ETV Bharat / sitara

ಪಾರ್ಕಿಂಗ್ ವಿಚಾರದಲ್ಲಿ ಅಂಗಡಿ ಮಾಲೀಕನೊಂದಿಗೆ ಗಲಾಟೆ: ರಿಯಾಲಿಟಿ ಶೋ ಸ್ಪರ್ಧಿ ರಜತ್ ವಿರುದ್ಧ ಕೇಸ್​ - ಬೆಂಗಳೂರು ಸುದ್ದಿ

ಅಂಗಡಿ ಮಾಲೀಕನೊಂದಿಗೆ ರಿಯಾಲಿಟಿ ಶೋ ಸ್ಪರ್ಧಿ ರಜತ್​ ಕೃಷ್ಣನ್​ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ‌ ಕೇಳಿಬಂದಿದೆ. ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ‌‌.

ರಜತ್
ರಜತ್
author img

By

Published : Feb 28, 2021, 1:32 PM IST

ಬೆಂಗಳೂರು: ಕಾರು ಪಾರ್ಕಿಂಗ್ ವಿಚಾರದಲ್ಲಿ ಅಂಗಡಿ ಮಾಲೀಕನ ಮೇಲೆ ರಿಯಾಲಿಟಿ ಶೋ ಸ್ಪರ್ಧಿವೋರ್ವ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ‌ ಕೇಳಿಬಂದಿದ್ದು, ಈ ಸಂಬಂಧ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ‌ ಪ್ರಕರಣ ದಾಖಲಾಗಿದೆ‌.

ಅಂಗಡಿ ಮಾಲೀಕ ಕಿರಣ್ ರಾಜ್ ನೀಡಿದ ದೂರಿನ ಮೇರೆಗೆ ಕನ್ನಡ ರಿಯಾಲಿಟಿ ಶೋ ಸ್ಪರ್ಧಿ ರಜತ್ ಕೃಷ್ಣನ್ ವಿರುದ್ಧ ಎಫ್ಐಆರ್ ದಾಖಲಾಗಿದೆ‌‌.

ಇದೇ ತಿಂಗಳು 26ರಂದು ಮಧ್ಯಾಹ್ನ ಬಸವೇಶ್ವರ ನಗರ ಸಾಣೆಗುರವನಹಳ್ಳಿ ಸರ್ಕಲ್ ಬಳಿ ಅಂಗಡಿಯೊಂದಕ್ಕೆ ಐಷಾರಾಮಿ ಕಾರಿನಲ್ಲಿ ಬಂದಿದ್ದಾರೆ. ಅಂಗಡಿ ಮುಂದೆ ಕಾರು ನಿಲ್ಲಿಸಿ ಸಿಗರೇಟು ಪಡೆದಿದ್ದಾರೆ. ಈ ವೇಳೆ ಕಾರು ನಿಲ್ಲಿಸಬೇಡಿ ಎಂದು ಕಿರಣ್ ರಾಜ್ ಹೇಳಿದ್ದರು. ಆಗ ರಜತ್​ ಐದು‌ ನಿಮಿಷದಲ್ಲಿ ಕಾರು ತೆಗೆಯುತ್ತೇನೆ ಎಂದಿದ್ದಾರೆ. ಸುಮಾರು ಅರ್ಧ ಗಂಟೆಯಾದರೂ ಅಂಗಡಿ ಮುಂದೆ ನಿಲ್ಲಿಸಿದ್ದ ಕಾರು ತೆಗೆಯದಿರುವುದನ್ನು ಕಂಡು ಮಾಲೀಕರು ಮತ್ತೆ ಪ್ರಶ್ನಿಸಿದ್ದಾರೆ‌‌.‌ ಇದಕ್ಕೆ ಅಸಮಾಧಾನಗೊಂಡ ರಜತ್​ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎನ್ನಲಾಗ್ತಿದೆ. ಬಳಿಕ ಅಂಗಡಿ ಬಳಿ ಬಂದು ದಾಂಧಲೆ ನಡೆಸಿ ಹಲ್ಲೆ‌ ಮಾಡಿದ್ದಾರೆ‌‌ ಎಂದು ಆರೋಪಿಸಿ ಕಿರಣ್ ರಾಜ್‌ ದೂರು ನೀಡಿದ್ದಾರೆ.

ರಜತ್ ಕನ್ನಡದ ಡ್ಯಾನ್ಸ್ ರಿಯಾಲಿಟಿ ಶೋ ಸ್ಪರ್ಧಿಯಾಗಿದ್ದರು. ಸದ್ಯ ಬಸವೇಶ್ವರನಗರ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.