ETV Bharat / sitara

ಮಾರ್ಚ್​ನಲ್ಲಿ ತೆರೆ ಕಾಣುತ್ತಿದೆ ಕನ್ನಡದ ಮೊದಲ ಕ್ರೀಡಾ ಚಿತ್ರ 'ಪಂಚತಂತ್ರ' - undefined

ಯೋಗರಾಜ್​ಭಟ್ ನಿರ್ದೇಶನದ ಪಂಚತಂತ್ರ ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದ್ದು ಸಿನಿಮಾ ಮಾರ್ಚ್​ನಲ್ಲಿ ಬಿಡುಗಡೆಯಾಗುತ್ತಿದೆ. ಇಂದು ಚಿತ್ರತಂಡ ಮಂಗಳೂರಿನಲ್ಲಿ ಟ್ರೇಲರ್ ಬಿಡುಗಡೆ ಮಾಡಿದೆ.

ವಿಹಾನ್, ಸೋನಲ್
author img

By

Published : Feb 19, 2019, 3:25 PM IST

ಮಂಗಳೂರು: ದಶಕಗಳ ಹಿಂದೆ 'ಮುಂಗಾರು ಮಳೆ' ಸಿನಿಮಾವನ್ನು ಸ್ಯಾಂಡಲ್​​ವುಡ್​​ಗೆ ನೀಡಿ ಇತಿಹಾಸ ಸೃಷ್ಟಿಸಿದ್ದ ಯೋಗರಾಜ್ ಭಟ್ 'ಪಂಚತಂತ್ರ' ಸಿನಿಮಾವನ್ನು ಕನ್ನಡದಲ್ಲಿ ಮೊದಲ‌ ಬಾರಿಗೆ ಕ್ರೀಡಾ ಚಿತ್ರವಾಗಿ ನಿರ್ಮಿಸಿ ಚಿತ್ರರಸಿಕರಿಗೆ ಉಣಬಡಿಸುತ್ತಿದ್ದಾರೆ.

'ಪಂಚತಂತ್ರ' ಸಿನಿಮಾ ಮಾರ್ಚ್​ನಲ್ಲಿ ತೆರೆಗೆ ಬರಲಿದೆ. ಈ ಚಿತ್ರದ ಟ್ರೇಲರನ್ನು ಇಂದು ಮಂಗಳೂರಿನ ಬಿಗ್ ಸಿನಿಮಾದಲ್ಲಿ ಬಿಡುಗಡೆ ಮಾಡಲಾಯಿತು.
ಮೂಲತಃ ಕರಾವಳಿಯವರೇ ಆಗಿರುವ ಯೋಗರಾಜ್ ಭಟ್ ಅವರು ಈ ಚಿತ್ರದ ಮೂಲಕ ಹಲವು ಮಂದಿ ಕರಾವಳಿಯವರನ್ನು ಪರಿಚಯಿಸಿದ್ದಾರೆ. ಈ ಕಾರಣದಿಂದಲೇ ಮಂಗಳೂರಿನಲ್ಲಿ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಿದ್ದಾರೆ.

ಪಂಚತಂತ್ರ ಟ್ರೇಲರ್ ಬಿಡುಗಡೆ ಸಮಾರಂಭ
undefined

'ಪಂಚತಂತ್ರ' ಚಿತ್ರ ಯುವ ಪೀಳಿಗೆ ಮತ್ತು ವಯಸ್ಸಾದವರ ನಡುವಿನ ಚಕಮಕಿಗಳ ಸುತ್ತ ಸುತ್ತುತ್ತದೆ. ಈಗಿನ ಶರವೇಗದ ಯುವಪೀಳಿಗೆಯ ಮನಸ್ಸಿನ ಆಸೆ ಮತ್ತು ಭಾವನೆಗಳನ್ನು ಹೇಳುವ ಜೊತೆಗೆ ಪ್ರೀತಿ, ಸಂಬಂಧಗಳು ಮತ್ತು ಚುರುಕು ಮುಟ್ಟಿಸುವ ಹಾಸ್ಯ ಪ್ರಸಂಗಗಳ ಜೊತೆಗೆ ಎರಡು ಗುಂಪುಗಳ ‌ನಡುವಿನ ಭೂ ವಿವಾದ ಈ ಎಲ್ಲಾ ಅಂಶಗಳು ಚಿತ್ರದಲ್ಲಿ ಅಡಗಿದೆ ಎಂದು ಯೋಗರಾಜ್ ಭಟ್ ಹೇಳುತ್ತಾರೆ.

ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಾಣದಂತ ಅತಿ ದೊಡ್ಡ ಕಾರ್ ರೇಸ್ ಈ ಚಿತ್ರದಲ್ಲಿರುವುದರಿಂದ ಈ ಚಿತ್ರ ಸ್ಪೋರ್ಟ್ಸ್ ಫಿಲ್ಮ್ ಕೂಡಾ ಆಗಿದೆ. ಕನ್ನಡದಲ್ಲಿ ಈ ರೀತಿಯ ಚಿತ್ರ ತಯಾರಾಗಿರುವುದು ಇದೇ ಮೊದಲು. ಚಿತ್ರದಲ್ಲಿ ನಾಯಕನಾಗಿ ವಿಹಾನ್ ( ಕಾರ್ತಿಕ್), ನಾಯಕಿಯಾಗಿ ಸೋನಲ್, ಅಕ್ಷರ, ರಂಗಾಯಣ ರಘು, ಬಾಲರಜವಾಡಿ, ದೀಪಕ್ ಮೊದಲಾದವರು ನಟಿಸಿದ್ದಾರೆ.

Intro:ಮಂಗಳೂರು: ದಶಕಗಳ ಹಿಂದೆ ಮುಂಗಾರು ಮಳೆ ಸಿನಿಮಾ ನೀಡಿ ಇತಿಹಾಸ ಸೃಷ್ಟಿಸಿದ ಯೋಗರಾಜ್ ಭಟ್ ಅವರು ಪಂಚತಂತ್ರ ಸಿನಿಮಾವನ್ನು ಕನ್ನಡದಲ್ಲಿ ಮೊದಲ‌ಬಾರಿಗೆ ಕ್ರೀಡಾಚಿತ್ರವಾಗಿ ನಿರ್ಮಿಸಿ ಚಿತ್ರರಸಿಕರಿಗೆ ಉಣಬಡಿದಲಿದ್ದಾರೆ.

Body:ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ತಯಾರಾದ ಪಂಚತಂತ್ರ ಸಿನಿಮಾ ಮಾರ್ಚ್ ನಲ್ಲಿ ತೆರೆಗೆ ಬರಲಿದೆ. ಈ ಚಿತ್ರದ ಟ್ರೈಲರ್ ನ್ನು ಇಂದು ಮಂಗಳೂರಿನ ಬಿಗ್ ಸಿನಿಮಾದಲ್ಲಿ ಬಿಡುಗಡೆ ಮಾಡಲಾಯಿತು.
ಮೂಲತ ಕರಾವಳಿಯವರು ಆಗಿರುವ ಯೋಗರಾಜ್ ಭಟ್ ಅವರು ಈ ಚಿತ್ರದಲ್ಲಿ ಹಲವು ಮಂದಿ ಕರಾವಳಿಯವರನ್ನು ಪರಿಚಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.
ಪಂಚತಂತ್ರ ಚಿತ್ರ ಯುವ ಪೀಳಿಗೆ ಮತ್ತು ವಯಸ್ಸಾದವರ ನಡುವಿನ ಚಕಮಕಿಗಳ ಸುತ್ತ ಸುತ್ತುತ್ತದೆ. ಚಿತ್ರದಲ್ಲಿರುವ ಪ್ರೇಮಕಥೆಯು ಈಗಿನ ಶರವೃಗದ ಯುವಪೀಳಿಗೆಯ ಮನಸಿನ ಆಸೆ ಮತ್ತು ಭಾವನೆಗಳನ್ನು ಹೇಳುವ ಜೊತೆಗೆ ಪ್ರೀತಿ, ಸಂಬಂಧಗಳು ಮತ್ತು ಚುರುಕು ಮುಟ್ಟಿಸುವ ಹಾಸ್ಯ ಪ್ರಸಂಗಗಳ ಜೊತೆಗೆ ಎರಡು ಗುಂಪುಗಳ ‌ನಡುವಿನ ಭೂವಿವಾದ ಹೇಳುತ್ತದೆ ಎಂದು ಯೋಗರಾಜ್ ಭಟ್ ಹೇಳುತ್ತಾರೆ.
ಭಾರತೀಯ ಚಿತ್ರರಂಗದಲ್ಲಿ ಹಿಂದೆಂದೂ ಕಾಣದಿರುವಂತಹ ಅತಿ ದೊಡ್ಡ ಕಾರ್ ರೇಸ್ ಈ ಚಿತ್ರದಲ್ಲಿರುವುದರಿಂದ ಈ ಚಿತ್ರ ಸ್ಪೋರ್ಟ್ಸ್ ಫಿಲ್ಮ್ ಕೂಡ ಆಗಿದೆ. ಕನ್ನಡದಲ್ಲಿ ಈ ರೀತಿಯ ಚಿತ್ರ ಆಗಿರುವುದು ಇದೇ ಮೊದಲನೆಯದಾಗಿದೆ.
ಚಿತ್ರದಲ್ಲಿ ನಾಯಕನಾಗಿ ವಿಹಾನ್ ( ಕಾರ್ತಿಕ್), ನಾಯಕಿಯಾಗಿ ಸೋನಲ್, ಅಕ್ಷರ, ರಂಗಾಯಣ ರಘು, ಬಾಲರಜವಾಡಿ, ದೀಪಕ್ ಮೊದಲಾದವರು ನಟಿಸಿದ್ದಾರೆ.
ಯೋಗರಾಜ್ ಭಟ್ ನಿರ್ದೇಶಕರಾಗಿದ್ದು , ಹರಿಪ್ರಸಾದ್ ಜಯಣ್ಣ, ಹೇಮಂತ್ ಪರಾಡ್ಕರ್ ಸಿನಿಮಾದ ನಿರ್ಮಾಪಕರಾಗಿದ್ದಾರೆ. ಮಾಸ್ತಿ ಮತ್ತು ಕಾಂತರಾಜ್ ಬರೆದಿರುವ ಕಥೆಗೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಸುಜ್ಞಾನ್ ಛಾಯಾಗ್ರಹಣ ಮಾಡಿದರೆ ಇಮ್ರಾನ್ ಸರ್ದಾರಿಯ ನೃತ್ಯ ಮಾಡಿದ್ದಾರೆ. ಮಧು ತುಂಬಕೆರೆ ಸಂಕಲನ ಮತ್ತು ಜಾಲಿಬಾಸ್ಟನ್ ಮತ್ತು ವಿನೋದ್ ಅವರ ಸಾಹಸವಿದೆ.

Conclusion:ಕನ್ನಡದಲ್ಲಿ ಹೊಸ ಪ್ರಯತ್ನದಲ್ಲಿ ನಿರ್ಮಾಣವಾದ ಈ ಸಿನಿಮಾ‌ ಚಿತ್ರರಸಿಕರ ಕುತೂಹಲಕ್ಕೆ ಕಾರಣವಾಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.