ETV Bharat / sitara

ಕಿಚ್ಚನ ಫ್ಯಾನ್ಸ್​ಗೆ ಗುಡ್ ನ್ಯೂಸ್... ಬಹುಭಾಷಾ ಚಿತ್ರಕ್ಕೆ ಸುದೀಪ್​ ಗ್ರೀನ್ ಸಿಗ್ನಲ್ - undefined

ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನು ಭಂಡಾರಿ ಕಾಂಬಿನೇಶನ್​ನಲ್ಲಿ 'ಬಿಲ್ಲ ರಂಗ ಭಾಷ' ಚಿತ್ರಕ್ಕೆ ಮೊದಲೇ ಮತ್ತೊಂದು ಪ್ರಾಜೆಕ್ಟ್​​ನಲ್ಲಿ ಈ ಜೋಡಿ ಒಂದಾಗಲಿದ್ದು, ಬಹುಭಾಷೆ ಹಾಗೂ ಹೈ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬರಲಿದೆ.

ಕಿಚ್ಚ ಸುದೀಪ್
author img

By

Published : Jul 20, 2019, 2:20 AM IST

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ಬಿಡುಗಡೆಗೆ ಸಿದ್ಧವಾಗಿದ್ದು, ಇದೇ ಖುಷಿಯಲ್ಲಿರುವ ಕಿಚ್ಚನ ಫ್ಯಾನ್ಸ್​ಗಳಿಗೆ ಈಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ.

ಈಗಾಗಲೇ ಹಿಂದಿಯ ದಬಾಂಗ್-3 ಹಾಗೂ ತೆಲುಗಿನ ಸೈರಾ ಚಿತ್ರದಲ್ಲಿ ಅಭಿನಯಿಸಿತ್ತಿರುವ ಕಿಚ್ಚ ಸುದೀಪ್, ಸದ್ಯ ಕೋಟಿಗೊಬ್ಬ-3 ಚಿತ್ರದ ಶೂಟಿಂಗ್​​ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಕಿಚ್ಚನ ಮುಂದಿನ ಕನ್ನಡ ಸಿನಿಮಾ ಯಾವುದು ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ರಂಗಿತರಂಗ ಹಾಗೂ ರಾಜರಥದಂತಹ ಹಿಟ್ ಚಿತ್ರಗಳ ರೂವಾರಿ ಅನೂಪ್​ ಭಂಡಾರಿ ನಿರ್ದೇಶನದಲ್ಲಿ 'ಬಿಲ್ಲ ರಂಗ ಭಾಷ' ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅದಕ್ಕೂ ಮೊದಲು ಅನೂಪ್​​ ಭಂಡಾರಿ ಕಾಂಬಿನೇಷನ್​​ನಲ್ಲಿ ಮತ್ತೊಂದು ಹೈ ಬಜೆಟ್​​ ಚಿತ್ರಕ್ಕೆ ಈಗಾಗಲೇ ಕಿಚ್ಚ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

ನಿರ್ದೇಶಕ ಅನೂಪ್​ ಭಂಡಾರಿ

ಹೌದು.., ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನೂಪ್​​​ ಭಂಡಾರಿ ಕಾಂಬಿನೇಶನ್​ನಲ್ಲಿ 'ಬಿಲ್ಲ ರಂಗ ಭಾಷ' ಚಿತ್ರಕ್ಕೆ ಮೊದಲೇ ಮತ್ತೊಂದು ಪ್ರಾಜೆಕ್ಟ್​​ನಲ್ಲಿ ಈ ಜೋಡಿ ಒಂದಾಗಲಿದ್ದಾರೆ. ಈಗಾಗಲೇ ಚಿತ್ರದ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದ್ದು ಚಿತ್ರದ ಕಥೆಗೆ ಕಿಚ್ಚ ಫುಲ್ ಇಂಪ್ರೆಸ್ ಆಗಿದ್ದಾರಂತೆ.

ಇನ್ನು ಈ ಬಗ್ಗೆ ಮಾತನಾಡಿರುವ ನಿರ್ದೇಶಕ ಅನೂಪ್​ ಭಂಡಾರಿ, ಸುದೀಪ್ ಅವರ ಬ್ಯಾನರ್​ನಲ್ಲಿ ಮೂಡಿಬರಲಿರುವ 'ಬಿಲ್ಲ ರಂಗ ಭಾಷ' ಚಿತ್ರಕ್ಕೂ ಮುಂಚೆ ಸುದೀಪ್ ಅವರ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದೇನೆ. ಈ ಹೊಸ ಚಿತ್ರವನ್ನು ನಿರ್ಮಾಪಕ ಜಾಕ್ ಮಂಜು ಅವರು ನಿರ್ಮಾಣ ಮಾಡಲಿದ್ದು, ದಬಾಂಗ್-3, ಕೋಟಿಗೊಬ್ಬ-3 ಚಿತ್ರದ ನಂತರ ಈ ಸಿನಿಮಾ ಸೆಟ್ಟೇರಲಿದೆ. ಇನ್ನು ಕಿಚ್ಚ ಸುದೀಪ್ ಅವರ ಸ್ಟಾರ್ ಡಮ್​ಗೆ ಬೇಕಾದ ಅಂಶಗಳು ಈ ಚಿತ್ರದಲ್ಲಿದೆ. ಅಲ್ಲದೆ ಅವರು ಈ ಮುಂಚೆ ಅಭಿನಯಿಸದ ಪಾತ್ರದಲ್ಲಿ ಕಾಣಿಸಲಿದ್ದಾರೆ. ಸುದೀಪ್ ಅವರ ಪಾತ್ರ ಬರೆಯುವಾಗ ನನಗೆ ತುಂಬಾ ಇಷ್ಟವಾಯ್ತು. ಅಲ್ಲದೆ ಅವರೂ ಸಹ ಪಾತ್ರವನ್ನು ತುಂಬಾ ಮೆಚ್ಚಿದ್ದಾರೆ. ಇಡೀ ಚಿತ್ರತಂಡ ತುಂಬಾ ಎಕ್ಸೈಟ್ ಆಗಿ ಈ ಚಿತ್ರಕ್ಕೆ ಕಾಯುತ್ತಿದ್ದೇವೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಅಲ್ಲದೇ ಸುದೀಪ್ ಅವರ ಈಗಿನ ಮಾರ್ಕೆಟ್ ನೋಡಿದರೆ ನಾವು ಎಷ್ಟು ಭಾಷೆಯಲ್ಲಿ ಸಿನಿಮಾ ಮಾಡುತ್ತೇವೆ ಎಂಬುದನ್ನು ಇನ್ನು ಅಂದಾಜಿಸಲು ಸಾಧ್ಯವಾಗಿಲ್ಲ. ಆದರೆ ಬಹುಭಾಷೆಯಲ್ಲಿ ಹಾಗೂ ಹೈ ಬಜೆಟ್​ನಲ್ಲಿ ಈ ಸಿನಿಮಾ ಮೂಡಿಬರಲಿದೆ ಎಂದು ತಿಳಿಸಿದರು.

Intro:ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ್ ಬಿಡುಗಡೆಗೆ ಸಿದ್ಧವಾಗಿದೆ. ಇನ್ನು ಇದೇ ಖುಷಿಯಲ್ಲಿ ತೇಲುತ್ತಿದ್ದ ಕಿಚ್ಚನ ಫ್ಯಾನ್ಸ್ ಗಳಿಗೆ ಈಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ. ಎಸ್ ಕಿಚ್ಚ ಸುದೀಪ್ ಈಗ ಕೋಟಿಗೊಬ್ಬ ಥ್ರೀ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ ಈಗಾಗಲೇ ಹಿಂದಿಯಲ್ಲಿ ದಬಾಂಗ್ ತ್ರಿ ಹಾಗೂ ತೆಲುಗಿನಲ್ಲಿ ಸೈರಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆದರೆ ಕಿಚ್ಚ ಕೋಟಿಗೊಬ್ಬ ತ್ರಿ ನಂತರ ಕನ್ನಡದಲ್ಲಿಬ ಯಾವ ಚಿತ್ರ ಮಾಡ್ತರೆ ಎಂಬ ಕುತೂಹಲ ಅವರ ಭಕ್ತಗಣ ದಲ್ಲಿತ್ತು. ರಂಗಿತರಂಗ ಹಾಗೂ ರಾಜ ರಥ ದಂತಹ ಸೂಪರ್ ಹಿಟ್ ಚಿತ್ರಗಳ ನಿರ್ದೇಶನ ಮಾಡಿದ್ದ ಅನು ಬಂಡಾರಿ ಜೊತೆ ಕಿಚ್ಚ ಸುದೀಪ್ ಬಿಲ್ಲ ರಂಗ ಭಾಷ ನಾಗಿ ಮೆರಿತಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅದಕ್ಕೂ ಮುಂಚೆ ಕಿಚ್ಚ ಸುದೀಪ್ ಅನು ಭಂಡಾರಿ ಕಾಂಬಿನೇಷನ್ನಲ್ಲಿ ಮತ್ತೊಂದು ಹೈ ಬಜೆಟ್ನ ಚಿತ್ರಕ್ಕೆ ಈಗಾಗಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Body:ಎಸ್ ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನು ಭಂಡಾರಿ ಕಾಂಬಿನೇಶನ್ ಬಿಲ್ಲ ರಂಗ ಬಾಷಾ ಚಿತ್ರಕ್ಕೆ ಮುಂಚೆ ಮತ್ತೊಂದು ಪ್ರಾಜೆಕ್ಟ್ನಲ್ಲಿ ಜೋಡಿ ಒಂದಾಗಲಿದ್ದಾರೆ. ಅಲ್ಲದೆ ಈಗಾಗಲೇ ಚಿತ್ರದ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದ್ದು ಚಿತ್ರದ ಕಥೆಗೆ ಕಿಚ್ಚ ಫುಲ್ ಎಂಪ್ರೆಸ್ ಆಗಿದ್ದಾರಂತೆ.ಎಸ್ ಇನ್ನೂ ಈ ವಿಷಯವನ್ನು ನಿರ್ದೇಶಕ ಅನು ಭಂಡಾರಿ ತಿಳಿಸಿದ್ದಾರೆ. ಬಿಲ್ಲ ರಂಗ ಬಾಷಾ ಚಿತ್ರಕ್ಕೂ ಮುಂಚೆ ಸುದೀಪ್ ಅವರ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿದ್ದೇವೆ. ಬಿಲ್ಲ ರಂಗ ಬಾಷಾ ಸುದೀಪ್ ಅವರ ಬ್ಯಾನರ್ ನಲ್ಲಿ ಮೂಡಿಬರಲಿದೆ. ಆದರೆ ಈ ಹೊಸ ಚಿತ್ರವನ್ನು ನಿರ್ಮಾಪಕ ಜಾಕ್ ಮಂಜು ಅವರು ನಿರ್ಮಾಣ ಮಾಡಲಿದ್ದು ದಬಾಂಗ್ 3 ಕೋಟಿಗೊಬ್ಬ 3 ಚಿತ್ರದ ನಂತರ ಈ ಸಿನಿಮಾ ಸೆಟ್ಟೇರಲಿದೆ. ಇನ್ನು ಕಿಚ್ಚ ಸುದೀಪ್ ಅವರ ಸ್ಟಾರ್ ಡಂ ಗೆ ಬೇಕಾದ ಅಂಶಗಳು ಈ ಚಿತ್ರದಲ್ಲಿದೆ. ಅಲ್ಲದೆ ಕಿಚ್ಚ ಸುದೀಪ್ ಸರ್ ಅವರು ಈ ಮುಂಚೆ ಅಭಿನಯಿಸಿದ ಪಾತ್ರದಲ್ಲಿ ಸುದೀಪ್ ಅವರು ಕಾಣಿಸಲಿದ್ದಾರೆ. ಸುದೀಪ್ ಅವರ ಪಾತ್ರ ಬರೆಯುವಾಗ ನನಗೆ ತುಂಬಾ ಇಷ್ಟವಾಯ್ತು.ಅಲ್ಲದೆ ಸುದೀಪ್ ಅವರು ಸಹ ಪಾತ್ರವನ್ನು ತುಂಬಾ ಮೆಚ್ಚಿದ್ದಾರೆ .ಈಡಿ ಚಿತ್ರತಂಡ ತುಂಬಾ ಎಕ್ಸೈಟ್ ಆಗಿ ಈ ಚಿತ್ರಕ್ಕೆ ಕಾಯುತ್ತಿದ್ದೇವೆ. ಅಲ್ಲದೆ ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು. ಚಿತ್ರಕ್ಕೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ ಅಲ್ಲದೆ ಸುದೀಪ್ ಅವರ ಈಗಿನ ಮಾರ್ಕೆಟ್ ನೋಡಿದರೆ ನಾವು ಎಷ್ಟು ಭಾಷೆಯಲ್ಲಿ ಸಿನಿಮಾ ಮಾಡುತ್ತೇವೆ ಎಂಬುದನ್ನು ಇನ್ನು ಅಂದಾಜಿಸಲು. ಆದರೆ ಮಲ್ಟಿ ಲ್ಯಾಂಗ್ವೇಜ್ ನಲ್ಲಿ ಹೈ ಬಜೆಟ್ ನಲ್ಲಿ ಈ ಸಿನಿಮಾ ಮೂಡಿಬರಲಿದೆ ಎಂದು ನಿರ್ದೇಶಕ ಅನೂಪ್ ಭಂಡಾರಿ ತಿಳಿಸಿದರು..

ಸತೀಶ ಎಂಬಿ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.