ಸ್ಟಾರ್ ನಟರ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಅಪ್ಪಂದಿರ ಜೊತೆ ಸ್ಕ್ರೀನ್ ಶೇರ್ ಮಾಡುವುದು ಹೊಸತೇನಲ್ಲ. ಪುನೀತ್ ರಾಜ್ಕುಮಾರ್ 6 ತಿಂಗಳ ಮಗುವಾಗಿರುವಾಗಲೇ ತಮ್ಮ ತಂದೆ ಡಾ. ರಾಜ್ ಜೊತೆ 'ಪ್ರೇಮದ ಕಾಣಿಕೆ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಗೋಲ್ಡನ್ ಸ್ಟಾರ್ ಪುತ್ರ ವಿಹಾನ್ ಸರದಿ.
ವಿಹಾನ್ 'ಗೀತಾ' ಚಿತ್ರದಲ್ಲಿ ಅಪ್ಪನ ಜೊತೆ ಯಾವುದೇ ಭಯ ಇಲ್ಲದೆ ಕ್ಯಾಮರಾ ಮುಂದೆ ನಿಂತು ಪೋಸ್ ಕೊಟ್ಟಿದ್ದಾನೆ. ಸಿನಿಮಾದಲ್ಲಿ ಈ ಪೋರ, ಗೆಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾನೆ. ಈಗಾಗಲೇ ಶೂಟಿಂಗ್ನಲ್ಲಿ ಭಾಗವಹಿಸಿರುವ ವಿಹಾನ್ ಫೋಟೋಗಳನ್ನು ಗಣೇಶ್ ಸೋಷಿಯಲ್ ಮೀಡಿಯಾದಲ್ಲಿ ಷೇರ್ ಮಾಡಿ ಖುಷಿ ಹಂಚಿಕೊಂಡಿದ್ದಾರೆ. 'ಗೀತಾ' ಚಿತ್ರದಲ್ಲಿ ಗಣೇಶ್ಗೆ ನಾಯಕಿಯಾಗಿ ಮಲಯಾಳಂ ನಟಿ ಪಾರ್ವತಿ ಅರುಣ್ ನಟಿಸಿದ್ದಾರೆ. ವಿಜಯ್ ನಾಗೇಂದ್ರ ಸಿನಿಮಾವನ್ನು ನಿರ್ದೇಶಿಸುತ್ತಿದ್ದು, ಸೈಯದ್ ಸಲಾಂ ಬಂಡವಾಳ ಹೂಡಿದ್ದಾರೆ.
-
My son Vihaan in front of camera for movie #Geetha #debut #cameo 🎉🎉🎉 pic.twitter.com/YpRG5fnKlT
— Ganesh (@Official_Ganesh) April 11, 2019 " class="align-text-top noRightClick twitterSection" data="
">My son Vihaan in front of camera for movie #Geetha #debut #cameo 🎉🎉🎉 pic.twitter.com/YpRG5fnKlT
— Ganesh (@Official_Ganesh) April 11, 2019My son Vihaan in front of camera for movie #Geetha #debut #cameo 🎉🎉🎉 pic.twitter.com/YpRG5fnKlT
— Ganesh (@Official_Ganesh) April 11, 2019