ETV Bharat / sitara

ಗಜಾನನ &​ ಗ್ಯಾಂಗ್ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್​

ಶ್ರೀ ಮಹಾದೇವ್ ಹಾಗೂ ಅದಿತಿ ಪ್ರಭುದೇವ ಅಭಿನಯದ ಗಜಾನನ ಆ್ಯಂಡ್​ ಗ್ಯಾಂಗ್ ಸಿನಿಮಾ ಫೆಬ್ರವರಿ 4ರಂದು‌ ಬಿಡುಗಡೆಯಾಗಲಿದೆ.

author img

By

Published : Dec 30, 2021, 6:15 PM IST

gajanana and gang will be released on February fourth
ಫೆ. 4ರಂದು ಬಿಡುಗಡೆಯಾಗಲಿದೆ ಗಜಾನನ &​ ಗ್ಯಾಂಗ್ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಾಯಕನಾಗಿ ಗುರುತಿಸಿಕೊಂಡಿರುವ ಶ್ರೀ ಮಹಾದೇವ್ ಹಾಗೂ ಶ್ಯಾನೇ ಟಾಪಾಗಿರುವ ನಟಿ ಅದಿತಿ ಪ್ರಭುದೇವ ಅಭಿನಯದ ಗಜಾನನ ಆ್ಯಂಡ್​ ಗ್ಯಾಂಗ್ ಸಿನಿಮಾ ಟ್ರೇಲರ್ ಹಾಗೂ ಸಾಂಗ್ಸ್​​ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಹುಟ್ಟಿಸಿದೆ.

ಸತತ ಎರಡು ವರ್ಷಗಳ ಪರಿಶ್ರಮದಿಂದ ರೆಡಿಯಾಗಿರೋ ಗಜಾನನ ಆ್ಯಂಡ್ ಗ್ಯಾಂಗ್ ಸಿನಿಮಾ ಬಿಗ್ ಸ್ಕ್ರೀನ್ ಮೇಲೆ ಮಿಂಚೋದಕ್ಕೆ ಸಜ್ಜಾಗಿದೆ. ಫೆಬ್ರವರಿ 4ರಂದು‌ ಬೆಳ್ಳಿತೆರೆಗೆ ಗಜಾನನ ಗ್ಯಾಂಗ್ ಎಂಟ್ರಿ‌ ಕೊಡಲಿದೆ.

gajanana and gang will be released on February fourth
ಗಜಾನನ &​ ಗ್ಯಾಂಗ್

'ಗಜಾನನ ಆ್ಯಂಡ್​​ ಗ್ಯಾಂಗ್' ಟೈಟಲೇ ಹೇಳುವಂತೆ ಕಾಲೇಜ್ ಕಥೆಯಾಧಾರಿತ ಸಿನಿಮಾ. ಕಾಮಿಡಿ, ಸೆಂಟಿಮೆಂಟ್ ಕೂಡ ಸಿನಿಮಾದಲ್ಲಿದೆ. ಇದರಲ್ಲಿ ಶ್ರೀ ಮಹಾದೇವ್ ಎರಡು ಶೇಡ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಗಜ ಎಂಬ ಪಾತ್ರದಲ್ಲಿ ಶ್ರೀ ಮಹಾದೇವ್ ನಟಿಸಿದ್ರೆ, ಅದಿತಿ ಪ್ರಭುದೇವ ಮಿಡಲ್ ಕ್ಲಾಸ್ ಕಾಲೇಜು ಹುಡುಗಿಯಾಗಿ ಮಿಂಚಲಿದ್ದಾರೆ. ನಮ್ ಗಣಿ ಬಿಕಾಂ ಪಾಸ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ನಾಯಕ ಮತ್ತು ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ್ದ ನಟ ಅಭಿಷೇಕ್ ಶೆಟ್ಟಿ ‘ಗಜಾನನ ಆ್ಯಂಡ್ ಗ್ಯಾಂಗ್’ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ: 'ಲವ್ ಯು ರಚ್ಚು' ಚಿತ್ರ ವೀಕ್ಷಣೆ.. ಸ್ಯಾಂಡಲ್​ವುಡ್ ತಾರೆಯರಿಂದ ಮೆಚ್ಚುಗೆಯ ಮಾತು

ನಿರ್ದೇಶಕ ಅಭಿಷೇಕ್ ಶೆಟ್ಟಿ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಬಿಗ್ ಬಾಸ್ ಖ್ಯಾತಿಯ ರಘು ಗೌಡ, ಚೇತನ್ ದುರ್ಗ, ನಾಟ್ಯ ರಂಗ, ಅಶ್ವಿನ್ ಹಾಸನ್ ಹಾಗೂ ಶಮಂತ್ ಬ್ರೋ ಗೌಡ ಹಾಗು ಮಳ್ಳವಳ್ಳಿ ಕಾರ್ತಿಕ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಬೃಂದಾವನ್ ಎಂಟರ್ ಪ್ರೈಸಸ್ ಅಡಿಯಲ್ಲಿ ಯುಎಸ್ ನಾಗೇಶ್ ಕುಮಾರ್ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಪ್ರದ್ಯುತನ್ ಮ್ಯೂಸಿಕ್​, ಉದಯ ಲೀಲಾ ಕ್ಯಾಮರಾ ವರ್ಕ್, ವಿಜೆಟ್ ಚಂದ್ರ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.