ETV Bharat / sitara

ಸ್ಯಾಂಡಲ್​ವುಡ್​​​ನಲ್ಲಿ ಮಿಂಚಲು ರೆಡಿಯಾದ್ರು ಅಕ್ಷಿತ್​​​...ಇವರ ತಂದೆ ಕೂಡಾ ಖ್ಯಾತ ನಟ..! - Seetayana hero Akshit

80-90 ರ ದಶಕದಲ್ಲಿ ಸ್ಯಾಂಡಲ್​ವುಡ್​​​​​ನಲ್ಲಿ ನಂಬರ್ ಒನ್ ಹೀರೋ ಪಟ್ಟ ಅಲಂಕರಿಸಿದ್ದ ಸುಪ್ರೀಮ್ ಹೀರೋ ಶಶಿಕುಮಾರ್ ಪುತ್ರ ಅಕ್ಷಿತ್ 'ಸೀತಾಯಣ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದಿದ್ದಾರೆ.

Shashikumar son Akshit
ಅಕ್ಷಿತ್​​​
author img

By

Published : Aug 19, 2020, 4:52 PM IST

ಸ್ಯಾಂಡಲ್​​​​ವುಡ್​​ನಲ್ಲಿ ಸದ್ಯಕ್ಕೆ ಸ್ಟಾರ್ ನಟರ ಮಕ್ಕಳ ದರ್ಬಾರ್ ಜೋರಾಗಿದೆ. ಈಗಾಗಲೇ ಸ್ಟಾರ್ ಕುಟುಂಬದಿಂದ ಅನೇಕ ಪ್ರತಿಭೆಗಳು ಚಿತ್ರರಂಗಕ್ಕೆ ಬಂದಿದ್ದಾರೆ. ಇದೀಗ 80-90ರ ದಶಕದಲ್ಲಿ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಹೀರೋ ಆಗಿ ಮಿಂಚಿದ್ದ ಸುಪ್ರೀಮ್ ಹೀರೋ ಶಶಿಕುಮಾರ್ ಪುತ್ರ ಕೂಡಾ ಚಂದನವನಕ್ಕೆ ಬಂದಿದ್ದಾರೆ.

Shashikumar son Akshit
ಅಕ್ಷಿತ್ ಮೊದಲ ಚಿತ್ರ 'ಸೀತಾಯಣ'

ಶಶಿಕುಮಾರ್ ಪುತ್ರ ಅಕ್ಷಿತ್​​, 'ಸೀತಾಯಣ' ಚಿತ್ರದ ಮೂಲಕ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರಭಾಕರ್ ಆರಿಪಾಕರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. 'ಸೀತಾಯಣ' ಸಿನಿಮಾ ಶೂಟಿಂಗ್ ಮುಗಿಸಿ ಪೋಸ್ಟ್​ ಪ್ರೊಡಕ್ಷನ್ ಹಂತದಲ್ಲಿದೆ. ಈಗಾಗಲೇ ಚಿತ್ರದ ಪೋಸ್ಟರ್​​​ಗಳು ರಿವೀಲ್ ಆಗಿದ್ದು ಸಿನಿಪ್ರಿಯರಲ್ಲಿ ಅಕ್ಷಿತ್ ಆ್ಯಕ್ಟಿಂಗ್ ನೋಡಬೇಕೆಂಬ ಕುತೂಹಲ ಹೆಚ್ಚಾಗಿದೆ. ಸಿನಿಮಾ ಪಕ್ಕಾ ಲವ್ ಸ್ಟೋರಿ ಆಗಿದ್ದು ಅಕ್ಷಿತ್ ತೆರೆ ಮೇಲೆ ಲವರ್ ಬಾಯ್ ಆಗಿ ಮಿಂಚಲು ರೆಡಿಯಾಗಿದ್ದಾರೆ.

Shashikumar son Akshit
ಶಶಿ ಕುಮಾರ್

ಚಿತ್ರತಂಡ ಶೀಘ್ರವೇ ಟ್ರೇಲರ್ ರಿಲೀಸ್ ಮಾಡಲಿದೆ. ಲವ್ ಜೊತೆಗೆ ಚಿತ್ರದಲ್ಲಿ ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಅಂಶವಿದೆಯಂತೆ. ಚಿತ್ರವನ್ನು ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಭಾಷೆಗಳಲ್ಲೂ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದಲ್ಲಿ ಅಕ್ಷಿತ್​​​ಗೆ ನಾಯಕಿಯಾಗಿ ಅನಾಹಿತಾ ಭೂಷಣ್​​​​ ನಟಿಸಿದ್ದಾರೆ. ಇವರೊಂದಿಗೆ ವಿಕ್ರಮ್ ಶರ್ಮಾ, ಹಿತೇಶ್ ಶೆಟ್ಟಿ, ಶರ್ಮಿತಾ ಗೌಡ, ಮೇಘನಾ ಗೌಡ, ಅಜಯ್ ಘೋಷ್ ಹಾಗೂ ಇನ್ನಿತರರು ನಟಿಸಿದ್ದಾರೆ.

Shashikumar son Akshit
'ಸೀತಾಯಣ' ಮದುವೆ ದೃಶ್ಯ

ಚಿತ್ರಕ್ಕೆ ಪದ್ಮನಾಭ್ ಭಾರದ್ವಾಜ್​​​​ ಸಂಗೀತ ನೀಡಿದ್ದು, ಲಲಿತಾ ರಾಜಲಕ್ಷ್ಮಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸರ್ಕಾರ ಚಿತ್ರಮಂದಿರ ಓಪನ್ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟ ತಕ್ಷಣ ಭರ್ಜರಿ ಪ್ರಮೋಷನ್ ಮಾಡಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.