ಇಂದು ಗೋಲ್ಡನ್ ಸ್ಟಾರ್ ಗಣೇಶ್ ಹುಟ್ಟಿದ ದಿನ. ಗಣೇಶ್ ಹುಟ್ಟುಹಬ್ಬಕ್ಕೆ ಬಹಳಷ್ಟು ಸೆಲಬ್ರಿಟಿಗಳು, ಸ್ನೇಹಿತರು ಶುಭ ಕೋರಿದ್ದಾರೆ. ಆದರೆ ಗಣೇಶ್ ಈ ಬಾರಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ.
-
🙏🙏🙏 pic.twitter.com/odlV9Cl0Qz
— Ganesh (@Official_Ganesh) June 22, 2019 " class="align-text-top noRightClick twitterSection" data="
">🙏🙏🙏 pic.twitter.com/odlV9Cl0Qz
— Ganesh (@Official_Ganesh) June 22, 2019🙏🙏🙏 pic.twitter.com/odlV9Cl0Qz
— Ganesh (@Official_Ganesh) June 22, 2019
ಕಳೆದ ವರ್ಷ ಆಗಸ್ಟ್ 27 ರಂದು ಗಣೇಶ್ ತಂದೆ ರಾಮಕೃಷ್ಣಪ್ಪ ಅನಾರೋಗ್ಯದ ಕಾರಣ ನಿಧನರಾದರು. ತಂದೆ ನಿಧನದ ನೋವಿನಲ್ಲಿರುವ ಗಣೇಶ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ಬಗ್ಗೆ ವಾರದ ಹಿಂದೆಯೇ ಗಣೇಶ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳ ಬಳಿ ಹೇಳಿಕೊಂಡಿದ್ದರು. 'ಕೆಲವು ದಿನಗಳ ಹಿಂದಷ್ಟೇ ತಂದೆಯನ್ನು ಕಳೆದುಕೊಂಡಿದ್ದೇನೆ. ಆದ ಕಾರಣ ಈ ಬಾರಿ ನಾನು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ನಾವು ಮನೆಯಲ್ಲಿ ಇರದ ಕಾರಣ ಅಭಿಮಾನಿಗಳು ದೂರದ ಊರಿನಿಂದ ಬಂದು ನನಗಾಗಿ ಕಾದು ನಿರಾಶರಾಗಬೇಡಿ' ಎಂದು ಮನವಿ ಮಾಡಿದ್ದರು.
-
#ಗೀತಾ pic.twitter.com/M5JJShvyff
— Ganesh (@Official_Ganesh) June 29, 2019 " class="align-text-top noRightClick twitterSection" data="
">#ಗೀತಾ pic.twitter.com/M5JJShvyff
— Ganesh (@Official_Ganesh) June 29, 2019#ಗೀತಾ pic.twitter.com/M5JJShvyff
— Ganesh (@Official_Ganesh) June 29, 2019
ಇನ್ನು ಗಣೇಶ್ ಹುಟ್ಟುಹಬ್ಬದ ಅಂಗವಾಗಿ 'ಗೀತಾ' ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಶಿಲ್ಪಾ ಗಣೇಶ್ ಹಾಗೂ ಸೈಯ್ಯದ್ ಸಲಾಂ ಈ ಚಿತ್ರವನ್ನು ನಿರ್ಮಿಸಿದ್ದು ವಿಜಯ ನಾಗೇಂದ್ರ ಸಿನಿಮಾವನ್ನು ನಿರ್ದೇಶಿಸಿದ್ದಾರೆ.