ್ ಹಿಟ್ ಆಗಿತ್ತು. ಇದೀಗ ಇದೇ ಚಿತ್ರ ತೆಲುಗುಗೆ ರಿಮೇಕ್ ಆಗುತ್ತೆ ಎಂದು ಹೇಳಲಾಗುತ್ತಿದೆ.

Kannada Ugram Cinema remake on Telugu
'ಉಗ್ರಂ' ಸಿನಿಮಾ
author img

By

Published : Dec 2, 2020, 11:25 AM IST

ಹೊಂಬಾಳೆ ಫಿಲಂಸ್ ಇಂದು ಮಧ್ಯಾಹ್ನ ಹೊಸ ಚಿತ್ರವೊಂದನ್ನು ಘೋಷಿಸುವುದಾಗಿ ಹೇಳಿದೆ. ಹೀಗಾಗಿ, ಆ ಚಿತ್ರ ಯಾವುದಿರಬಹುದು? ಚಿತ್ರದಲ್ಲಿ ಯಾರೆಲ್ಲಾ ನಟಿಸಬಹುದು? ಎಂಬೆಲ್ಲಾ ಕುತೂಹಲಕಾರಿ ವಿಷಯದ ಕುರಿತಾಗಿ ಸಿನಿಮಾಸಕ್ತರು ಚರ್ಚಿಸುವಂತಾಗಿದೆ. ಚಿತ್ರ ಯಾವುದು ಮತ್ತು ಯಾರು ನಟಿಸಬಹುದು ಎಂಬೆಲ್ಲಾ ವಿಷಯ ಇಂದು ಮಧ್ಯಾಹ್ನ ಬಹಿರಂಗವಾಗುತ್ತದೆಯಾದರೂ, ಈ ಚಿತ್ರದ ಬಗ್ಗೆ ಸಾಕಷ್ಟು ಊಹಾಪೋಹಗಳು ಕೂಡಾ ಎದ್ದಿವೆ.

ಪ್ರಮುಖವಾಗಿ, ಈ ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶಿಸುತ್ತಾರೆ ಮತ್ತು ಟಾಲಿವುಡ್ ನಟ ಪ್ರಭಾಸ್ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಕಾರಣವೂ ಇದೆ. ಕೆಲವು ದಿನಗಳ ಹಿಂದೆ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಇಬ್ಬರೂ ಹೈದರಾಬಾದ್‍ನಲ್ಲಿ ರಹಸ್ಯವಾಗಿ ಭೇಟಿಯಾಗಿದ್ದರಂತೆ. ಈ ವಿಷಯ ಅದು ಹೇಗೋ ಸೋರಿಕೆ ಆಗಿದೆ. ಅವರಿಬ್ಬರೂ ಜೊತೆಯಾಗಿ ಕೆಲಸ ಮಾಡುವುದಕ್ಕೆ ಸಜ್ಜಾಗಿರುವುದಷ್ಟೇ ಅಲ್ಲ, ಆ ಚಿತ್ರವನ್ನೇ ಹೊಂಬಾಳೆ ಫಿಲಂಸ್ ನಿರ್ಮಿಸುತ್ತಿದೆ ಎಂಬ ವಿಷಯ ಕಳೆದೆರೆಡು ದಿನಗಳಿಂದ ಕೇಳಿಬರುತ್ತಿದೆ.
ಓದಿ: ಹರಿಕಥೆ ಅಲ್ಲಾ... ಗಿರಿಕಥೆಯಿಂದ ಹೊರ ಬಂದ ಗಿರಿಕೃಷ್ಣ
ಈಗ ಕೇಳಿಬರುತ್ತಿರುವ ಇನ್ನೊಂದು ಹೊಸ ಸುದ್ದಿಯೇನೆಂದರೆ, ಆ ಚಿತ್ರವು ಕನ್ನಡದ `ಉಗ್ರಂ'ನ ರಿಮೇಕ್ ಅನ್ನೋದು. ಪ್ರಶಾಂತ್ ನೀಲ್, ಇದೇ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ನಟ ಮುರಳಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದ ಸಿನಿಮಾ ಬಾಕ್ಸ್ ಆಫೀಸ್‍ನಲ್ಲಿ ಸೂಪರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ಹೆಚ್ಚು ಬಜೆಟ್ ಅಥವಾ ದೊಡ್ಡ ಮೇಕಿಂಗ್‍ನ ಅವಶ್ಯಕತೆ ಇಲ್ಲ. ಹಾಗಾಗಿ ಕೆಲವೇ ತಿಂಗಳ ಅಂತರದಲ್ಲಿ ಈ ಚಿತ್ರವನ್ನು ಮಾಡಿ ಮುಗಿಸಬಹುದಾಗಿದ್ದರಿಂದ, ಈ ಚಿತ್ರವನ್ನು ಪ್ರಶಾಂತ್ ಕೈಗೆತ್ತಿಕೊಳ್ಳಲಿದ್ದಾರೆ. ಜೊತೆಗೆ ಪ್ರಭಾಸ್ ಚಿತ್ರದಲ್ಲಿ ನಟಿಸುವುದಕ್ಕೆ ಆಸಕ್ತಿ ತೋರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.