ETV Bharat / sitara

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗಿರೀಶ್​ ಕಾಸರವಳ್ಳಿ ಸಿನಿಮಾಗಳು ಆನ್​​​​ಲೈನ್​​ನಲ್ಲಿ ಲಭ್ಯ

author img

By

Published : Jul 28, 2020, 4:05 PM IST

ಡಾ. ಗಿರೀಶ್ ಕಾಸರವಳ್ಳಿ ನಿರ್ದೇಶನದ ಮೂರು ಖ್ಯಾತ ಸಿನಿಮಾಗಳು ಆನ್​ಲೈನ್​ನಲ್ಲಿ ಲಭ್ಯವಿದ್ದು ಸಿನಿಮಾಪ್ರಿಯರು ಯಾವುದೇ ಶುಲ್ಕ ನೀಡದೆ ಈ ಸಿನಿಮಾಗಳನ್ನು ಆಗಸ್ಟ್​ 2 ವರೆಗೆ ವೀಕ್ಷಿಸಬಹುದಾಗಿದೆ.

Girish Kasaravalli
ಗಿರೀಶ್​ ಕಾಸರವಳ್ಳಿ

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ, ವಿದೇಶಗಳಲ್ಲೂ ಹೆಸರು ಗಳಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ. ಗಿರೀಶ್ ಕಾಸರವಳ್ಳಿ ನಿರ್ದೇಶಿಸಿರುವ ಮೂರು ಅತ್ಯುತ್ತಮ ಚಿತ್ರಗಳು ಈಗ ಆನ್​​​​​​​​​​​ಲೈನ್​​ನಲ್ಲಿ ಲಭ್ಯವಿದೆ. ಜುಲೈ 27 ರಿಂದ ಆಗಸ್ಟ್​​ 2 ವರೆಗೆ ಯಾವುದೇ ರಿಜಿಸ್ಟ್ರೇಷನ್ ಇಲ್ಲದೆ, ಪಾಸ್​​​ವರ್ಡ್​ ಇಲ್ಲದೆ ಎಲ್ಲಕ್ಕಿಂತ ಹೆಚ್ಚಾಗಿ ಹಣ ನೀಡದೆ ಯಾವಾಗಲಾದರೂ ನೀವು ಈ ಸಿನಿಮಾಗಳನ್ನು ನೋಡಬಹುದು.

ಘಟಶ್ರಾದ್ಧ

Girish Kasaravalli
ಘಟಶ್ರಾದ್ಧ

1977 ರಲ್ಲಿ ಬಿಡುಗಡೆಯಾದ ಈ ಸಿನಿಮಾ ಯು.ಆರ್. ಅನಂತಮೂರ್ತಿ ಅವರು ಬರೆದ ಕಥೆಯನ್ನು ಒಳಗೊಂಡಿದೆ. ಚಿತ್ರವನ್ನು ಸದಾನಂದ ಸುವರ್ಣ ನಿರ್ಮಿಸಿದ್ದರು. ಈ ಚಿತ್ರಕ್ಕೆ ಸ್ವರ್ಣಕಮಲ ಪ್ರಶಸ್ತಿ ಲಭಿಸಿದೆ.

ತಾಯಿ ಸಾಹೇಬ

Girish Kasaravalli
ಜಯಮಾಲ

ಶ್ರೀ ಸೌಂದರ್ಯ ಆರ್ಟ್ಸ್​​ ಬ್ಯಾನರ್ ಅಡಿಯಲ್ಲಿ ಜಯಮಾಲ ಈ ಚಿತ್ರವನ್ನು ನಿರ್ಮಿಸಿ ನಟಿಸಿದ್ದರು. 1997 ರಲ್ಲಿ ಬಿಡುಗಡೆಯಾದ ಈ ಸಿನಿಮಾ ರಂಗನಾಥ್ ಶ್ಯಾಮರಾವ್ ಲೋಕಾಪುರ ಅವರ ಕಾದಂಬರಿ ಆಧಾರಿತ ಚಿತ್ರ. ಈ ಚಿತ್ರಕ್ಕೆ ರಾಷ್ಟ್ರಪಶಸ್ತಿ ಲಭಿಸಿದೆ.

ಕನಸೆಂಬೋ ಕುದುರೆಯನೇರಿ

Girish Kasaravalli
ಕನಸೆಂಬೋ ಕುದುರೆಯನೇರಿ

ವೈಜನಾಥ್ ಬಿರಾದಾರ್, ಉಮಾಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ ಸಿನಿಮಾ 2010 ರಲ್ಲಿ ಸಿಲ್ವರ್ ಲೋಟಸ್​ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ಈ ಸಿನಿಮಾ ಇಟಲಿ, ಫ್ರಾನ್ಸ್ ಹಾಗೂ ಇನ್ನಿತರ ದೇಶಗಳಲ್ಲಿ ಕೂಡಾ ಬಿಡುಗಡೆಯಾಗಿ ಉತ್ತಮ ಪ್ರಶಂಸೆ ಗಳಿಸಿತ್ತು. ಚಿತ್ರವನ್ನು ಅಮೃತ ಪಾಟೀಲ್ ಹಾಗೂ ಬಸಂತ್ ಕುಮಾರ್ ಪಾಟೀಲ್ ನಿರ್ಮಿಸಿದ್ದರು.

ಇದರೊಂದಿಗೆ ಜುಲೈ 31 ರಂದು ಸಂಜೆ 5 ಕ್ಕೆ ಡಾ. ಗಿರೀಶ್ ಕಾಸರವಳ್ಳಿ ಅವರೊಂದಿಗೆ ಸಂವಾದ ಕಾರ್ಯಕ್ರಮ ಕೂಡಾ ಏರ್ಪಡಿಸಲಾಗಿದೆ. ಖ್ಯಾತ ವಿಮರ್ಶಕ ಪ್ರೊ. ಮನು ಚಕ್ರವತಿ ಈ ಸಂವಾದದಲ್ಲಿ ನಿರೂಪಕರಾಗಿ ಭಾಗವಹಿಸಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.