ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಮೊದಲ ಮೂರು ತಿಂಗಳು ಹೊಸಬರ ಹಾಗೂ ಹಳಬರ ನಡುವೆ ಪೈಪೋಟಿ ಚೆನ್ನಾಗಿ ಆಗಿದೆ. ಆದರೆ, ಚಿತ್ರದ ಯಶಸ್ಸಿನ ವಿಚಾರಕ್ಕೆ ಬಂದರೆ ಬಿಡುಗಡೆಯಾದ 55 ಸಿನಿಮಾಗಳಲ್ಲಿ ಗೆದ್ದವು ಕೇವಲ 7 ಚಿತ್ರಗಳು ಮಾತ್ರ.
ಮೊದಲ ಮೂರು ತಿಂಗಳುಗಳಲ್ಲಿ ಗೆದ್ದ ಸಿನಿಮಾಗಳು ಬೀರಬಲ್, ಸೀತಾರಾಮ ಕಲ್ಯಾಣ, ನಟಸಾರ್ವಭೌಮ, ಬೆಲ್ ಬಾಟಮ್, ಕೆಮಿಸ್ಟ್ರಿ ಆಫ್ ಕರಿಯಪ್ಪ, ಯಜಮಾನ ಹಾಗೂ ಪಂಚತಂತ್ರ.
55 ಸಿನಿಮಾಗಳಲ್ಲಿ 7 ಕನ್ನಡ ಸಿನಿಮಗಳು ಗೆದ್ದಿದೆ ಅನ್ನುವುದು ಸಂತೋಷದಾಯಕವಲ್ಲ. ಅನೇಕ ಸಿನಿಮಗಳು ಮೊದಲ ಪ್ರದರ್ಶನದ ನಂತರ ಪ್ರೇಕ್ಷಕರ ಕೊರತೆ ಎದ್ದು ಕಾಣುತಿತ್ತು.ಮಾರ್ಚ್ನಲ್ಲೇ 26 ಸಿನಿಮಗಳು ಬಿಡುಗಡೆ ಆಗಿವೆ. ಇದು ಜಾಸ್ತಿ ಆಯಿತು ಅನ್ನೋ ಹಾಗಿಲ್ಲ. ಯಾಕಂದ್ರೆ ಕನ್ನಡ ಚಿತ್ರಗಳ ಬಿಡುಗಡೆ ಬಗ್ಗೆ ಯಾರಿಗೆ ಯಾವುದೇ ಕಂಟ್ರೋಲ್ ಇಲ್ಲವೇ ಇಲ್ಲದಂತಾಗಿದೆ. ವಾಣಿಜ್ಯ ಮಂಡಳಿ ಮಾತುಗಳನ್ನು ನಿರ್ಮಾಪಕರು ಕೇಳುತ್ತಿಲ್ಲ. ಬದಲಾಗಿ ಅವರ ಜ್ಯೋತಿಷಿ ಹೇಳಿದ ಮಾತುಗಳನ್ನು ಕೇಳುವವರು ಜಾಸ್ತಿ.
3 ತಿಂಗಳುಗಳಲ್ಲಿ ಬಿಡುಗಡೆಯಾದ ಸಿನಿಮಾಗಳ ಪಟ್ಟಿ
ಆಡುವ ಗೊಂಬೆ, ಫಾರ್ಚ್ಯುನರ್, ಬೆಸ್ಟ್ ಫ್ರೆಂಡ್ಸ್, ಪ್ರಸ್ಥ, ಗಿಣಿ ಹೇಳಿದ ಕಥೆ, ಲಂಬೋದರ, ಬೀರಬಲ್, ಲಾಕ್, ಮಿಸ್ಡ್ ಕಾಲ್, ಸೀತಾರಾಮ ಕಲ್ಯಾಣ, ಅನುಕ್ತ, ಸಪ್ಪ್ಲಿಮೆಂಟರಿ, ಅಟ್ಟಯ್ಯ ಹಂದಿ ಕಾಯೋಳು, ಬಜಾರ್, ಭೂತಕಾಲ, ಮಾಟ್ಯಾಶ್, ತ್ರಯೋದಶ, ನಟಸಾರ್ವಭೌಯ, ಸರ್ವಜ್ಞ ಮತ್ತೊಮ್ಮೆ ಹುಟ್ಟಿ ಬಾ, ಬೆಲ್ ಬಾಟಮ್, ಕೆಮಿಸ್ಟ್ರಿ ಆಫ್ ಕರಿಯಪ್ಪ, ಗಹನ, ಚಂಬಲ್, ಕದ್ದು ಮುಚ್ಚಿ, ಕಾಲ್ಬೆಟ್ಟದ ದರೋಡೆಕೊರರು, ಸ್ತ್ರೈಕರ್, ಯಾರಿಗೆ ಯಾರುಂಟು, ಅಮ್ಮನ ಮನೆ, ಗೂಸಿ ಗ್ಯಾಂಗ್, ಇಬ್ಬರು ಬಿ ಟೆಕ್ ಸ್ಟೂಡೆಂಟ್ಸ್ ಜರ್ನಿ, ಮದ್ವೆ, ಒಂದ್ ಕಥೆ ಹೆಳ್ಲಾ, ಅರಬ್ಬೀ ಕಡಲ ತೀರದಲ್ಲಿ, ಫೇಸ್ ಟು ಫೇಸ್, ಡಿ ಕೆ ಬೋಸ್, ಗಿರ್ಗಿಟ್ಲೆ, ನಾನು ನಮ್ ಹುಡ್ಗಿ ಖರ್ಚಿಗೊಂದ್ ಮಾಫಿಯಾ, ಅಡಚಣೆಗಾಗಿ ಕ್ಷಮಿಸಿ, ಬದ್ರಿ ವರ್ಸಸ್ ಮಧುಮತಿ, ಚಾಣಾಕ್ಷ, ಮಿಸ್ಸಿಂಗ್ ಬಾಯ್, ರಾಜಣ್ಣನ ಮಗ, ಉದ್ಘರ್ಷ, ಧರ್ಮಪುರ, ಗಂಧದ ಕುಡಿ, ಹನಿಗಳು ಎನನೋ ಹೇಳುತಿದೆ, ಪಂಚತಂತ್ರ, ರಣರಣಕ, ರವಿ ಹಿಸ್ಟರೀ, ರಗಡ್, ಯದಾ ಯದಾ ಹಿ ಧರ್ಮಸ್ಯ.